‘ನನ್ನ ಜತೆ ಬಾ ಇಲ್ಲಾಂದ್ರೆ 24 ತುಂಡು ಮಾಡುವೆʼ; ಯುವತಿಗೆ ಬೆದರಿಕೆ ಹಾಕಿದ ಶಾರಿಕ್ ಖಾಕಿ ವಶಕ್ಕೆ

ನ್ಯೂಸ್ ಆ್ಯರೋ: ‘ನನ್ನ ಜತೆ ಸಹಕರಿಸು ಇಲ್ಲಾಂದ್ರೆ 24 ತುಂಡು ಮಾಡುವೆ’ ಎಂದು ಸುರತ್ಕಲ್ ಇಡ್ಯಾ ಅನ್ಯ ಸಮುದಾಯದ ನಿವಾಸಿ ಸಮೀಪದಲ್ಲೇ ವಾಸಿಸುವ ಯುವತಿಯೊಬ್ಬಳಿಗೆ ವಾಟ್ಸಪ್ ಮೆಸೇಜ್ ಮಾಡಿ ಸಂಚಲನ ಸೃಷ್ಟಿಸಿದ್ದಾನೆ.
ಇತ್ತೀಚಿನ ದಿನಗಳಲ್ಲಿ ಅನೇಕ ಕೋಮು ಗಲಭೆಗಳು ನಡೆಯುತ್ತಿದ್ದು ಇದೀಗ ಅಂತಹದ್ದೇ ಮತ್ತೊಂದು ಘಟನೆ ಕೋಮು ಸಂಘರ್ಷಕ್ಕೆ ಕಿಡಿ ಕಾರಿದೆ.
ಸುರತ್ಕಲ್ ಇಡ್ಯಾ ನಿವಾಸಿ, ಸದಾಶಿವನಗರದ ಶಾರಿಕ್ ನೂರ್ಜಹಾನ್ ಮೆಸೆಜ್ ಮಾಡಿದ ಆರೋಪಿ ಎಂದು ತಿಳಿದು ಬಂದಿದೆ. ಕಿರುಕುಳ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಯುವತಿಯ ಸಹೋದರನಿಗೆ ವಾಟ್ಸಪ್ ಮೆಸೇಜ್ ಮಾಡಿ ಈ ಧಮಕಿ ಹಾಕಿದ್ದಾನೆ. ಯುವತಿಯ ಕುಟುಂಬ ಆತಂಕಗೊಂಡು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
Leave a Comment