ಆಪಲ್ ಪ್ರಿಯರಿಗೆ ಗುಡ್ ನ್ಯೂಸ್; ಐಫೋನ್ 16 ಸೀರಿಸ್ ಮೇಲೆ ಆಫರ್
ನ್ಯೂಸ್ ಆ್ಯರೋ: ಫೋನ್ ಪ್ರಿಯರಿಗೆ ಸಿಹಿ ಸುದ್ದಿಯೊಂದಿದೆ. ಟೆಕ್ ದೈತ್ಯ ಆಪಲ್ ತನ್ನ ಇತ್ತೀಚಿನ ‘ಐಫೋನ್ 16’ ಸೀರಿಸ್ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ಈ ಆಫರ್ನಲ್ಲಿ, ‘ಐಫೋನ್ 16’, ‘ಐಫೋನ್ 16 ಪ್ಲಸ್’, ‘ಐಫೋನ್ 16 ಪ್ರೊ’, ‘ಐಫೋನ್ 16 ಪ್ರೊ ಮ್ಯಾಕ್ಸ್’ನಂತಹ ಮಾದರಿಗಳಲ್ಲಿ ಗರಿಷ್ಠ ರೂ. 5,861 ರಿಯಾಯಿತಿ ಪಡೆಯಬಹುದು.
ಅಮೆರಿಕದ ಆ್ಯಪಲ್ ಕಂಪನಿ ಚೀನಾದಲ್ಲಿ ಈ ಆಫರ್ಗಳನ್ನು ಪ್ರಕಟಿಸಿದೆ. ಈ ಕೊಡುಗೆಯ ಭಾಗವಾಗಿ ಇದು ತನ್ನ ಇತ್ತೀಚಿನ ಐಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ಆಪಲ್ ಚೀನಾದಲ್ಲಿ ಹುವಾವೇಯಂತಹ ದೇಶಿಯ ಬ್ರಾಂಡ್‌ಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ. ಈ ಕಾರಣಕ್ಕಾಗಿ ಕಂಪನಿಯು ಈ ಕೊಡುಗೆಗಳನ್ನು ಚೀನಾದಲ್ಲಿ ಮಾತ್ರ ನೀಡುತ್ತಿದೆ. ಇದು ಐಫೋನ್‌ಗಳಲ್ಲಿ 500 ಯುವಾನ್ ($68.50 ಅಥವಾ ಅಂದಾಜು 5,861 ರೂ.) ವರೆಗಿನ ರಿಯಾಯಿತಿಗಳನ್ನು ಒಳಗೊಂಡಿದೆ.
ಆಪಲ್‌ನ ವೆಬ್‌ಸೈಟ್ ಪ್ರಕಾರ.. ಗ್ರಾಹಕರು ಆಯ್ದ ಪೇಮೆಂಟ್ ಪ್ರಕ್ರಿಯೆಯ ಮೂಲಕ ಈ ಕೊಡುಗೆಗಳನ್ನು ಪಡೆಯಬಹುದು. ಇತ್ತೀಚಿನ ಐಫೋನ್ ಮಾದರಿಗಳಲ್ಲಿ ಅವರು 500 ಯುವಾನ್‌ಗಳವರೆಗೆ ರಿಯಾಯಿತಿಗಳನ್ನು ಪಡೆಯಬಹುದು. ಕಂಪನಿಯು ‘ಐಫೋನ್ 16 ಪ್ರೊ’ ಮತ್ತು ‘ಐಫೋನ್ 16 ಪ್ರೊ ಮ್ಯಾಕ್ಸ್’ ಮೇಲೆ 500 ಯುವಾನ್‌ಗಳ ರಿಯಾಯಿತಿಯನ್ನು ನೀಡುತ್ತಿದೆ. ‘ಐಫೋನ್ 16’ ಮತ್ತು ‘ಐಫೋನ್ 16 ಪ್ಲಸ್’ ಮಾದರಿಗಳನ್ನು ಖರೀದಿಸುವ ಗ್ರಾಹಕರು 400 ಯುವಾನ್ (ಸುಮಾರು ರೂ. 4,690) ರಿಯಾಯಿತಿಯನ್ನು ಪಡೆಯಬಹುದು. ಆದರೆ ಈ ರಿಯಾಯಿತಿಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತವೆ. ಈ ಸೇಲ್ ಜನವರಿ 4 ರಿಂದ ಪ್ರಾರಂಭವಾಗಲಿದ್ದು, 7ರ ವರೆಗೆ ಅಂದ್ರೆ ಇಂದಿನಿಂದ ನಾಲ್ಕು ದಿನಗಳವರೆಗೆ ಮುಂದುವರಿಯುತ್ತದೆ.
ಕಳೆದ ವರ್ಷ ಕಳೆದ ತ್ರೈಮಾಸಿಕದಲ್ಲಿ ಆಪಲ್ ಮತ್ತೊಮ್ಮೆ ಚೀನಾ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ತಯಾರಕರ ಟಾಪ್-5 ಪಟ್ಟಿಗೆ ಸೇರಿಕೊಂಡಿತ್ತು. ಇಂಟರ್ನ್ಯಾಷನಲ್ ಡೇಟಾ ಕಾರ್ಪೊರೇಷನ್ (IDC) ಒದಗಿಸಿದ ಮಾಹಿತಿಯ ಪ್ರಕಾರ, ಆಪಲ್ 2024ರ ಕೊನೆಯ ತ್ರೈಮಾಸಿಕದಲ್ಲಿ ಶೇ. 15.6ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಚೀನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಇದು 2023ರ ಮೂರನೇ ತ್ರೈಮಾಸಿಕದಲ್ಲಿ ಆಪಲ್‌ನ ಪಾಲಿಗಿಂತ ಕಡಿಮೆಯಾಗಿದೆ. 2023 ರ ಮೂರನೇ ತ್ರೈಮಾಸಿಕದಲ್ಲಿ Apple ನ ಮಾರುಕಟ್ಟೆ ಪಾಲು ಶೇ. 16.1 ರಷ್ಟು ಆಗಿದೆ.
2024 ರ ಕೊನೆಯ ತ್ರೈಮಾಸಿಕದಲ್ಲಿ, ವಿವೋ ಚೀನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶೇ. 18.6 ರಷ್ಟು ಹೆಚ್ಚಿನ ಪಾಲನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ. ಶೇ.15.6 ಮಾರುಕಟ್ಟೆ ಪಾಲನ್ನು ಹೊಂದಿರುವ ಆಪಲ್ ಎರಡನೇ ಸ್ಥಾನದಲ್ಲಿದೆ ಮತ್ತು ಶೇ. 15.3 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ Huawei ಮೂರನೇ ಸ್ಥಾನದಲ್ಲಿದೆ. Xiaomi (ಶೇ. 14.8 ರಷ್ಟು) ನಾಲ್ಕನೇ ಸ್ಥಾನದಲ್ಲಿದೆ ಮತ್ತು Honor (ಶೇ. 14.6 ರಷ್ಟು) ಐದನೇ ಸ್ಥಾನದಲ್ಲಿದೆ. ಇವುಗಳನ್ನು ಹೊರತುಪಡಿಸಿ, ಚೀನಾದಲ್ಲಿ ಇತರ ಬ್ರಾಂಡ್‌ಗಳ ಒಟ್ಟು ಮಾರುಕಟ್ಟೆ ಪಾಲು ಶೇ. 21.1 ರಷ್ಟು ಆಗಿದೆ.
Leave a Comment