ಪ್ರೀತಿಸಿ ಮದುವೆಯ ಬಳಿಕ ಫಸ್ಟ್ ನೈಟ್ ವೇಳೆ ಮಚ್ಚಿನಿಂದ ಹೊಡೆದಾಡಿಕೊಂಡ ಜೋಡಿ – ನವ ವಧು ಸಾವಿನ ಬಳಿಕ ವರನೂ ಸಾವು..!

Spread the love

ನ್ಯೂಸ್ ಆ್ಯರೋ : ಪ್ರೀತಿಸಿದ ಬಳಿಕ ಮನೆಯವರನ್ನು ಒಪ್ಪಿಸಿ ಮದುವೆಯಾದ ಜೋಡಿಯೊಂದು ಮದುವೆಯ ಮೊದಲ ರಾತ್ರಿಯೇ ಜಗಳ ತಾರಕಕ್ಕೇರಿ ಮಚ್ಚಿನಲ್ಲಿ ಪರಸ್ಪರ ಕೊಚ್ಚಿಕೊಂಡಿದ್ದ ವಧು- ವರ ಪ್ರಕರಣದಲ್ಲಿ, ವಧುವಿನ ಜೊತೆಗೆ ವರನೂ ಮೃತಪಟ್ಟಿದ್ದಾನೆ. ನಿನ್ನೆ ಕೋಲಾರದ ಕೆಜಿಎಫ್‌ನ ಚಂಬರಸನಹಳ್ಳಿ ಗ್ರಾಮದಲ್ಲಿ ಪ್ರಕರಣ ನಡೆದಿತ್ತು.

ಕೆಜಿಎಫ್ ತಾಲೂಕಿನ ಆಂಡರ್ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೆಜಿಎಫ್ ತಾಲೂಕಿನ ಬೈನೇಹಳ್ಳಿ ನಿವಾಸಿ ಲಿಖಿತಶ್ರೀ(18) ನಿನ್ನೆಯೇ ಮೃತಪಟ್ಟಿದ್ದಳು.

ಚಂಬರಸನಹಳ್ಳಿಯ ನವೀನ್ ಕುಮಾರ್ ಅವರ ಅಕ್ಕನ ಮನೆಯಲ್ಲಿ ಮದುವೆ ನೆರವೇರಿದ್ದು, ಮದುವೆಯ ನಂತರ ಅದೇ ಗ್ರಾಮದ ವರನ ದೊಡ್ಡಪ್ಪನ ಮನೆಗೆ ಲಿಖಿತಶ್ರೀ ಮತ್ತು ನವೀನ್ ಕುಮಾರ್ ತೆರಳಿದ್ದು, ಕೋಣೆಯ ಬಾಗಿಲು ಹಾಕಿಕೊಂಡು ಪರಸ್ಪರ ಮಚ್ಚಿನಲ್ಲಿ ಹಲ್ಲೆ ಮಾಡಿಕೊಂಡಿದ್ದಾರೆ.

ಗಂಭೀರ ಗಾಯಗೊಂಡಿದ್ದ ವರ ನವೀನ್ ನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನವೀನ್ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Leave a Comment

Leave a Reply

Your email address will not be published. Required fields are marked *