ಬರೋಬ್ಬರಿ 8.97 ಕೆಜಿ ತೂಕದ ಈರುಳ್ಳಿ ಬೆಳೆದ ರೈತ – ಗಿನ್ನಿಸ್ ದಾಖಲೆ ಸೇರಿತು ದೈತ್ಯ ಈರುಳ್ಳಿ‌.‌.!!

ಬರೋಬ್ಬರಿ 8.97 ಕೆಜಿ ತೂಕದ ಈರುಳ್ಳಿ ಬೆಳೆದ ರೈತ – ಗಿನ್ನಿಸ್ ದಾಖಲೆ ಸೇರಿತು ದೈತ್ಯ ಈರುಳ್ಳಿ‌.‌.!!

ನ್ಯೂಸ್ ಆ್ಯರೋ : ನೀವು ನೋಡಿರೋ ಒಂದು ಈರುಳ್ಳಿ ಅಬ್ಬಬ್ಬಾ ಎಂದರೆ ನಮ್ಮ ಒಂದು ಹಿಡಿ ಗಾತ್ರದಷ್ಟು ದೊಡ್ಡದಿರಬಹುದು. ಆದರೆ ಇಲ್ಲಿ ಬೆಳೆದಿರೋ ಈರುಳ್ಳಿ ಗಾತ್ರದಲ್ಲಿ ಗಿನ್ನಿಸ್ ದಾಖಲೆ ಬರೆದಿದೆ.

ಸೇಂಟ್ ಪೀಟರ್ ಬರ್ಗ್ ನ ಗರೆಥ್ ಗ್ರಿಫಿನ್ ಎನ್ನುವವರು ಬೆಳೆದಿರುವ ಈರುಳ್ಳಿ ಈಗ ವಿಶ್ವದ ಗಮನ ಸೆಳೆದಿದೆ.

ಇವರ ತೋಟದಲ್ಲಿ ಬರೋಬ್ಬರಿ 8.97 ಕೆ.ಜಿ. ತೂಕದ ಈರುಳ್ಳಿ ಬೆಳೆದಿದೆ. ಸೆಪ್ಟೆಂಬರ್ 15 ರಂದು ಉತ್ತರ ಯಾರ್ಕ್ ಶೇರ್ ನ ಹಾರೋಗೇಟ್ ಶರತ್ ಕಾಲದ ಹೂವಿನ ಪ್ರದರ್ಶನದಲ್ಲಿ ಕಂಡ ಈ ಈರುಳ್ಳಿಯನ್ನು ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದರು. ಇದೀಗ ಗಿನ್ನೆಸ್ ವಿಶ್ವ ದಾಖಲೆ ಪಟ್ಟಿಗೆ ಸೇರಿದೆ.

ಇದೇ ಜಾಗದಲ್ಲಿ 2014ರಲ್ಲಿ ಗರೆಥ್ ಗ್ರಿಫಿನ್ ಅವರ ತಂದೆ ಗರೆಥ್ ಅವರು ಬೆಳೆದ 8.5 ಕೆ.ಜಿ. ತೂಕದ ಈರುಳ್ಳಿ ದಾಖಲೆ ಬರೆದಿತ್ತು. ಇದೀಗ ಮತ್ತೆ ಅವರೇ ಬೆಳೆದಿರುವ ಈರುಳ್ಳಿ ಈ ದಾಖಲೆಯನ್ನು ಮುರಿದಿದೆ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಂತೋಷ ಹಂಚಿಕೊಂಡು ಈ ಈರುಳ್ಳಿಯು ಬೌಲಿಂಗ್ ಬಾಲ್ ಗಿಂತ ಹೆಚ್ಚು ಭಾರವಿದೆ ಎನ್ನುವ ಕ್ಯಾಪ್ಶನ್ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಗ್ರಿಫಿನ್, ಪ್ರಪಂಚದ ಅತೀ ದೊಡ್ಡ ಈರುಳ್ಳಿ ಬೆಳೆದಿರುವುದಕ್ಕೆ ಸಂತೋಷ ವ್ಯಕ್ತ ಪಡಿಸಿದರು. ತಂದೆಯವರು ಅನೇಕ ವರ್ಷಗಳವರೆಗೆ ದೈತ್ಯ ಈರುಳ್ಳಿ ಬೆಳೆದಿದ್ದರು. ಅವರ ದಾಖಲೆಯನ್ನು ಮುರಿದಿರುವುದು ಖುಷಿ ಕೊಟ್ಟಿದೆ ಎಂದರು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *