
ಬಾಲಿವುಡ್ ಬಾದ್ ಷಾ ಮನೆಮುಂದೆ ಧರಣಿ, ಶಾರೂಖ್ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು – ಅಷ್ಟಕ್ಕೂ ಆಗಿದ್ದೇನು..?
- ಮನರಂಜನೆ
- August 26, 2023
- No Comment
- 56
ನ್ಯೂಸ್ ಆ್ಯರೋ : ಬಾಲಿವುಡ್ ನಟ ಶಾರೂಖ್ ಖಾನ್ ವಿರುದ್ಧ ಪ್ರತಿಭಟನೆ ಬುಗಿಲೆದ್ದಿದ್ದು ಅವರ ಮನ್ನತ್ ನಿವಾಸದೆದುರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಹೌದು.. ಕೆಲವೊಂದು ಆನ್ಲೈನ್ ಗೇಮ್ಸ್ ರಾಯಭಾರಿಯಾಗಿ ಜಾಹೀರಾತಿನಲ್ಲಿ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಕಾಣಿಸಿಕೊಂಡಿದ್ದು, ಇದನ್ನು ವಿರೋಧಿಸಿ ಮುಂಬೈನಲ್ಲಿರುವ ಶಾರುಖ್ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಶಾರೂಖ್ ಆನ್ ಲೈನ್ ಗೇಮಿಂಗ್ ಆಪ್ ಜಾಹೀರಾತು ಮಾಡಬಾರದು ಎಂದು ಆಗ್ರಹಿಸಿ ನೂರಾರು ಮಂದಿ ಅವರ ಮನೆ ಮುಂದೆ ಜಮಾಯಿಸಿ ಧರಣಿ ನಡೆಸಿದ್ದು, ಶಾರೂಖ್ ವಿರುದ್ಧ ಘೋಷಣೆ ಕೂಗಿದ್ದಾರೆ.
ಆನ್ ಲೈನ್ ಗೇಮಿಂಗ್ ಆಪ್ ಗಳು ಯುವಕರನ್ನು ತಪ್ಪು ದಾರಿಗೆಳೆಯುತ್ತಿವೆ. ಇದರಿಂದ ಹಲವಾರು ಅಪರಾಧಗಳು ನಡೆಯುತ್ತಿವೆ. ಹೀಗಾಗಿ ಸಿನಿಮಾ ತಾರೆಯರು ಈ ಆಪ್ ಗಳ ಜಾಹೀರಾತನ್ನು ಮಾಡಬಾರದು ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಲು ಹರಸಾಹಸ ಪಡುವಂಥ ಸ್ಥಿತಿ ನಿರ್ಮಾಣವಾಗಿತ್ತು ಎಂದು ತಿಳಿದು ಬಂದಿದ್ದು, ಶಾರುಖ್ ಮನೆಯ ಮುಂದೆ ಮುಂಬೈ ಪೊಲೀಸರ ದೊಡ್ಡ ದಂಡೇ ಹರಿದುಬಂದಿದೆ.