ನವರಾತ್ರಿ 2ನೇ ದಿನವೇ ಗುಡ್‌ನ್ಯೂಸ್; ಮಗು ಬರಮಾಡಿಕೊಂಡ ಹರ್ಷಿಕಾ-ಭುವನ್

ನ್ಯೂಸ್ ಆ್ಯರೋ: ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣ್ಣ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹರ್ಷಿಕಾ ಪೂಣಚ್ಚ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಪತಿ ಭುವನ್ ಪೊನ್ನಣ್ಣ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ಹರ್ಷಿಕಾ ಹಾಗೂ ಭುವನ್ ಪೊನ್ನಣ್ಣ ಜೋಡಿ ಹೆಣ್ಣು ಮಗುವನ್ನು ಬರಮಾಡಿಕೊಂಡಿದೆ. ಮಗಳ ಆಗಮನದಿಂದ ಸಂತಸಗೊಂಡಿರೋ ಹರ್ಷಿಕಾ ಹಾಗೂ ಭುವನ್ ಕುಟುಂಬಸ್ಥರು ಸಂತಸಗೊಂಡಿದ್ದಾರೆ. ಎಲ್ಲರಿಗೂ ಹಾಯ್, ನಮ್ಮ ‘ಚೈಕಾರ್ತಿ ಮೂಡಿ’ ಜನ್ಮ ತಾಳಿರುವುದನ್ನು ತಿಳಿಸಲು ಬಹಳ ಖುಷಿಯಾಗುತ್ತಿದೆ.
ಹರ್ಷಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ನನ್ನ ಪ್ರಕಾರ ಮಗಳು ಸಂಪೂರ್ಣವಾಗಿ ಹರ್ಷಿ ರೀತಿಯಲ್ಲಿಯೇ ಕಾಣುತ್ತಿದ್ದಾಳೆ. ಇನ್ನು ಹರ್ಷಿ ಪ್ರಕಾರ, ಮಗಳು ನನ್ನ ಕಾಪಿ ಎಂದು ಹೇಳುತ್ತಿದ್ದಾಳೆ.
ಮುಂದೆ ನೋಡೋಣ..! ಇಲ್ಲಿಯವರೆಗಿನ ಪ್ರಯಾಣದಲ್ಲಿ ಎಲ್ಲರ ಹಾರೈಕೆ ಹಾಗೂ ಪ್ರೀತಿಗೂ ತುಂಬಾ ಥ್ಯಾಂಕ್ಸ್. ಎಲ್ಲರಿಗೂ ಪ್ರೀತಿಯಿಂದ..’ ಎಂದು ಭುವನ್ ಪೊನ್ನಣ್ಣ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
Leave a Comment