ಇಂದಿನಿಂದ ಚಳಿಗಾಲ ಅಧಿವೇಶನ ಆರಂಭ; ವಕ್ಫ್​ ಮಸೂದೆ ಮಂಡನೆಗೆ ಕೇಂದ್ರ ಸರ್ಕಾರ ಸಜ್ಜು

New Project 4 1
Spread the love

ನ್ಯೂಸ್ ಆ್ಯರೋ: ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಕದನದ ಬಳಿಕ ಸಂಸತ್ತಿನ ಚಳಿಗಾಲದ ಅಧಿವೇಶನ ಇವತ್ತಿನಿಂದ ಆರಂಭವಾಗಲಿದೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಹೊಸ ಮಸೂದೆಗಳನ್ನ ಮಂಡಿಸಲು ಸಜ್ಜಾಗಿದೆ. ಅದರಲ್ಲೂ ಅತಿಮುಖ್ಯವಾಗಿ ವಕ್ಫ್ ಕಾಯಿದೆ ತಿದ್ದುಪಡಿ ಮಸೂದೆ ಪ್ರಮುಖವಾಗಿದೆ. ವಿಪಕ್ಷಗಳು ಮೋದಿ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿವೆ.

ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಕದನಕ್ಕೆ ತೆರೆಬಿದ್ದಿದೆ. ಮರಾಠ ನೆಲದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಫಲಿತಾಂಶ ಹೊರ ಬೀಳ್ತಿದ್ದಂತೆ ಇವತ್ತಿನಿಂದ ಪಾರ್ಲಿಮೆಂಟ್‌ ಅಧಿವೇಶನದ ಕದನ ಶುರುವಾಗಲಿದೆ. ಮಹತ್ವದ ಮಸೂದೆಗಳನ್ನ ಮಂಡಿಸಲು ಮೋದಿ ಸರ್ಕಾರ ಸಜ್ಜಾಗಿದೆ. ಇವತ್ತಿನಿಂದ ಸದನ ಕದನ ಕೌತುಕ ಹೆಚ್ಚಾಗಲಿದೆ.

ದೇಶದಲ್ಲಿ ಚಳಿಗಾಲ ಆರಂಭವಾಗಿದೆ. ದೆಹಲಿಯಲ್ಲಿ ಚಳಿಯ ಜೊತೆ ವಾಯುಮಾಲಿನ್ಯದ ಕಾರ್ಮೋಡ ಕವಿದಿದೆ. ಇದೇ ಹೊತ್ತಲ್ಲಿಇವತ್ತಿನಿಂದ ಪಾರ್ಲಿಮೆಂಟ್‌ನಲ್ಲಿ ಅಧಿವೇಶನ ಆರಂಭವಾಗಲಿದೆ. ಆಡಳಿತ ಪಕ್ಷ ಮತ್ತು ವಿಪಕ್ಷಗಳ ಮಧ್ಯೆ ಬಿಸಿಬಿಸಿ ಚರ್ಚೆ ನಡೆಯಲಿದೆ. ಜೊತೆಗೆ ಮಹತ್ವದ ಬಿಲ್‌ಗಳನ್ನ ಮಂಡಿಸಲು ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸಜ್ಜಾಗಿದೆ. ಈ ಭಾರಿಯ ಅಧಿವೇಶನದಲ್ಲಿ 15 ಮಸೂದೆಗಳನ್ನ ಮಂಡಿಸಲು ಕೇಂದ್ರ ಸರ್ಕಾರದ ನಿರ್ಧಾರ ಮಾಡಿದೆ ಅಂತ ತಿಳಿದುಬಂದಿದೆ.

ಸಂಸತ್ ಚಳಿಗಾಲದ ಅಧಿವೇಶನದಲ್ಲಿ 15 ಮಸೂದೆಗಳನ್ನ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜಂಟಿ ಪಾರ್ಲಿಮೆಂಟರಿ ಸಮಿತಿಯಿಂದ ಮಸೂದೆಗಳ ಪರಿಷ್ಕರಣೆ ಆಗಿದೆ. ಸಂಸದ ಜಗದಂಬಿಕಾ ಪಾಲ್ ಅಧ್ಯಕ್ಷತೆ ಸಮಿತಿಯಿಂದ ಮಸೂದೆಗಳ ಪರಿಷ್ಕರಣೆ ಮುಗಿದಿದೆ. ಸಂಸತ್ ಅಧಿವೇಶನದ ಮೊದಲ ವಾರದ ಕೊನೆಯ ದಿನ ಮಸೂದೆಗಳ ಮಂಡನೆಗೆ ನಿರ್ಧರಿಸಲಾಗಿದೆ.

ಮುಖ್ಯವಾಗಿ ವಕ್ಛ್ ಕಾಯಿದೆ ತಿದ್ದುಪಡಿ ಮಸೂದೆ ಮಂಡನೆಗೂ ಕೇಂದ್ರ ಸರ್ಕಾರ ಸಜ್ಜಾಗಿದೆ. ಈ ಮೂಲಕ ವಕ್ಛ್ ಬೋರ್ಡ್‌ಗೆ ಇರುವ ಅಧಿಕಾರಗಳಿಗೆ ಕತ್ತರಿ ಹಾಕಲು ಮೋದಿ ಸರ್ಕಾರ ಮುಂದಾಗಿದೆ. ವಕ್ಫ್‌ನ ಪರಮಾಧಿಕಾರಕ್ಕೆ ಮಸೂದೆ ಮೂಲಕ ಬ್ರೇಕ್ ಹಾಕಲು ಸಜ್ಜಾಗಿದೆ. ಜೊತೆಗೆ ಕೋಸ್ಟಲ್ ಶಿಪ್ಪಿಂಗ್ ಬಿಲ್, ಇಂಡಿಯನ್ ಪೋರ್ಟ್ಸ್ ಬಿಲ್, ಭಾರತೀಯ ವಾಯುಯಾನ ವಿಧೇಯಕ, ದಿ ಮರ್ಚೆಂಟ್‌ ಶಿಪ್ಪಿಂಗ್ ಮಸೂದೆ, ದೇಶದಲ್ಲಿ ಹೊಸ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆ ಮಸೂದೆ ಮಂಡನೆಗೆ ಕೇಂದ್ರ ಸರ್ಕಾರ ಸಜ್ಜಾಗಿದೆ. ಆದ್ರೆ, ಒನ್ ನೇಷನ್, ಒನ್ ಎಲೆಕ್ಷನ್ ಮಸೂದೆ ಈ ಪಟ್ಟಿಯಲ್ಲಿ ಸೇರ್ಪಡೆ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!