
ಚಂದ್ರನ ಮೇಲ್ಮೈ ಮೇಲೆ ಓಡಾಡುತ್ತಿರುವ ಪ್ರಜ್ಞಾನ್ ರೋವರ್ – ಹೊಸ ವಿಡಿಯೋ ಹಂಚಿಕೊಂಡ ಇಸ್ರೋ : ಚಂದ್ರನ ವಿಡಿಯೋ ಇಲ್ಲಿದೆ ನೋಡಿ…
- ಕೌತುಕ-ವಿಜ್ಞಾನ
- August 26, 2023
- No Comment
- 161
ನ್ಯೂಸ್ ಆ್ಯರೋ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ 3 ಯೋಜನೆ ಕುರಿತು ಹೊಸ ಮಾಹಿತಿಯೊಂದನ್ನ ನೀಡಿದ್ದು ಪ್ರಗ್ಯಾನ್ ರೋವರ್ ಚಟುವಟಿಕೆ ಬಗ್ಗೆ ಹೊಸ ವಿಡಿಯೋವನ್ನು ಶೇರ್ ಮಾಡಿದೆ.
ಪ್ರಗ್ಯಾನ್ ರೋವರ್ ಈಗಾಗಲೇ ಚಂದ್ರನ ಮೇಲೆ 8 ಮೀಟರ್‌ನಷ್ಟು ಚಲಿಸಿದ್ದು, ಚಂದ್ರನ ಮೇಲಿನ ಅಧ್ಯಯನವನ್ನು ಆರಂಭಿಸಿದೆ. “ಚಂದ್ರನ ದಕ್ಷಿಣ ಧ್ರುವದ ರಹಸ್ಯಗಳನ್ನು ಅಧ್ಯಯನ ಮಾಡುವ ನಿಮಿತ್ತ ರೋವರ್ ಸಂಚರಿಸುತ್ತಿದ್ದು, ‘ಶಿವಶಕ್ತಿ ಪಾಯಿಂಟ್’ ಸುತ್ತಲೂ ತಿರುಗುತ್ತಿದೆ ಎಂದು ಇಸ್ರೋ ಹೇಳಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಇಸ್ರೋ ಪ್ರಗ್ಯಾನ್ ರೋವರ್ ಚಲನಾ ಶಿಲ್ಪಾ ಕುರಿತು ಅಪ್ಡೇಟ್ಸ್ ಕೊಟ್ಟಿದ್ದು, ಈ ಶಿವಶಕ್ತಿ ಪಾಯಿಂಟ್ ಬಳಿ ರೋವರ್ ಪ್ರಜ್ಞಾನ್ ಓಡಾಟ ನಡೆಸಿ ದಕ್ಷಿಣ ಧ್ರುವದಲ್ಲಿ ಚಂದ್ರನ ಹಲವು ಕೌತುಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ ಎಂದು ತಿಳಿಸಿದೆ.
“ದಕ್ಷಿಣ ಧ್ರುವದಲ್ಲಿ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಶಿವಶಕ್ತಿ ಪಾಯಿಂಟ್‌ನ ಸುತ್ತಲೂ ಪ್ರಜ್ಞಾನ್ ರೋವರ್ ತಿರುಗುತ್ತಿದೆ’ ಎಂದು ಇಸ್ರೋ ಟ್ವಿಟರ್ ನಲ್ಲಿ ಬರೆದು ವಿಡಿಯೋವನ್ನು ಹಂಚಿಕೊಂಡಿದ್ದು ,40 ಸೆಕೆಂಡ್‌ಗಳ ವಿಡಿಯೋದಲ್ಲಿ ರೋವರ್ ಚಂದ್ರನ ಮೇಲ್ಮೈಯಲ್ಲಿ ಚಲಿಸುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಅದು ಚಲಿಸಿದ ಜಾಗದಲ್ಲಿ ಅದರ ಹೆಜ್ಜೆ ಗುರುತುಗಳೂ ಮೂಡಿವೆ.
ಇನ್ನು ಇಂದು ಇಸ್ರೋಗೆ ಭೇಟಿ ನೀಡಿದ ಪ್ರಧಾನಿ ಮೋದಿ ಲ್ಯಾಂಡರ್ ಆದ ಸ್ಥಳವನ್ನು ‘ಶಿವ ಶಕ್ತಿ ಪಾಯಿಂಟ್’ ಎಂದು ನಾಮಕರಣ ಮಾಡಿದ್ದು, ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದೂ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಘೋಷಿಸಿದ್ದಾರೆ.