ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಖುಷ್ಬೂ – ಜೀವನದ ಕಹಿ ಸತ್ಯದ ಬಗ್ಗೆ ಬಾಯ್ಬಿಟ್ಟ ಖ್ಯಾತ ಬಹುಭಾಷಾ ನಟಿ..!!

ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಖುಷ್ಬೂ – ಜೀವನದ ಕಹಿ ಸತ್ಯದ ಬಗ್ಗೆ ಬಾಯ್ಬಿಟ್ಟ ಖ್ಯಾತ ಬಹುಭಾಷಾ ನಟಿ..!!

ನ್ಯೂಸ್‌ ಆ್ಯರೋ: ಅಪ್ರಾಪ್ತ ವಯಸ್ಸಿನಲ್ಲಿ ತನ್ನ ತಂದೆಯಿಂದಲೇ ಲೈಂಗಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳಕ್ಕೆ ಒಳಗಾಗಿ, ಜೀವನದ ನಡೆದ ಕಹಿ ಸತ್ಯದ ಬಗ್ಗೆ ಖ್ಯಾತ ನಟಿ ಖುಷ್ಬೂ ಅವರು ಹಂಚಿಕೊಂಡಿದ್ದಾರೆ.

ಈಚೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಅಧಿಕಾರ ವಹಿಸಿಕೊಂಡ ಹಿರಿಯ ನಟಿ-ರಾಜಕಾರಣಿ ಖುಷ್ಬೂ ಸುಂದರ್ ಅವರು ಮೋಜೋ ಸ್ಟೋರಿ ಬರ್ಖಾ ದತ್ ಅವರೊಂದಿಗೆ ನಡೆದ ಸಂವಾದದಲ್ಲಿ ಜೀವನದಲ್ಲಿ ನಡೆದ ಕಹಿ ಸತ್ಯದ ಬಗ್ಗೆ ಮಾತನಾಡಿದ್ದಾರೆ.

“ಬಾಲ್ಯದ ವ್ಯವಸ್ಥೆಯಲ್ಲಿ ಮಗುವಿನ ಮೇಲೆ ದೌರ್ಜನ್ಯ ನಡೆದರೆ, ಅದು ಮಗುವಿನ ಭವಿಷ್ಯದುದ್ದಕ್ಕೂ ಕಾಡುತ್ತದೆ. ತನ್ನ ಹೆಂಡತಿಯನ್ನು ಹೊಡೆಯುವುದು, ತನ್ನ ಮಕ್ಕಳನ್ನು ಹೊಡೆಯುವುದು, ತನ್ನ ಏಕೈಕ ಮಗಳನ್ನು ಲೈಂಗಿಕವಾಗಿ ನಿಂದಿಸುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಆ ವ್ಯಕ್ತಿ ನಂಬಿದ್ದ. ನನ್ನ ಮೇಲೆ ದೌರ್ಜನ್ಯ ಪ್ರಾರಂಭವಾದಾಗ ನಾನು ಕೇವಲ 8 ವರ್ಷ ವಯಸ್ಸಿನವಳಾಗಿದ್ದೆ. ನಾನು 15 ವರ್ಷದವಳಾದಾಗ ಅವರ ವಿರುದ್ಧ ಮಾತನಾಡುವ ಧೈರ್ಯ ಮಾಡಿ, ಎಲ್ಲದಕ್ಕೂ ವಿರೋಧಿಸಿದ್ದೆ.

‘ನನಗೆ ತನ್ನ ತಂದೆಯ ವಿರುದ್ಧ ಮಾತನಾಡಲು ಸಮಾಜದ ಭಯವಿರಲಿಲ್ಲ. ಹೊರತಾಗಿ ನನ್ನ ತಾಯಿ ಅದನ್ನು ನಂಬಲ್ಲ ಎಂದುಕೊಂಡಿದ್ದೆ. ಯಾಕೆಂದರೆ ‘ಕುಚ್ ಭಿ ಹೋಜಾಯೇ ಮೇರಾ ಪತಿ ದೇವತಾ ಹೈ’ ಮನಸ್ಥಿತಿಯ ವಾತಾವರಣದಲ್ಲಿ ನನ್ನ ತಾಯಿ ಅವರನ್ನು ಆರಾಧಿಸುತ್ತಿದ್ದರು. ಆದರೆ 15ನೇ ವಯಸ್ಸಿಗೆ ಸಾಕು ಎಂದುಕೊಂಡು ಅವರ ವಿರುದ್ಧ ತಿರುಗಿ ಬಿದ್ದು ವಿರೋಧಿಸಿದ್ದೆ’ ಎಂದಿದ್ದಾರೆ.

ಬಾಲಿವುಡ್ ನಲ್ಲಿ ದಿ ಬರ್ನಿಂಗ್ ಟ್ರೈನ್‌ ಸಿನಿಮಾ ಮೂಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ, ದಕ್ಷಿಣ ಭಾರತದ ಕನ್ನಡ, ತಮಿಳು, ತೆಲಗು ಚಲನ ಚಿತ್ರೋದ್ಯಮದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಂತರ ಅವರು 2010 ರಲ್ಲಿ ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ. ಇದೀಗ ತಮಿಳುನಾಡಿನ ಬಿಜೆಪಿ ಪಕ್ಷದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *