ಕಡಲ ತೀರದ ಸಂಭೋಗಕ್ಕೆ ಬ್ರೇಕ್ ಹಾಕಿದ ನೆದರ್ ಲ್ಯಾಂಡ್ – ಕಾರಣವೇನು?

ಕಡಲ ತೀರದ ಸಂಭೋಗಕ್ಕೆ ಬ್ರೇಕ್ ಹಾಕಿದ ನೆದರ್ ಲ್ಯಾಂಡ್ – ಕಾರಣವೇನು?

ನ್ಯೂಸ್ ಆ್ಯರೋ‌ : ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ವಿದೇಶಿಗರ ನೆಚ್ಚಿನ ಹವ್ಯಾಸ. ಅದರಲ್ಲೂ ಕಡಲ ಕಿನಾರೆಗೆ ಭೇಟಿ ನೀಡಿ ಅವರು ತುಂಡು ಬಟ್ಟೆ ತೊಟ್ಟು ಬಿಸಿಲಿಗೆ ಮೈ ಒಡ್ಡಿ ಮಲಗುವುದನ್ನು ತುಂಬಾ ಇಷ್ಟ ಪಡುತ್ತಾರೆ. ಕೆಲವೆಡೆ ಸಮುದ್ರ ಬದಿಯಲ್ಲಿ ಸಂಭೋಗಿಸುತ್ತಾರೆ. ಆದರೆ ಇದಕ್ಕೆ ಈಗ ನೆದರ್ ಲ್ಯಾಂಡ್ ಆಕ್ಷೇಪ ವ್ಯಕ್ತಪಡಿಸಿದೆ.

ಬೀಚ್ ಗಳಲ್ಲಿ ಸಂಭೋಗಿಸುವುದಕ್ಕೆ ನಿರ್ಬಂಧ ಹೇರಲು ನೆದರ್ ಲ್ಯಾಂಡ್ ಸರಕಾರ ಮುಂದಾಗಿದ್ದು, ಈ ಬಗ್ಗೆ ಪ್ರವಾಸಿಗರಲ್ಲಿ ಮನವಿ ಮಾಡಿದೆ. ಆಂಸ್ಟರ್ ಡ್ಯಾಮ್ ನಗರವು ತನ್ನ ಕಡಲ ತೀರದಲ್ಲಿ ಲೈಂಗಿಕ ಚಟುವಟಿಕೆ ನಡೆಸುವುದನ್ನು ನಿಷೇಧಿಸಿದೆ. ಜೊತೆಗೆ ವೀರೆ ನಗರವು ಬೀಚ್ ನಲ್ಲಿ ಸಂಭೋಗ ಬೇಡ ಎಂಬ ಅಭಿಯಾನ ಕೈಗೊಂಡಿದೆ.

ಮರಳಿನ ದಿಬ್ಬಗಳಲ್ಲಿ ರತಿ ಕ್ರೀಡೆಗೆ ಅವಕಾಶವಿಲ್ಲ. ಮಾತ್ರವಲ್ಲ ಮೀಸಲು ಅರಣ್ಯ ಪ್ರದೇಶಗಳಲ್ಲಿಯೂ ಇಂತಹ ಚಟುವಟಿಕೆ ನಡೆಸಬಾರದು ಎಂದು ವೀರೆ ಮುನ್ಸಿಪಾಲಿಟಿ ನಿರ್ಣಯ ಕೈಗೊಂಡು ಮೇಲ್ವಿಚಾರಣೆ ನಡೆಸಲು ಮುಂದಾಗಿದೆ. ಇನ್ನು ಮುಂದೆ ಮನವಿ ಬದಲಿಗೆ ಶಿಕ್ಷೆ ನೀಡುವುದಾಗಿಯೂ ಎಚ್ಚರಿಸಿದೆ.

ಕಾರಣವೇನು?

ಸ್ಥಳೀಯರಿಗೆ ಈ ಮರಳಿನ ದಿಬ್ಬ ಅತ್ಯಂತ ಮಹತ್ವಾದ್ದಾಗಿದೆ. ಹೀಗಾಗಿ ಇವುಗಳನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ. ಕೆಲವರ ರೊಮಾನ್ಸ್ ಇತರ ಪ್ರವಾಸಿಗರಿಗೆ ಮುಜುಗರ ಉಂಟು ಮಾಡುತ್ತದೆ. ಆದ್ದರಿಂದ ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು ಮತ್ತು ಪ್ರವಾಸಿಗರ ಸುರಕ್ಷತೆಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆಡಳಿತದ ಮೂಲಗಳು ತಿಳಿಸಿವೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *