
ಕಲಿಯುಗದ ಗಾಂಧಾರಿಯಾಗಲು ಹೊರಟ ಮಹಿಳೆ – 105 ಮಕ್ಕಳಿಗೆ ತಾಯಿಯಾಗುವ ಆಸೆ ವ್ಯಕ್ತಪಡಿಸಿದ ಕ್ರಿಸ್ಟಿನಾ..!!
- ವೈರಲ್ ನ್ಯೂಸ್
- November 17, 2023
- No Comment
- 86
ನ್ಯೂಸ್ ಆ್ಯರೋ : ಈಗಿನ ಕಾಲದಲ್ಲಿ ಮಕ್ಕಳನ್ನು ಹೊಂದುವ ವಿಚಾರದಲ್ಲಿ ಒಂದು ಅಥವಾ ಎರಡೇ ಸಾಕು ಎನ್ನುವವರೇ ಹೆಚ್ಚು. ಹೀಗಿರುವಾಗ 100 ಮಕ್ಕಳೆಂದರೆ ಊಹಿಸುವುದು ಸಾಧ್ಯವೇ ಇಲ್ಲ.
ಪೌರಾಣಿಕ ಕಥೆಗಳಲ್ಲಿ ಗಾಂಧಾರಿ ಮಾತ್ರ 100 ಮಕ್ಕಳ ತಾಯಿಯಾಗಿದ್ದಳು. ಆದರೆ ಈಗ ಈ ಮಹಿಳೆ ಗಾಂಧಾರಿಯಾಗಲು ಬಯಸಿದ್ದಾಳೆ. ಅಂದರೆ 100 ಮಕ್ಕಳನ್ನು ಹೊಂದುವ ಆಸೆ ಇವಳಿಗಿದೆಯಂತೆ.
ಸೋವಿಯತ್ ರಿಪಬ್ಲಿಕ್ ಆಫ್ ಜಾರ್ಜಿಯಾದ ಬಟುಮಿಯಲ್ಲಿ ವಾಸಿಸುವ ಈ ಮಹಿಳೆ ಕ್ರಿಸ್ಟಿನಾ ಒಜ್ಟುರ್ಕ್. ತನಗಿಂತ 32 ವರ್ಷ ದೊಡ್ಡವನನ್ನು ವಿವಾಹವಾಗಿರುವ ಕ್ರಿಸ್ಟಿನಾಗೆ ಈಗ 26 ವರ್ಷ. ಆಕೆಯ ಪತಿ ಗ್ಯಾಲಿಪ್ ಗೆ 58. ಇವರು 105 ಮಕ್ಕಳಿಗೆ ಪೋಷಕರಾಗಬೇಕೆಂದು ಹೇಳುತ್ತಿದ್ದು, ಇದನ್ನು ಕೇಳಿ ಎಲ್ಲರೂ ಆಶ್ಚರ್ಯಪಟ್ಟಿದ್ದಾರೆ.
ಈಗಾಗಲೇ ಈ ದಂಪತಿಗೆ 22 ಮಕ್ಕಳಿದ್ದಾರೆ. ಎಲ್ಲರನ್ನೂ ತುಂಬಾ ಪ್ರೀತಿಯಿಂದ ಸಾಕುತ್ತಿರುವ ಕ್ರಿಸ್ಟಿನಾ ತಮ್ಮ ಮಕ್ಕಳನ್ನು ಆರೋಗ್ಯವಾಗಿ, ಸಂತೋಷದಿಂದ ಮತ್ತು ಪ್ರಾಮಾಣಿಕವಾಗಿ ಬೆಳೆಸುತ್ತೇನೆ ಎಂದು ಹೇಳಿದ್ದಾರೆ.
26 ವಯಸ್ಸಿನ ಕ್ರಿಸ್ಟಿನಾ 22 ಮಕ್ಕಳಿಗೆ ಬಾಡಿಗೆ ತಾಯ್ತನದ ಮೂಲಕ ಜನ್ಮ ನೀಡಿದ್ದಾರೆ. 1997 ರಿಂದ ಜಾರ್ಜಿಯಾದಲ್ಲಿ ಬಾಡಿಗೆ ತಾಯ್ತನ ಕಾನೂನುಬದ್ಧವಾಗಿದೆ. ಬಾಡಿಗೆ ತಾಯ್ತನಕ್ಕೆ ಸುಮಾರು 7 ಲಕ್ಷ ರೂ. ಪಾವತಿಸಬೇಕಿದೆ. ಒಟ್ಟಿನಲ್ಲಿ ಕ್ರಿಸ್ಟಿನಾ ಅವರಿಗೆ ಹೆಚ್ಚು ಮಕ್ಕಳನ್ನು ಹೊಂದುವ ಆಸೆಗೆ ಬಾಡಿಗೆ ತಾಯ್ತನದತ್ತಲೇ ಅವರು ಗಮನ ಹರಿಸಿದ್ದಾರೆ.
ಗಲಿಪ್ ನನ್ನು ಮೊದಲು ಭೇಟಿಯಾದ ಕ್ರಿಸ್ಟಿನಾ ಆತನ ವಯಸ್ಸಿನ ಬಗ್ಗೆ ಯೋಚಿಸಿರಲಿಲ್ಲ. ಮೊದಲ ಭೇಟಿಯಲ್ಲೇ ಅವರಿಬ್ಬರಿಗೆ ಪ್ರೀತಿಯಾಗಿದೆ ಎನ್ನುತ್ತಾರೆ ಕ್ರಿಸ್ಟಿನಾ.