‘ರಾಮಾಯಣ’ ಚಿತ್ರದ ಬಗ್ಗೆ ಅಪ್ಡೇಟ್ ಕೊಟ್ಟ ಯಶ್; ‘ರಾವಣ’ ಪಾತ್ರ ಬಿಟ್ಟು ಬೇರೆ ಯಾವ ಪಾತ್ರ ಮಾಡುತ್ತಾರೆ ರಾಕಿ?

ನ್ಯೂಸ್ ಆ್ಯರೋ: ನಟ ಯಶ್ ಅವರು ದೊಡ್ಡ ಬ್ರೇಕ್ ಪಡೆದಿದ್ದಾರೆ. ‘ಕೆಜಿಎಫ್ 2’ ಬಳಿಕ ಅವರು ಹೊಸ ಪ್ರೊಜೆಕ್ಟ್ ಘೋಷಣೆ ಮಾಡಲು ಸಮಯ ತೆಗೆದುಕೊಂಡರು. ಈಗ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಅವರು ಅಪ್ಡೇಟ್ ಕೊಟ್ಟಿದ್ದು ಕಡಿಮೆ. ಈ ಚಿತ್ರದ ಬಗ್ಗೆ, ಮುಂಬರುವ ‘ರಾಮಾಯಣ’ ಚಿತ್ರದ ಬಗ್ಗೆ ಅವರು ಮಾತನಾಡಿದ್ದಾರೆ. ‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಯಶ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಗೀತು ಮೋಹನ್ದಾಸ್ ಜೊತೆ ಕೆಲಸ ಮಾಡಲು ಒಪ್ಪಿಕೊಂಡಿದ್ದು ಏಕೆ ಎನ್ನುವ ಪ್ರಶ್ನೆಗೆ ಯಶ್ ಉತ್ತರ ನೀಡಿದ್ದಾರೆ. ‘ಗೀತು ಮೋಹನ್ದಾಸ್ ಅವರ ಯಾವುದೇ ಸಿನಿಮಾಗಳನ್ನು ನೋಡಿರಲಿಲ್ಲ. ಅವರಿಗೆ ಸಾಕಷ್ಟು ಪ್ಯಾಷನ್ ಇದೆ. ಏನು ಮಾಡಬೇಕು ಎಂಬುದು ಅವರಿಗೆ ಗೊತ್ತಿದೆ. ಅವರು ಈ ಹಿಂದೆ ಮಾಡಿದ್ದು ಬೇರೆಯದೇ ರೀತಿಯ ಸಿನಿಮಾ. ಈಗ ಮಾಡ್ತಿರೋದು ಕೂಡ ಬೇರೆಯದೇ ರೀತಿಯ ಚಿತ್ರ. ಜನರಿಗೆ ಒಳ್ಳೆಯ ಕಥೆಯನ್ನು ಹೇಳಬೇಕು ಎಂಬುದು ನನ್ನ ಉದ್ದೇಶ’ ಎಂದಿದ್ದಾರೆ ಯಶ್.
‘ನಾನು ಯಾರ ಮಾತನ್ನೂ ಕೇಳಲ್ಲ. ನಾನು ಹೃದಯದ ಮಾತನ್ನು ಕೇಳುತ್ತೇನೆ. ಅವರು ಕಾನ್ಸೆಪ್ಟ್ ಜೊತೆ ಬಂದರು. ಅವರಲ್ಲಿರುವ ಪ್ಯಾಷನ್ ಇಷ್ಟ ಆಯಿತು. ಅವರ ವಿಷನ್ ನನಗೆ ಇಷ್ಟ ಆಯಿತು. ಹೀಗೆ, ಸಿನಿಮಾ ಆರಂಭ ಆಯಿತು ಎಂದಿದ್ದಾರೆ.
ಬಳಿಕ ‘ರಾಮಾಯಣ’ ಚಿತ್ರದ ಬಗ್ಗೆ ಅವರು ಮಾತನಾಡಿ, ನಮಿತ್ ಅವರೊಂದಿಗಿನ ಮೊದಲ ಭೇಟಿಯಲ್ಲೇ ಅವರ ಆಲೋಚನೆ ಹಾಗೂ ನನ್ನ ಆಲೋಚನೆ ಎರಡು ಒಂದೇ ಎನ್ನುವ ಭಾವನೆ ಬಂತು. ಇದೇ ಕಾರಣಕ್ಕೆ ನಾನು ಈ ಚಿತ್ರದ ಸಹ ನಿರ್ಮಾಪಕನಾಗಲು ಒಪ್ಪಿಕೊಂಡೆ.
ಹಿಂಜರಿಕೆಯಿಂದಲೇ ನಮಿತ್ ನನ್ನ ಹತ್ರ ನೀವು ಚಿತ್ರದಲ್ಲಿ ‘ರಾವಣ’ನ ಪಾತ್ರವನ್ನು ಮಾಡಬಹುದೇ ಎಂದು ಕೇಳಿದರು. ಪಾತ್ರವನ್ನು ಪಾತ್ರದಂತೆ ಪರಿಗಣಿಸಿದರೆ, ಇಂದು ಈ ಚಿತ್ರ ಆಗದಿದ್ದರೆ ಮುಂದೆ ಆಗುವುದಿಲ್ಲ ಎಂದು ಹೇಳಿದ್ದೆ. ಇಂತಹ ಸಿನಿಮಾಕ್ಕೆ ಸ್ಟಾರ್ ಡಮ್ ಎನ್ನುವುದನ್ನು ಪಕ್ಕಕ್ಕಿಟ್ಟು ಎಲ್ಲರೂ ಕೈಜೋಡಿಸಬೇಕು. ಯೋಜನೆಗಳನ್ನು ರೂಪಿಸಬೇಕೆಂದು ಅವರ ಬಳಿ ಹೇಳಿದ್ದೆ ಎಂದು ಯಶ್ ಹೇಳಿದ್ದಾರೆ.
ನಾನು ಈ ಚಿತ್ರದ ಭಾಗವಾಗುವ ಮುನ್ನವೇ ‘ರಾಮ’ನ ಪಾತ್ರಕ್ಕೆ ರಣ್ಬೀರ್ ಕಪೂರ್ ಅವರ ಆಯ್ಕೆ ನಡೆದು ಹೋಗಿತ್ತು. ನಿರ್ದೇಶಕ ನಿತೇಶ್ ತಿವಾರಿ ಅವರಿಗೆ ‘ಸೀತೆ’ಯ ಪಾತ್ರಕ್ಕೆ ಸಾಯಿಪಲ್ಲವಿ ಅವರನ್ನು ಆಯ್ಕೆ ಮಾಡುವ ಇಚ್ಛೆ ಇತ್ತು. ಹಾಗಾಗಿ ಸಾಯಿಪಲ್ಲವಿ ಈ ಪಾತ್ರಕ್ಕೆ ಆಯ್ಕೆ ಆದರು ಎಂದಿದ್ದಾರೆ.
ರಾವಣನ ಪಾತ್ರ ಬಿಟ್ಟು ಬೇರೆ ಯಾವ ಪಾತ್ರವನ್ನು ಮಾಡುತ್ತಿದ್ದೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, ‘ರಾವಣ’ನ ಪಾತ್ರ ಹೊರತುಪಡಿಸಿ ಬೇರೆ ಯಾವ ಪಾತ್ರವಿದ್ದರೂ ನಾನು ಅದನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಆ ಪಾತ್ರಕ್ಕೆ ಜೀವ ತುಂಬುವುದೇ ಒಂದು ರೋಚಕ ಅನುಭವ. ಅದಕ್ಕಾಗಿ ತುಂಬಾ ಎಕ್ಸೈಟ್ ಆಗಿದ್ದೇನೆ. ಈ ರಾಮಾಯಣ ಎಲ್ಲರಿಗೂ ವಿಶಿಷ್ಟ ಅನುಭವ ನೀಡಲಿದೆ ಎಂದು ಯಶ್ ಹೇಳಿದ್ದಾರೆ.
Leave a Comment