ಬೆಳಗ್ಗೆ ಬಿಸಿ ನೀರು ಕುಡಿದರೆ ಏನಾಗುತ್ತೆ ?; ಇದರ ಲಾಭಗಳು ನಿಮಗೆ ತಿಳಿದರೆ ಅಚ್ಚರಿ ಪಡುತ್ತೀರಿ
ನ್ಯೂಸ್ ಆ್ಯರೋ: ನಮ್ಮಲ್ಲಿ ಹೆಚ್ಚಿನವರು ಹಗಲಿನಲ್ಲಿ ಸರಿಯಾಗಿ ನೀರು ಕುಡಿಯುವುದಿಲ್ಲ. ಬೆಳಗ್ಗೆ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ದೇಹದಲ್ಲಿ ಹಲವು ಬದಲಾವಣೆಗಳು ಆಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಬೆಳಗ್ಗೆ ಎದ್ದ ನಂತರ ಬಿಸಿ ನೀರು ಕುಡಿಯುವುದರಿಂದ ಆಗುವ ಲಾಭಗಳು ತಿಳಿದರೆ ಶಾಕ್ ಆಗುತ್ತೀರಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ಯಾವೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ತಿಳಿಯೋಣ.
ಖಾಲಿ ಹೊಟ್ಟೆಯಲ್ಲಿ ಬಿಸಿನೀರನ್ನು ಸೇವಿಸುವುದರಿಂದ ರಕ್ತನಾಳಗಳು ಕ್ರಿಯಾಶೀಲವಾಗುತ್ತವೆ. ಜೊತೆಗೆ ದೇಹದಾದ್ಯಂತ ರಕ್ತ ಪೂರೈಕೆಯನ್ನು ವೇಗಗೊಳಿಸುತ್ತದೆ. ಪರಿಣಾಮವಾಗಿ ವಿವಿಧ ಘಟಕಗಳ ಕಾರ್ಯಕ್ಷಮತೆ ಸುಧಾರಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಯುರೋಪಿಯನ್ ಜರ್ನಲ್ ಆಫ್ ಅಪ್ಲೈಡ್ ಫಿಸಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನವು ಹೃದ್ರೋಗ ತಡೆಗಟ್ಟುವಲ್ಲಿ ವಿಶೇಷವಾಗಿ ಸಹಾಯಕವಾಗಿದೆ ಎಂದು ತೋರಿಸಿದೆ.
ಚಳಿಗಾಲದಲ್ಲಿ ಗಂಟಲು ನೋವು ಸಾಮಾನ್ಯ ಸಮಸ್ಯೆಯಾಗಿದೆ. ಜೊತೆಗೆ ಶೀತದಿಂದ ಕಫ ಮತ್ತು ಕೆಮ್ಮು ತೊಂದರೆ ಆಗುತ್ತದೆ. ಇಂತಹ ಎಲ್ಲ ಸಮಸ್ಯೆಗಳಿಗೆ ಬಿಸಿನೀರು ಉತ್ತಮ ಮಾರ್ಗ ಎನ್ನುತ್ತಾರೆ ತಜ್ಞರು.
ಜೀರ್ಣಾಂಗ ವ್ಯವಸ್ಥೆ ಸ್ವಚ್ಛಗೊಳಿಸಲು ಬೆಚ್ಚಗಿನ ನೀರು ಸಹಾಯ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ. ತಣ್ಣೀರಿಗಿಂತ ಬಿಸಿನೀರು ಆಹಾರ ಬೇಗ ಜೀರ್ಣವಾಗಲು ಸಹಕಾರಿಯಾಗಿದೆ. ಬಿಸಿನೀರು ದೇಹದ ಉಷ್ಣತೆ ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಜೀರ್ಣಕ್ರಿಯೆಯ ಪ್ರಕ್ರಿಯೆಯು ಆರೋಗ್ಯಕರವಾಗಿರುತ್ತದೆ. ಹೆಚ್ಚಿನ ಕ್ಯಾಲೋರಿಗಳು ಬರ್ನ್ ಆಗುತ್ತದೆ. ಇದಲ್ಲದೆ, ಇದು ಹೊಟ್ಟೆ ತುಂಬಿದ ಭಾವನೆಯನ್ನು ಉಂಟುಮಾಡುತ್ತದೆ. ಜೊತೆಗೆ ತೆಗೆದುಕೊಳ್ಳುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಕೆಲವರಿಗೆ ಬೆಳಗ್ಗೆ ಮೂಗು ಕಟ್ಟಿಕೊಂಡಿರುತ್ತದೆ. ಉಸಿರಾಟ ಸರಿಯಾಗಿ ಆಗುತ್ತಿಲ್ಲ. ಅಂತಹವರು ಬಿಸಿನೀರು ಸೇವಿಸಿದರೆ ಆ ಸಮಸ್ಯೆ ಕಡಿಮೆಯಾಗುತ್ತದೆ. ಇದರಿಂದ ಸೈನಸ್ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ ಎನ್ನಲಾಗಿದೆ ಎಂದು ವೈದ್ಯರು ಹೇಳುತ್ತಾರೆ.
ಬೆಳಗ್ಗೆ ಬಿಸಿ ನೀರಿನಿಂದ ಕುಡಿಯುವುದರಿಂದ ದೇಹದಲ್ಲಿರುವ ಕಲ್ಮಶಗಳು ಹೊರಹೋಗುತ್ತವೆ. ಇದನ್ನು ಡಿಟಾಕ್ಸಿಂಗ್ ಎಂದು ಕರೆಯಲಾಗುತ್ತದೆ. ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಿದಾಗ ತ್ವಚೆ ಫ್ರೆಶ್ ಆಗುತ್ತದೆ. ಇದು ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಬಿಸಿನೀರು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ
Leave a Comment