34 ವರ್ಷಗಳ ಬಳಿಕ ಒಂದಾದ ಬಾಲಿವುಡ್‌ ಸ್ಟಾರ್‌ ದಂಪತಿ – ಮತ್ತೆ ಒಂದೇ ಮನೆಯಲ್ಲಿ ಸಂಸಾರ ಆರಂಭಿಸಿದ ಕರೀನಾ ಪೋಷಕರು

34 ವರ್ಷಗಳ ಬಳಿಕ ಒಂದಾದ ಬಾಲಿವುಡ್‌ ಸ್ಟಾರ್‌ ದಂಪತಿ – ಮತ್ತೆ ಒಂದೇ ಮನೆಯಲ್ಲಿ ಸಂಸಾರ ಆರಂಭಿಸಿದ ಕರೀನಾ ಪೋಷಕರು

ನ್ಯೂಸ್‌ ಆ್ಯರೋ : ಬಾಲಿವುಡ್‌ ಮಂದಿ ಲೈಫಲ್ಲಿ ಸಿನಿಮಾ ಬಿಟ್ಟರೆ ಲವ್‌, ಬ್ರೇಕಪ್, ಲಿವಿಂಗ್ ರಿಲೇಶನ್‌ಶಿಪ್‌, ಅದ್ಧೂರಿ ಮದುವೆ ಹಾಗೂ ವಿಚ್ಛೇಧನಗಳು ಆಗಾಗ ಸುದ್ದಿಯಾಗುತ್ತಿರುವ ವಿಷಯಗಳು.

ಇದೀಗ ಬಾಲಿವುಡ್‌ನಿಂದ ವಿಭಿನ್ನ ಸುದ್ದಿಯೊಂದು ಕೇಳಿ ಬರುತ್ತಿದೆ. 34 ವರ್ಷಗಳಿಂದ ದೂರ ಉಳಿದಿದ್ದ ದಂಪತಿ ಇದೀಗ ಮತ್ತೆ ಒಂದಾಗಲು ಬಯಸುತ್ತಿರುವ ವಿಷಯ ಕೇಳಿಬರುತ್ತಿದೆ.

ಹೌದು.. ಬಾಲಿವುಡ್ ನಾಯಕಿಯರಾದ ಕರಿಷ್ಮಾ ಕಪೂರ್ ಮತ್ತು ಕರೀನಾ ಕಪೂರ್ ಅವರ ಹೆತ್ತವರು ರಣಧೀರ್ ಕಪೂರ್ ಮತ್ತು ಬಬಿತಾ ಕಪೂರ್ ಮತ್ತೆ ಒಂದಾಗಲು ಸಿದ್ಧರಾಗಿದ್ದಾರೆ.

ರಣಧೀರ್ ಕಪೂರ್ ಮತ್ತು ಬಬಿತಾ ದಂಪತಿ 1980 ರ ದಶಕದಲ್ಲಿ ಬೇರೆ ಬೇರೆಯಾಗಿ ಜೀವನ ಸಾಗಿಸುತ್ತಿದ್ದಾರೆ. ಬಬಿತಾ ಅವರು ತಮ್ಮ ಮಕ್ಕಳೊಂದಿಗೆ ಲೋಖಂಡವಾಲಾದಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ರಣಧೀರ್ ಕಪೂರ್ ಅವರು ಚೆಂಬೂರಿನಲ್ಲಿರುವ ತಮ್ಮ ಕುಟುಂಬದ ಮನೆಯಲ್ಲಿ ವಾಸಿಸುತ್ತಿದ್ದರು.

ಇಬ್ಬರೂ 34 ವರ್ಷಗಳಿಂದ ದೂರವಾಗಿದ್ದ ದಂಪತಿ ಇದೀಗ ಮಕ್ಕಳಿಗೆ ಮೊಕ್ಕಳಾದ ಬಳಿಕ ಒಂದಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇದರ ಭಾಗವಾಗಿ ಬಬಿತಾ ಬಾಂದ್ರಾದಲ್ಲಿರುವ ರಣಧೀರ್ ಕಪೂರ್ ಮನೆಗೆ ತೆರಳಿದ್ದಾರೆ ಎಂದು ವರದಿಯಾಗಿದೆ.

ಯಾವುದೇ ಸಮಾರಂಭ, ಪಾರ್ಟಿಗಳಲ್ಲಿ ಈ ದಂಪತಿ ತಮ್ಮ ಮಕ್ಕಳೊಂದಿಗೆ ಸೇರುತ್ತಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು.

ಬಬಿತಾ ಮತ್ತು ರಣಧೀರ್ 1971 ರಲ್ಲಿ ವಿವಾಹವಾದರು. ಇಬ್ಬರೂ ಬಾಲಿವುಡ್‌ನ ಮಾಜಿ ತಾರೆಯರು. ಕಲ್ ಆಜ್ ಔರ್ ಕಲ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದಾಗ ಇಬ್ಬರ ನಡುವೆ ಪ್ರೀತಿ ಮೂಡಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *