ಸಿಸಿಎಲ್ ನಲ್ಲಿ ಸ್ಯಾಂಡಲ್ ವುಡ್ ತಾರೆಗಳದ್ದೇ ಹವಾ‌ – ಉಳಿದ ತಂಡಗಳಿಗಿಂತ ಬುಲ್ಡೋಜರ್ಸ್ ಎಷ್ಟು ಮುಂದಿದೆ ಗೊತ್ತಾ..!?

ಸಿಸಿಎಲ್ ನಲ್ಲಿ ಸ್ಯಾಂಡಲ್ ವುಡ್ ತಾರೆಗಳದ್ದೇ ಹವಾ‌ – ಉಳಿದ ತಂಡಗಳಿಗಿಂತ ಬುಲ್ಡೋಜರ್ಸ್ ಎಷ್ಟು ಮುಂದಿದೆ ಗೊತ್ತಾ..!?

ನ್ಯೂಸ್ ಆ್ಯರೋ : ಈ ಬಾರಿಯ ಸಂಪೂರ್ಣ ಸಿಸಿಎಲ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ಇದುವರೆಗೂ ಬೆಂಗಾಲ್‌ ಟೈಗರ್ಸ್‌, ಕೇರಳ ಸ್ಟ್ರೈಕರ್ಸ್‌, ಚೆನ್ನೈ ರೈನೋಸ್‌ ತಂಡಗಳೊಂದಿಗೆ ಆಡಿದ್ದು, ಈ ಮೂರು ಪಂದ್ಯಗಳಲ್ಲೂ ರೋಚಕ ಗೆಲುವು ಸಾಧಿಸಿ 6 ಪಾಯಿಂಟ್‌ಗಳೊಂದಿಗೆ ಸಿಸಿಎಲ್‌ 2023 ಮ್ಯಾಚ್‌ನಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ.

ಫೆಬ್ರವರಿ 18 ರಿಂದ ಆರಂಭವಾಗಿರುವ ಸೆಲೆಬ್ರಿಟಿ

ಕ್ರಿಕೆಟ್‌ ಲೀಗ್‌ ಪಂದ್ಯಗಳು ರೋಚಕವಾಗಿದ್ದು ಸದ್ಯಕ್ಕೆ ಕರ್ನಾಟಕ ಬುಲ್ಡೋಜರ್ಸ್‌ ತಂಡ ಮೊದಲ ಸ್ಥಾನ ಏರಿ ನಿಂತಿದೆ. ಶನಿವಾರ (ಮಾರ್ಚ್‌ 4) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೂಡಾ ಕರ್ನಾಟಕ ಬುಲ್ಡೋಜರ್ಸ್‌, ಚೆನ್ನೈ ರೈನೋಸ್‌ ವಿರುದ್ಧ ಗೆಲುಗು ಸಾಧಿಸಿದೆ.

ಅಗ್ರಸ್ಥಾನದಲ್ಲಿ ಕನ್ನಡಿಗರು

ಕರ್ನಾಟಕ ಬುಲ್ಡೋಜರ್ಸ್‌ ಇದುವರೆಗೂ ಬೆಂಗಾಲ್‌ ಟೈಗರ್ಸ್‌, ಕೇರಳ ಸ್ಟ್ರೈಕರ್ಸ್‌, ಚೆನ್ನೈ ರೈನೋಸ್‌ ತಂಡಗಳೊಂದಿಗೆ ಆಡಿದ್ದು, ಈ ಮೂರು ಪಂದ್ಯಗಳಲ್ಲೂ ರೋಚಕ ಗೆಲುವು ಸಾಧಿಸಿ 6 ಪಾಯಿಂಟ್‌ಗಳೊಂದಿಗೆ ಸಿಸಿಎಲ್‌ 2023 ಮ್ಯಾಚ್‌ನಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ.

ಆಡಿದ 2 ಪಂದ್ಯಗಳಲ್ಲೂ ಗೆಲುವು ಕಂಡಿರುವ ಭೋಜ್‌ಪುರಿ ದಬಾಂಗ್ಸ್‌ 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮೂರು ಪಂದ್ಯಗಳಲ್ಲಿ ಎರಡು ಬಾರಿ ಗೆದ್ದಿರುವ ತೆಲುಗು ವಾರಿಯರ್ಸ್‌ 4 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಇದುವರೆಗೂ ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಬಾರಿ ಮಾತ್ರ ಗೆಲುಗು ಸಾಧಿಸಿರುವ ಚೆನ್ನೈ ರೈನೋಸ್‌ 2 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಪಂಜಾಬ್‌ ದಿ ಶೇರ್ಸ್‌, ಮುಂಬೈ ಹೀರೋಸ್‌, ಬೆಂಗಾಲ್‌ ಟೈಗರ್ಸ್‌, ಕೇರಳ ಸ್ಟ್ರೈಕರ್ಸ್‌ ಕ್ರಮವಾಗಿ 5,6,7 ಹಾಗೂ 8ನೇ ಸ್ಥಾನದಲ್ಲಿದೆ.

ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಕಳೆದ ಬಾರಿ ಅದ್ದೂರಿಯಾಗಿ ಆರಂಭಗೊಂಡಿದ್ದ ಟಿಪಿಎಲ್ ಇದೀಗ ಸೀಸನ್ -2ಕ್ಕೆ ರೆಡಿಯಾಗಿದೆ. ಮಾರ್ಚ್‌ನಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್-2 ಆರಂಭವಾಗುತ್ತಿದೆ. ಸೀಸನ್ 2ಕ್ಕೆ ವೇದಿಕೆ ಸಜ್ಜಾಗುತ್ತಿದ್ದು, ಮಾರ್ಚ್ 12ರಿಂದ 15ರ ವರೆಗೆ ಒಟ್ಟು ನಾಲ್ಕು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

ಇನ್ನೂ ಮೊದಲ ದಿನ ಬೆಂಗಾಲ್ ಟೈಗರ್ಸ್ ಮತ್ತು ಕರ್ನಾಟಕ ಬುಲ್ಡೋಜರ್ಸ್ ನಡುವೆ ನಡೆದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ಗೆಲುವು ಸಾಧಿಸಿದೆ. ಬೆಂಗಳೂರು, ಜೈಪುರ್‌, ಹೈದರಾಬಾದ್‌, ರಾಯ್‌ಪುರ್‌, ಜೋಧ್‌ಪುರ್‌ ಹಾಗೂ ತಿರುವನಂತಪುರಂನಲ್ಲಿ ಪಂದ್ಯಗಳು ನಡೆಯಲಿವೆ. ಮಾರ್ಚ್‌ 19 ರಂದು ಫೈನಲ್‌ ನಡೆಯಲಿದೆ. ಕೊರೊನಾ ಕಾರಣದಿಂದ ಕಳೆದ ಮೂರು ವರ್ಷಗಳಿಂದ ಸಿಸಿಎಲ್‌ ನಡೆದಿರಲಿಲ್ಲ.

Related post

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…
ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…

Leave a Reply

Your email address will not be published. Required fields are marked *