60 ಸೆಕೆಂಡ್​ಗಳ ಶಾರ್ಟ್ಸ್​​ಗೆ ವಿದಾಯ; ಹೊಸ ಸರ್​ಪ್ರೈಸ್​​ ನೀಡಿದ ಯೂಟ್ಯೂಬ್​​

YouTube Shorts
Spread the love

ನ್ಯೂಸ್ ಆ್ಯರೋ: ಇನ್​​ಸ್ಟಾಗ್ರಾಂ ರೀಲ್ಸ್​ ಮತ್ತು ಬೈಟೆಡ್ಯಾನ್ಸ್​​ ಒಡೆತನದ ಟಿಕ್​ಟಾಕ್​ಗೆ ಯೂಟ್ಯೂಬ್ ಶಾರ್ಟ್ಸ್​​ ಪ್ರತಿಸ್ಪರ್ಧಿಯಾಗಿದೆ. ಅತಿ ವೇಗವಾಗಿ ಬಳಕೆದಾರರನ್ನು ತಲುಪುವ ಸಾಮರ್ಥ್ಯ ಇದಕ್ಕಿದೆ.

ಹೀಗಾಗಿ ಹೆಚ್ಚಿನ ಯೂಟ್ಯೂಬ್​ ಬಳಕೆದಾರರು ಇದರ ​ ಮೂಲಕ ಶಾರ್ಟ್ಸ್​​ ಹಂಚಿಕೊಳ್ಳುತ್ತಾರೆ. ಈವರೆಗೆ 3 ನಿಮಿಷಗಳ ಕಾಲ ಶಾರ್ಟ್ಸ್​​ ಹಂಚಿಕೊಳ್ಳುವ ಅವಕಾಶ ಯೂಟ್ಯೂಬ್​ ನೀಡಿತ್ತು. ಆದರೀಗ ಯೂಟ್ಯೂಬ್​ ಅದರ ಕಾಲಮಿತಿಯನ್ನು ಹೆಚ್ಚಿಸುತ್ತಿದೆ. ಶಾರ್ಟ್ಸ್​ಗಾಗಿ 6 ನಿಮಿಷಗಳ ಕಾಲವಕಾಶವನ್ನು ಕೊಡುತ್ತಿದೆ.

ಅಕ್ಟೋಬರ್​ 15ರಿಂದ 3 ನಿಮಿಷಗಳ ಕಾಲ ಶಾರ್ಟ್ಸ್​​​ ವಿಡಿಯೋ ಪೋಸ್ಟ್​ ಮಾಡಲು ಯೂಟ್ಯೂಬ್​ ಅನುಮತಿಸುತ್ತಿದೆ. ಇದು ಜನಪ್ರಿಯತೆಯಲ್ಲಿರುವ ವೈಶಿಷ್ಟ್ಯವಾಗಿದೆ ಎಂದು ಯೂಟ್ಯೂಬ್ ಹೇಳಿಕೊಂಡಿದೆ.


ಯೂಟ್ಯೂಬ್​​ ಶಾರ್ಟ್ಸ್​​ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆಂದೇ ಹೆಚ್ಚಿನ ವೈಶಿಷ್ಟ್ಯ ಅಭಿವೃದ್ಧಿಪಡಿಸುತ್ತಿದೆ. ಟೆಂಪ್ಲೇಟ್​​ ಬಳಸಿಕೊಂಡು ಶಾರ್ಟ್ಸ್​​ ವಿಡಿಯೋ ತಯಾರಿಸುವ ಆಯ್ಕೆ ಸದ್ಯದಲ್ಲೇ ಪ್ರಾರಂಭವಾಗಲಿದೆ. ಜೊತೆಗೆ ಕ್ಲಿಪ್​ ರಿಮಿಕ್ಸ್​​ ಆಯ್ಕೆ ಕೂಡ ಶೀಫ್ರದದಲ್ಲೇ ಬರಲಿದೆ. ಇದಲ್ಲದೆ AI ಸಂಯೋಜನೆಯೊಂದಿಗೆ ವಿಡಿಯೋ ಸಂಯೋಜನೆ ಮಾಡಲಿದೆ. ಸ್ವತಂತ್ರ ಕ್ಲಿಪ್​ ರಚಿಸಲು ಹೆಚ್ಚಿನ ಉತ್ತೇಜನ ನೀಡಲಿದೆ.

Leave a Comment

Leave a Reply

Your email address will not be published. Required fields are marked *

error: Content is protected !!