ಬಿಗ್‌ಬಾಸ್ ವಿರುದ್ಧ ದಾಖಲಾಯ್ತು ಕೇಸ್ : ಶೋ ಮೊಟಕಾಗುತ್ತಾ?

ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-11 ಕಾರ್ಯಕ್ರಮದ ವಿರುದ್ಧ ಇದೀಗ ಮಾನವ ಹಕ್ಕುಗಳ ಪರ ಹೋರಾಟಗಾರ್ತಿ ಎಂ.ನಾಗಮಣಿ ಎಂಬುವವರು ನೀಡಿದ್ದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಹೀಗಾಗಿ ಬಿಗ್‌ಬಾಸ್ ಶೋಗೆ ಭಾರೀ ಕಂಟಕ ಎದುರಾಗಿದ್ದು, ಕಾರ್ಯಕ್ರಮ ಮೊಟುಕುಗೊಳ್ಳುತ್ತಾ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಶೋನಲ್ಲಿ ಸ್ಪರ್ಧಿಗಳನ್ನು ನರಕವಾಸಿ ಹಾಗೂ ಸ್ವರ್ಗವಾಸಿಗಳೆಂದು ವಿಂಗಡಿಸಿ, ನರಕವಾಸಿ ಎಂದು ಬ್ಯಾರಕ್ ನಲ್ಲಿರುವ ಸ್ಪರ್ಧಿಗಳಿಗೆ ಮೂಲ ಸೌಕರ್ಯ ನೀಡದೇ, ಪೂರಕ ಆಹಾರ ಒದಗಿಸದೇ ಅವರನ್ನು ಪ್ರತ್ಯೇಕವಾಗಿ ಬಂಧನದಲ್ಲಿರಿಸಿ ಹಿಂಸೆಯನ್ನು ನೀಡಲಾಗುತ್ತಿದೆ.
ಅಲ್ಲದೇ ಸಂವಿಧಾನದ ಪ್ರಕಾರ ಜೀವಿಸುವ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಾಗಮಣಿ ಎಂಬುವವರು ದೂರನ್ನು ನೀಡಿದ್ದರು. ಶೋನ ಈ ಎರಡು ಪರಿಕಲ್ಪನೆ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು.
ಅದರಲ್ಲೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಮಲಗುವ ವ್ಯವಸ್ಥೆ ನೀಡದೆ ಅವರನ್ನು ದೈಹಿಕ ಭಾದೆ ತೀರಿಸಿಕೊಳ್ಳಲು ಮತ್ತೊಬ್ಬರ ಅನುಮತಿ ಮೇರೆಗೆ ಶೌಚಾಲಯ ಉಪಯೋಗಿಸಲು ಬಲವಂತಕ್ಕೆ ಒಳಪಡಿಸುವುದು ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ಈ ಮೂಲಕ ಕೂಡಾ ಬಿಗ್ ಬಾಸ್ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಪ್ರಕರಣ ದಾಖಲಾಗಿದೆ.
Leave a Comment