Web Story : ವಯನಾಡ್ ಭೂಕುಸಿತಕ್ಕೆ ಕ್ರೂರವಾಗಿ ಸತ್ತ‌ ಗರ್ಭಿಣಿ ಹೆಣ್ಣಾನೆಯ ಶಾಪ ಕಾರಣವೇ? – ಚರ್ಚೆಯಾಗ್ತಿರೋದೇನು? ನಾಲ್ಕು ವರ್ಷಗಳ ಹಿಂದೆ ಏನಾಗಿತ್ತು?

Spread the love

ನ್ಯೂಸ್ ಆ್ಯರೋ‌ : ಕೇರಳದ ವಯನಾಡುವಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತ ದುರಂತಕ್ಕೆ ನಾಲ್ಕು ವರ್ಷಗಳ ಹಿಂದೆ ಜನರ ಮೋಸಕ್ಕೆ ಸಿಕ್ಕಿ ಸತ್ತ ಗರ್ಭಿಣಿ ಹೆಣ್ಣಾನೆಯ ಶಾಪವೇ ಕಾರಣವೇ? ಆನೆಗಳ ಶಾಪದಿಂದ ಭೂಕುಸಿತಕ್ಕೆ ಸಿಲುಕಿ ಗ್ರಾಮಗಳು ಕೊಚ್ಚಿ ಹೋಗಿದೆಯೇ? ಸದ್ಯ ಇಂಥದ್ದೊಂದು ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯ ವಿಷಯವಾಗಿದೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಮಲ್ಲಪ್ಪುರಂ ಗ್ರಾಮದ ಜನರು ಅತ್ಯಂತ ಕ್ರೂರವಾಗಿ ವರ್ತಿಸಿದ್ದರು. ಹೆಣ್ಣು ಆನೆಯೊಂದು ನದಿ ಪಾತ್ರದಲ್ಲಿ ಆಹಾರ ಅರಸಿ ಗ್ರಾಮಕ್ಕೆ ಬಂದಿತ್ತು. ಯಾರಿಗೂ ಏನೂ ಮಾಡದೆ ಅದು ತನ್ನ ದಾರಿಯಲ್ಲಿ ಸಾಗುತ್ತಿದ್ದಾಗ ಕೆಲವು ಸ್ಥಳೀಯರು ಅನಾನಸ್‌ ಹಣ್ಣನ್ನು ನೀಡಿದ್ದರು.

ಆದರೆ ಆ ಅನಾನಸ್‌ನಲ್ಲಿ ಸ್ಫೋಟಕಗಳನ್ನು ಇರಿಸಲಾಗಿತ್ತು. ಅನುಮಾನ ಎಂಬುದೇ ಗೊತ್ತಿರದ ಮೂಕ ಜೀವಿ ಆ ದುಷ್ಟ ಜನರನ್ನು ನಂಬಿ, ಅನಾನಸ್ ಹಣ್ಣನ್ನು ತೆಗೆದುಕೊಂಡು ಬಾಯಿಗೆ ಹಾಕಿಕೊಂಡಿತು. ತಕ್ಷಣವೇ ದೊಡ್ಡ ಸದ್ದಿನೊಂದಿಗೆ ಹಣ್ಣುಗಳು ಸ್ಫೋಟಗೊಂಡಿತು.

ಏಕಾಏಕಿ ಸ್ಫೋಟಗೊಂಡಿದ್ದರಿಂದ ಅದರ ತೀವ್ರತೆಗೆ ಮೂಕ ಪ್ರಾಣಿಯ ಬಾಯಿಯಿಂದ ರಕ್ತ ಹರಿಯಿತು. ಅಂತಹ ನೋವಿನಲ್ಲೂ ಅದು ಮೋಸ ಮಾಡಿದ ಕಿಡಿಗೇಡಿಗಳ ಮೇಲೆ ದಾಳಿ ಮಾಡಲಿಲ್ಲ. ಬಾಯಿಯಿಂದ ರಕ್ತ ಬರುತ್ತಲೇ ಇತ್ತು. ಅದೇ ನೋವಿನಲ್ಲಿ ಆನೆ ಊರು ಬಿಟ್ಟಿತು.

ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನೊಂದಿಗೆ ತೀವ್ರ ಹಸಿವು ಒಂದೆಡೆಯಾದರೆ, ಸ್ಫೋಟದಿಂದ ಸಂಭವಿಸಿದ ನೋವು ಇನ್ನೊಂದೆಡೆ. ಏನು ಮಾಡಬೇಕೆಂದು ತೋಚದೆ ಮೂಕ ಜೀವಿ ನದಿಯ ನೀರಿನ ಒಳಗಡೆ ಇಳಿಯಿತು. ನೀರಿನಲ್ಲಾದರೂ ನೋವು ಕಡಿಮೆಯಾಗುತ್ತಾ ಅನ್ನೋ ಆಸೆ ಆ ಆನೆಯದ್ದು. ವೆಲ್ಲಿಯರ್ ನದಿಯಲ್ಲೇ ಆನೆ ಉಳಿದುಕೊಂಡಿತು.

ಇತ್ತ ಆನೆ ಸ್ಫೋಟಕಗಳನ್ನು ತಿಂದಿರುವ ವಿಷಯ ಅರಣ್ಯ ಇಲಾಖೆ ತಿಳಿಯಿತು. ತಕ್ಷಣ ಅರಣ್ಯ ಸಿಬ್ಬಂದಿ, ಸುರೇಂದರ್ ಮತ್ತು ನೀಲಕಂಠನ್ ಎಂಬ ಇನ್ನೆರಡು ಆನೆಗಳನ್ನು ತಂದು ನದಿಯಿಂದ ಆನೆಯನ್ನು ಹೊರತೆಗೆಯಲು ಯತ್ನಿಸಲಾಯಿತು.

ಆದರೆ, ಗಾಯದ ನೋವು ಸಹಿಸಲಾಗದೆ ಆನೆ ಅಲ್ಲೇ ಉಳಿದುಕೊಂಡಿತು. ಸಾಕಷ್ಟು ಪ್ರಯತ್ನಗಳನ್ನು ನಡೆಸಲಾಯಿತು. ಆದರೆ, ಅಂತಿಮವಾಗಿ 2020ರ ಮೇ 27ರಂದು ಸಂಜೆ 4 ಗಂಟೆಗೆ ಆನೆ ಮೃತಪಟ್ಟಿರುವುದು ಕಂಡುಬಂತು. ತನ್ನ ಗರ್ಭದಲ್ಲಿರುವ ಮಗುವಿನೊಂದಿಗೆ ಹೆಣ್ಣಾನೆ ಪ್ರಾಣ ಬಿಟ್ಟಿತ್ತು.

ಆಗಿನ ಮಲ್ಲಪ್ಪುರಂ ಅರಣ್ಯ ಇಲಾಖೆ ಅಧಿಕಾರಿ ಮೋಹನ್ ಕೃಷ್ಣನ್ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಹೃದಯವಿದ್ರಾವಕ ಘಟನೆಯನ್ನು ಬಹಿರಂಗಪಡಿಸಿದರು. ಅಲ್ಲದೆ, ಸತ್ತ ಆನೆಯನ್ನು ಹೊರತಂದು ಪರೀಕ್ಷಿಸಿದಾಗ ಅದರ ಗರ್ಭದಲ್ಲಿ ಮರಿ ಆನೆ ಇರುವುದು ವೈದ್ಯರಿಗೆ ಗೊತ್ತಾಯಿತು. ಕೊನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಅಂತಿಮ ಸಂಸ್ಕಾರ ನೆರವೇರಿಸಿದ್ದು, ಬಳಿಕ ಅನಾನಸ್ ನಲ್ಲಿ ಸ್ಫೋಟಕ ಇಟ್ಟವನನ್ನು ಬಂಧಿಸಲಾಗಿತ್ತು.

ಮೊನ್ನೆಯಷ್ಟೇ ಆನೆ ಬಲಿಯಾದ ಊರಿನಲ್ಲಿ ಪ್ರವಾಹ ಬಂದಿತ್ತು. ಅಲ್ಲಿದ್ದವರೆಲ್ಲ ಸತ್ತು ಹೋದರು. ಈ ವಿನಾಶಕ್ಕೆ ಕಾರಣ ಆ ಊರಿನವರು. ಏಕೆಂದರೆ, ಆನೆಯನ್ನು ಕೊಂದಿದ್ದೇ ಇದಕ್ಕೆಲ್ಲ ಕಾರಣ ಎನ್ನುತ್ತಿದ್ದಾರೆ. ಆದರೆ, ಇದನ್ನು ಕೆಲ ನೆಟ್ಟಿಗರು ತಿರಸ್ಕರಿಸಿದ್ದಾರೆ. ಭೂಕುಸಿತ ಸಂಭವಿಸಿರುವುದು ವಯನಾಡುವಿನಲ್ಲಿ ಆದರೆ, ಆನೆ ಸತ್ತಿದ್ದು ಮಲಪ್ಪುರಂನಲ್ಲಿ. ನಾಲ್ಕು ವರ್ಷಗಳ ಹಿಂದೆ ನಡೆದ ಘಟನೆಗೂ ಈಗಿನ ದುರಂತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಮ್ಮದೇ ವಾದ ಮಂಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಪ್ರಕೃತಿಯಂತೂ ವಯನಾಡ್ ನ ಮೇಲೆ ಕೋಪ ತೋರಿದ್ದು ನಿಜ.‌ ಮುನ್ನೂರಕ್ಕೂ ಅಧಿಕ ಜನರು ಉಸಿರು ಚೆಲ್ಲುವಂತೆ ಮಾಡಿದ ಆ ದುರಂತಕ್ಕೆ ಮಿಡಿಯದವರೇ ಇಲ್ಲ. ಮಲಗಿದಲ್ಲೇ ಸಾವಿನ ಬಾಗಿಲು ಬಡಿದ ಅದೆಷ್ಟೋ ದುರಾದೃಷ್ಟ ಜೀವಗಳ ಸಾವಿನ ಕಹಾನಿ, ಸಂಬಂಧಿಗಳನ್ನು ‌ಕಳೆದುಕೊಂಡವರ ದುಃಖ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು…

Leave a Comment

Leave a Reply

Your email address will not be published. Required fields are marked *