Rohit Sharma's Daughter, Samaira's Video Goes VIRAL After World Cup Heartbreak: 'He'll Laugh Again'

‘ಅಪ್ಪ ರೂಂ ನಲ್ಲಿದ್ದಾರೆ, ಅವರು ನಗಲು ಇನ್ನೊಂದು ತಿಂಗಳು ಬೇಕು’! – ರೋಹಿತ್ ಶರ್ಮಾ‌ ಮಗಳ ಕ್ಯೂಟ್ ವಿಡಿಯೋ ವೈರಲ್!

ನ್ಯೂಸ್ ಆ್ಯರೋ : ಇತ್ತೀಚೆಗಷ್ಟೇ ನಡೆದ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಟೀಂ‌ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋಲು ಕಂಡಿತ್ತು. ಕೋಟ್ಯಂತರ ಭಾರತೀಯರ ಕನಸು, ಹಾರೈಕೆ ನೆಲಕಚ್ಚಿತ್ತು. ಸಹಜವಾಗಿಯೇ ರೋಹಿತ್ ಪಡೆ ಮಂಕಾಗಿತ್ತು. ತಂಡದ ನಾಯಕ ರೋಹಿತ್ ಶರ್ಮಾ ಕೂಡ ಈ ಹೀನಾಯ ಸೋಲಿನಿಂದ ಕಂಗಾಲಾಗಿ ‘ಈ ದಿನ ನಮ್ಮದಾಗಿರಲಿಲ್ಲ’ ಎಂಬ ಪೋಸ್ಟ್ ಹಾಕಿದ್ದರು. ಇದೀಗ ತಂದೆಯ ಬಗ್ಗೆ ರೋಹಿತ್ ಶರ್ಮಾ ಪುತ್ರಿ ಸಮೈರಾ ಮಾತನಾಡಿದ್ದು, ಈ ಕ್ಯೂಟ್ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ವೈರಲ್ ಆಯ್ತು ಸಮೈರಾ ಕ್ಯೂಟ್ ವಿಡಿಯೋ!

ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಮತ್ತು 5 ವರ್ಷದ ಪುತ್ರಿ ಸಮೈರಾ ಹೋಟೆಲ್ ಒಂದರಿಂದ ಹೊರ ಬರುತ್ತಿರುವ ವೇಳೆ ಮಾಧ್ಯಮ ವರದಿಗಾರರು ರೋಹಿತ್ ಪುತ್ರಿಯನ್ನು ಮಾತನಾಡಿಸಿದ್ದಾರೆ. ಈ ವೇಳೆ ಪತ್ರಕರ್ತರ ಪ್ರಶ್ನೆಗಳಿಗೆ ಸಮೈರಾ ಮುಗ್ದತೆಯಿಂದ ಉತ್ತರಿಸಿದ್ದಾಳೆ. ಇದು ಹಳೆಯ ವಿಡಿಯೋ ಆಗಿದ್ದು, ರೋಹಿತ್ ಫ್ಯಾಮಿಲಿ ಲಂಡನ್‌ಗೆ ತೆರಳಿದಾಗ ತೆಗೆದ ವಿಡಿಯೋ ಎನ್ನಲಾಗಿದೆ. ಸದ್ಯ, ವಿಶ್ವಕಪ್ ಸೋಲಿನ ಬಳಿಕ ಈ ವಿಡಿಯೋ ವೈರಲ್ ಆಗಿದೆ.

ಸಮೈರಾ ಹೇಳಿದ್ದೇನು?

ಲಂಡನ್‌ನಲ್ಲಿರು ಹೋಟೆಲ್ ಒಂದರಿಂದ ರೋಹಿತ್ ಪತ್ನಿ ಹಗೂ ಪುತ್ರಿ ಹೊರಬರುತ್ತಿದ್ದ ವೇಳೆ ಪತ್ರಕರ್ತರು, ‘ನಿಮ್ಮ ಅಪ್ಪ ಎಲ್ಲಿದ್ದಾರೆ’ ಎಂದು ಸಮೈರಾಳನ್ನು ಕೇಳಿದ್ದಾರೆ. ಇದಕ್ಕೆ ರೋಹಿತ್ ಪುತ್ರಿ, ‘ಅಪ್ಪಾ ರೂಂ ನಲ್ಲಿದ್ದಾರೆ. ಅವರು ಆರೋಗ್ಯವಾಗಿದ್ದಾರೆ ಆದರೆ ನನ್ನ ಅಪ್ಪ ನಗಲು ಇನ್ನು ಒಂದು ತಿಂಗಳು ಬೇಕು’ ಎಂದಿದ್ದಾಳೆ. ಸದ್ಯ, ಈ ವಿಡಿಯೋವನ್ನು ನೆಟ್ಟಿಗರು ಎಲ್ಲೆಡೆ ಶೇರ್ ಮಾಡುತ್ತಾ, ತರಹೆವಾರಿ ಕಮೆಂಟ್ ಹಾಕುತ್ತಿದ್ದಾರೆ.

ಇನ್ನು, ವಿಶ್ವಕಪ್ ಬಗ್ಗೆ ಹೇಳುವುದಾದರೆ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಂ ಇಂಡಿಯಾ ಅಮೋಘ ಪ್ರದರ್ಶನ ತೋರುವ ಮೂಲಕ ಫೈನಲ್‌ ಪ್ರವೇಶಿಸಿತ್ತು. ರೋಹಿತ್ ಶರ್ಮಾ ಓರ್ವ ನಾಯಕನಾಗಿ ಮಾತ್ರವಲ್ಲದೇ ತಂಡಕ್ಕೆ ಆರಂಭಿಕನಾಗಿಯೂ ಸ್ಪೋಟಕ ಆರಂಭ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. 11 ಪಂದ್ಯಗಳನ್ನಾಡಿದ ರೋಹಿತ್ ಶರ್ಮಾ ಒಂದು ಶತಕ ಹಾಗೂ 3 ಅರ್ಧಶತಕ ಸಹಿತ 54.27ರ ಬ್ಯಾಟಿಂಗ್ ಸರಾಸರಿಯಲ್ಲಿ 597 ರನ್ ಸಿಡಿಸಿದ್ದರು. ಇದಷ್ಟೇ ಅಲ್ಲದೇ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಐಸಿಸಿ ಪ್ರಕಟಿಸಿದ, ಐಸಿಸಿ ಟೀಂ ಆಫ್‌ ದಿ ಟೂರ್ನಮೆಂಟ್‌ನಲ್ಲೂ ನಾಯಕನಾಗಿ ಸ್ಥಾನ ಪಡೆದಿದ್ದರು.