ಚಿತ್ರೀಕರಣದ ವೇಳೆ ನಟ ಅಮಿತಾಬ್‌ಗೆ ಗಾಯ: ‘ಜಲ್ಸಾ’ಮನೆಗೆ ಬರಬೇಡಿ ಎಂದಾ ಬಿಗ್‌ ಬಿ

ಚಿತ್ರೀಕರಣದ ವೇಳೆ ನಟ ಅಮಿತಾಬ್‌ಗೆ ಗಾಯ: ‘ಜಲ್ಸಾ’ಮನೆಗೆ ಬರಬೇಡಿ ಎಂದಾ ಬಿಗ್‌ ಬಿ

ನ್ಯೂಸ್‌ ಆ್ಯರೋ : ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್‌ ನ ಹಿರಿಯ ನಟ ಅಮಿತಾಬ್ ಬಚ್ಚನ್ ಬಿದ್ದು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ನಾಗ್ ಅಶ್ವಿನ್ ಅವರ ಮುಂಬರುವ ‘ಪ್ರಾಜೆಕ್ಟ್ ಕೆ’ ಚಿತ್ರೀಕರಣಕ್ಕೆ ಹೈದಾಬಾದ್‌ಗೆ ತೆರಳಿದ್ದರು. ಶೂಟಿಂಗ್‌ ಸಂದರ್ಭದಲ್ಲಿ ಗಾಯಗೊಂಡು, ವಿಶ್ರಾಂತಿ ಪಡೆದು ಚೇತರಿಸಿಕೊಳ್ಳುತ್ತಿದ್ದೇನೆ ಎಂದು ನಟ ಅಮಿತಾಬ್‌ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಪೋಸ್ಟ್‌ನಲ್ಲಿ ಏನು ಬರೆದುಕೊಂಡಿದ್ದಾರೆ. ‘ಹೈದರಾಬಾದ್‌ನಲ್ಲಿ ‘ಪ್ರಾಜೆಕ್ಟ್ ಕೆ’ ಚಿತ್ರೀಕರಣದ ಸಮಯದಲ್ಲಿ, ಆಕ್ಷನ್ ಶಾಟ್ ಸಮಯದಲ್ಲಿ ನಾನು ಗಾಯಗೊಂಡಿದ್ದೇನೆ. ಬಿದ್ದಾ ಏಟಿಗೆ ಪಕ್ಕೆಲುಬಿನ ಸ್ನಾಯುಗೆ ಹೊಡೆತ ಬಿದ್ದಿದೆ. ವೈದ್ಯರು ವಿಶ್ರಾಂತಿಯನ್ನು ಪಡೆಯುವಂತೆ ಸಲಹೆ ಕೊಟ್ಟಿದ್ದಾರೆ. ನಡೆಯುವಾಗ ಹಾಗೂ ಉಸಿರಾಡುವಾಗ ನೋವಾಗುತ್ತಿದೆ’ ಎಂದು ನಟ ಬರೆದುಕೊಂಡಿದ್ದಾರೆ.

‘ಸದ್ಯ ಎಲ್ಲ ಕೆಲಸಗಳಿಂದ ಬ್ರೇಕ್ ನೀಡಿ, ಜಲ್ಸಾ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದೇನೆ. ಅಗತ್ಯ ಕೆಲಸಗಳಿಗೆ ಮೊಬೈಲ್‌ ಅನ್ನು ಮಾತ್ರ ಬಳಸುತ್ತಿದ್ದೇನೆ. ಸದ್ಯ ಅನಾರೋಗ್ಯದ ಹಿನ್ನೆಲೆ ಇಂದು ಸಂಜೆ ಯಾರನ್ನೂ ಜಲ್ಸಾ ಮನೆಯಲ್ಲಿ ಭೇಟಿಯಾಗಲು ಆಗುತ್ತಿಲ್ಲ. ಯಾರೂ ಮನೆ ಮುಂದೆ ಬಂದು ಕಾಯಬೇಡಿ’ಎಂದು ತಮ್ಮ ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *