8 ವರ್ಷದ ಲವ್, ಪ್ರಿಯಕರನಿಂದ ಮೋಸ; ಪ್ರೇಮಿಯ ಜನನಾಂಗವನ್ನೇ ಕತ್ತರಿಸಿದ ಯುವತಿ

woman chop
Spread the love

ನ್ಯೂಸ್ ಆ್ಯರೋ: ಇಂದಿನ ಕಾಲದಲ್ಲಿ ಪ್ರಾಮಾಣಿಕವಾಗಿ ಪ್ರೀತಿಸುವವರು ಸಿಗುವುದೇ ವಿರಳ. ಕೆಲವರು ಸಣ್ಣಪುಟ್ಟ ಕಾರಣಗಳಿಗೆ ಬ್ರೇಕಪ್‌ ಮಾಡಿಕೊಂಡರೆ, ಇನ್ನೂ ಕೆಲವರು ಸಂಗಾತಿಗೆ ಮೋಸ ಮಾಡಿ ಇನ್ನೊಬ್ಬರ ಜೊತೆ ಸಂಬಂಧ ಇಟ್ಟುಕೊಂಡಿರುತ್ತಾರೆ.

ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ತಾನು 8 ವರ್ಷಗಳ ಕಾಲ ಪ್ರೀತಿಸಿದ ಯುವತಿಗೆ ಮೋಸ ಮಾಡಿ ಇನ್ನೊಬ್ಬಳ ಜೊತೆ ಮದುವೆ ಮಾಡಿಕೊಳ್ಳಲು ತಯಾರಾಗಿದ್ದು, ಈತನ ಮೋಸದಾಟದಿಂದ ಬೇಸತ್ತು ಗೆಳತಿ ಆತನ ಜನನಾಂಗವನ್ನೇ ಚಾಕುವಿನಿಂದ ಕತ್ತರಿಸಿ ಸೇಡು ತೀರಿಸಿಕೊಂಡಿದ್ದಾಳೆ. ಈ ಸುದ್ದಿ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಈ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮುಜಾಫರ್‌ ನಗರದಲ್ಲಿ ನಡೆದಿದ್ದು, ಯುವತಿಯೊಬ್ಬಳು ಗೆಳೆಯನ ಜನನಾಂಗವನ್ನು ಕತ್ತರಿಸಿ ಅದೇ ಚಾಕುವಿನಿಂದ ತನ್ನ ಕೈ ಕೊಯ್ದುಕೊಂಡು ತನಗೆ ತಾನೇ ಹಾನಿ ಮಾಡಲು ಯತ್ನಿಸಿದ್ದಾಳೆ.

ವರದಿಗಳ ಪ್ರಕಾರ, ಇಲ್ಲಿನ ಯುವಕನೊಬ್ಬ ತಾನು 8 ವರ್ಷದಿಂದ ಪ್ರೀತಿಸುತ್ತಿದ್ದ ಯುವತಿಗೆ ಮೋಸ ಮಾಡಿ ಬೇರೆಯವಳನ್ನು ಮದುವೆಯಾಗಲು ಯೋಜನೆ ನಡೆಸಿದ್ದ. ಈ ವಿಷಯ ತಿಳಿದ ಗೆಳತಿ ಆತನನ್ನು ಮಾತನಾಡಬೇಕೆಂದು ಕರೆಸಿಕೊಂಡು, ಕಾರಿನಲ್ಲಿಯೇ ಕುಳಿತು ಗಂಟೆಗಟ್ಟಲೆ ಹೊತ್ತು ಮಾತನಾಡಿ, ಕೊನೆಗೆ ಏಕಾಏಕಿ ಚಾಕು ತೆಗೆದು ಆತನ ಜನನಾಂಗವನ್ನು ಕತ್ತರಿಸಿದ್ದಾಳೆ.

ಅಷ್ಟೇ ಅಲ್ಲದೆ ಅದೇ ಚಾಕುವಿನಿಂದ ಆಕೆ ತನ್ನ ಕೈ ಕೊಯ್ದುಕೊಂಡಿದ್ದಾಳೆ. ಘಟನೆಯ ಬಳಿಕ ಭಾನುವಾರ (ಡಿ.22) ಸಂಜೆ ಪೊಲೀಸರು 21 ವರ್ಷ ವಯಸ್ಸಿನ ಆ ಯುವತಿಯನ್ನು ಬಂಧಿಸಿದ್ದಾರೆ.

gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಗೆಳೆಯನ ಜನನಾಂಗವನ್ನು ಕತ್ತರಿಸಿದ ಯುವತಿಯನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋಗುತ್ತಿರುವಂತಹ ದೃಶ್ಯವನ್ನು ಕಾಣಬಹುದು.

https://twitter.com/i/status/1871143664262824353

Leave a Comment

Leave a Reply

Your email address will not be published. Required fields are marked *

error: Content is protected !!