ʼಹೊಂಬಾಳೆʼ ವಿರುದ್ಧ ಬೀದಿಗಳಿದ ಜೂನಿಯರ್ ಅರ್ಟಿಸ್ಟ್ಗಳು; ʼಕಾಂತಾರ ಚಾಪ್ಟರ್-1ʼ ಅರ್ಧಕ್ಕೆ ನಿಲ್ಲುತ್ತಾ ?
ನ್ಯೂಸ್ ಆ್ಯರೋ: ರಿಷಬ್ ಶೆಟ್ಟಿ ಅವರ ʼಕಾಂತಾರ ಚಾಪ್ಟರ್-1 ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇತ್ತೀಚೆಗೆ 60 ದಿನಗಳ ಮೆಗಾ ಶೆಡ್ಯೂಲ್ನೊಂದಿಗೆ ಚಿತ್ರತಂಡ ಚಿತ್ರೀಕರಣ ಆರಂಭಿಸಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ʼಕಾಂತಾರ-1ʼ ಬಹುಕೋಟಿ ಬಜೆಟ್ನಲ್ಲಿ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ. ಸಿನಿಮಾದಲ್ಲಿ ಖ್ಯಾತ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿನ ಕೆಲ ದೃಶ್ಯಗಳಲ್ಲಿ ಜೂನಿಯರ್ ಆರ್ಟಿಸ್ಟ್ ಕೂಡ ಕಾಣಿಸಿಕೊಳ್ಳಲಿದ್ದಾರೆ.
ಬೆಂಗಳೂರು, ಕೇರಳ ಸೇರಿದಂತೆ ವಿವಿಧ ಕಡೆಯಿಂದ ಜೂನಿಯರ್ ಆರ್ಟಿಸ್ಟ್ಗಳು ʼಕಾಂತಾರʼ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ಆದರೆ ಇದೀಗ ಈ ಜೂನಿಯರ್ ಆರ್ಟಿಸ್ಟ್ಗಳು ಚಿತ್ರತಂಡದ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದಾರೆ. ಈ ಕುರಿತ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಮಗೆ ಸರಿಯಾಗಿ ಸಂಭಾವನೆ ನೀಡುತ್ತಿಲ್ಲ. ಒಳ್ಳೆ ಮರ್ಯಾದೆ ಕೊಟ್ಟಿದ್ದಾರೆ ಇವರು. ಒಂದು ತಿಂಗಳು ಅಂತ ಕರೆಸಿಕೊಂಡು 5 ದಿನ ಆಗಿದೆ. ಇದುವರೆಗೆ ರೂಮ್ ಚೇಂಜ್ ಮಾಡಿಲ್ಲ. 5 ದಿನಗಳಿಂದ ಹೀಗೆಯೇ ಇದ್ದೇವೆ. 5 ದಿನದಲ್ಲೇ ನಮ್ಮನ್ನು ಮನೆಗೆ ಕಳುಹಿಸುತ್ತಾರೆ. ರಾತ್ರೋ ರಾತ್ರಿ ಹೋಗಬೇಕು ಅಂಥ ಹೇಳಿದರೆ ಹೇಗೆ ಹೋಗೋದು. ಇನ್ನು ಪೇಮೆಂಟ್ ಆಗಿಲ್ಲ. ಬಸ್ಸಿಗೆ ಹೋಗೋಕ್ಕೂ ಹಣವಿಲ್ಲ. ಹಣಕ್ಕಾಗಿ ಬೆಳಗ್ಗೆಯಿಂದ ಕಾಯ್ತಾ ಇದ್ದೇವೆ. ಊಟನೂ ಇಲ್ಲ. ಲೇಡೀಸ್ ಕೂಡ ಇಲ್ಲಿ ಇದ್ದಾರೆ. ಎಲ್ಲರಿಗೂ ಹಿಂಸೆ ಆಗ್ತಾ ಇದೆ. ಯಾರಿಗಾದ್ರೂ ಏನಾದ್ರು ಆದರೆ ಯಾರು ಹೊಣೆ. ಇವರನ್ನು ನಂಬಿಕೊಂಡು ಬರ್ತಾರೆ. ನೂರು ಸಲಿ ಕೆಳಗೆ, ಮೇಲೆ ಹತ್ತಿಸ್ತಾರೆ ಕಾಲು ನೋಯ್ತಾ ಇದೆ. ಹುಡುಗರಿಗೆ ಜೋರು ಮಾಡುತ್ತಾರೆ. ಇದೇನಾ ಜೂನಿಯರ್ ಅರ್ಟಿಸ್ಟ್ ಗಳಿಗೆ ಕೊಡೋ ಮರ್ಯಾದೆ ಎಂದು ವಿಡಿಯೋ ಮಾಡಿ ಅರ್ಟಿಸ್ಟ್ ಗಳು ಪ್ರಶ್ನಿಸಿದ್ದಾರೆ.
ಕೈಕಾಲುಗಳಿಗೆ ಗಾಯವಾಗಿದೆ. ಜ್ವರ ಬಂದಿದೆ ಆದರೂ ಯಾರೂ ಕೂಡ ಈ ಬಗ್ಗೆ ಕೇರ್ ಮಾಡಿಲ್ಲವೆಂದು ಜೂನಿಯರ್ ಆರ್ಟಿಸ್ಟ್ ಗಳು ತಮ್ಮ ಅಸಹಾಯಕತೆಯನ್ನು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಇದೀಗ ಮತ್ತೊಬ್ಬರು ವಿಡಿಯೋ ಮೂಲಕ ನಮಗೆ ಬರಬೇಕಾದ ಪೇಮೆಂಟ್ ಬಂದಿದೆ. ಅದೆಲ್ಲ ಸುಳ್ಳು. ಊಟ, ವಸತಿ ಎಲ್ಲವೂ ಚೆನ್ನಾಗಿತ್ತು. ಹೊಂಬಾಳೆ ಅವರಿಗೆ ಕೆಟ್ಟ ಹೆಸರು ಬೇಡ, ದಯವಿಟ್ಟು ವೀಡಿಯೋ ಡಿಲೀಟ್ ಮಾಡಿ ಎಂದು ಮನವಿ ಮಾಡಿದ್ದಾರೆ.
Leave a Comment