ಬೆಂಗಳೂರಲ್ಲಿ 2 HMPV ವೈರಸ್ ಪತ್ತೆ ಕೇಸ್​; ತುರ್ತು ಸಭೆ ಕರೆದ ರಾಜ್ಯ ಸರ್ಕಾರ

dinesh gundu rao and cm siddaramaiah meeting
Spread the love

ನ್ಯೂಸ್ ಆ್ಯರೋ: ಕರ್ನಾಟಕಕ್ಕೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಚೀನಾದಲ್ಲಿ ಕಾಡುತ್ತಿರುವ ಡೇಂಜರ್ ಮಹಾಮಾರಿ ಹೆಚ್​ಎಂಪಿವಿ (Human Metapneumovirus) ರಾಜ್ಯದ ಇಬ್ಬರು ಮಕ್ಕಳಲ್ಲಿ ಕಾಣಿಸಿಕೊಂಡಿದೆ. ಮೂರು ತಿಂಗಳ ಹೆಣ್ಣು ಮಗು, 8 ವರ್ಷದ ಗಂಡು ಮಗುವಿನಲ್ಲಿ ಎಚ್ಎಂಪಿವಿ ವೈರಸ್ ಪತ್ತೆಯಾಗಿದೆ ಎಂದು ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಅಧಿಕೃತ ಮಾಹಿತಿ ನೀಡಿದೆ.

ಆ ಮೂಲಕ ಕರ್ನಾಟಕದಲ್ಲಿ ಚೀನಾ ವೈರಸ್ ಇರೋದು ದೃಢವಾಗಿದೆ. ವಿಚಾರ ಗೊತ್ತಾಗುತ್ತಿದ್ದಂತೆಯೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತುರ್ತು ಸಭೆ ಕರೆದಿದ್ದಾರೆ. ಆರೋಗ್ಯಾಧಿಕಾರಿಗಳ ಜೊತೆ ಸಭೆ ನಡೆಸಿ, ತುರ್ತಾಗಿ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಐಸಿಎಂಆರ್​ ಅಧಿಕೃತ ಮಾಹಿತಿಗೂ ಮೊದಲು ಪ್ರತಿಕ್ರಿಯಿಸಿದ್ದ ಗುಂಡೂರಾವ್, ಆಸ್ಪತ್ರೆಗೆ ದಾಖಲಾಗಿರುವ 8 ವರ್ಷದ ಮಗುವಿಗೆ ಯಾವುದೇ ಸಮಸ್ಯೆ ಇಲ್ಲ, ಆರಾಮವಾಗಿದೆ. ಪುಣೆ ಲ್ಯಾಬ್​ಗೆ ಕಳುಹಿಸುವ ಬಗ್ಗೆ ಚರ್ಚೆ ಮಾಡ್ತೇವೆ. ಇದು ಹಳೆಯ ವೈರೆಸ್, ಸಹಜ ಎಚ್ಚರಿಕೆ ವಹಿಸಬೇಕಿದೆ ಎಂದಿದ್ದರು. ಇದೀಗ ಐಸಿಎಂಆರ್ ಇಬ್ಬರು ಮಕ್ಕಳಲ್ಲಿ HMPV ವೈರಸ್ ಇರೋದು ದೃಢಪಡಿಸುತ್ತಿದ್ದಂತೆಯೇ ತುರ್ತು ಸಭೆ ಕರೆದಿದ್ದಾರೆ.

3 ತಿಂಗಳ ಹೆಣ್ಣು ಮಗು, 8 ವರ್ಷದ ಗಂಡು ಮಗುವಿನಲ್ಲಿ ಎಚ್ಎಂಪಿವಿ ವೈರಸ್ ಪತ್ತೆ ಆಗಿದೆ. 3 ತಿಂಗಳ ಹೆಣ್ಣು ಮಗುವನ್ನು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. 8 ವರ್ಷದ ಮಗುವಿಗೆ ಜನವರಿ 3 ರಂದು ಎಚ್‌ಎಂಪಿವಿ ವೈರಸ್ ಪತ್ತೆಯಾಗಿದೆ ಬೆಂಗಳೂರಿನ ಬಾಪ್ಟಿಸ್ಟ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಗು ಈಗ ಚೇತರಿಸಿಕೊಳ್ಳುತ್ತಿದೆ. ಇಬ್ಬರು ಮಕ್ಕಳಿಗೆ ಅಂತಾರಾಷ್ಟ್ರೀಯ ಪ್ರಯಾಣದ ಇತಿಹಾಸ ಇಲ್ಲ.

Leave a Comment

Leave a Reply

Your email address will not be published. Required fields are marked *

error: Content is protected !!