Love Bite : ಮುತ್ತು ಕೊಡುವ ನೆಪದಲ್ಲಿ ಬಳಿ ಬಂದ ಪತ್ನಿ – ಮುಂದೆ ಆಗಿದ್ದೇ ಬೇರೆ; ಏನಿದು ವಿಚಿತ್ರ ಪ್ರಕರಣ?

Love Bite : ಮುತ್ತು ಕೊಡುವ ನೆಪದಲ್ಲಿ ಬಳಿ ಬಂದ ಪತ್ನಿ – ಮುಂದೆ ಆಗಿದ್ದೇ ಬೇರೆ; ಏನಿದು ವಿಚಿತ್ರ ಪ್ರಕರಣ?

ನ್ಯೂಸ್ ಆ್ಯರೋ‌ : ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಹಳೆಯದಾಯಿತು. ಈಗೇನಿದ್ದರೂ ಗಂಡ ಹೆಂಡತಿ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರುವ ತನಕ ಎನ್ನುವಂತಾಗಿದೆ. ಇದಕ್ಕೆ ಪೂರಕವಾಗಿ ಆಂಧ್ರಪ್ರದೇಶದಲ್ಲೊಂದು ವಿಚಿತ್ರ ಪ್ರಕರಣ ನಡೆದಿದ್ದು, ತನ್ನ ನಾಲಗೆಯನ್ನು ಕಚ್ಚಿದ ಪತ್ನಿಯ ವಿರುದ್ಧ ಪತಿ ಪೊಲೀಸ್ ದೂರು ಕೊಟ್ಟಿದ್ದಾನೆ.

ಏನಿದು ಪ್ರಕರಣ?

ಕರ್ನೂಲ್ ನಲ್ಲಿ ಈ ಘಟನೆ ನಡೆದಿದೆ. ಮುತ್ತು ಕೊಡುವ ನೆಪದಲ್ಲಿ ಪತ್ನಿ ಪತಿಯ ನಾಲಗೆಯನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದಾಳೆ. ಥಾರಚಂದ್ ನಾಯ್ಕ್ ಮತ್ತು ಪುಷ್ಪಾವತಿ ದಂಪತಿಯೇ ಈ ರೀತಿ ಜಗಳ ಆಡಿಕೊಂಡವರು.

2015ರಲ್ಲಿ ಮದುವೆಯಾದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಯಲ್ಲಮ್ಮ ಗುಟ್ಟಾ ಥಂಡಾದಲ್ಲಿ ವಾಸವಾಗಿದ್ದ ಇವರು ಮೊದಲು ಅನ್ಯೋನ್ಯವಾಗಿಯೇ ಇದ್ದರು. ಆದರೆ ಎರಡು ವರ್ಷಗಳಿಂದ ಆಗಾಗ ಜಗಳ ನಡೆಯಲು ಆರಂಭವಾಯಿತು.

ಇತ್ತೀಚೆಗೆ ಇಬ್ಬರ ನಡುವೆ ಜೋರು ಜಗಳ ನಡೆದಿತ್ತು. ಸ್ವಲ್ಪ ಹೊತ್ತಿನ ಬಳಿಕ ಇಬ್ಬರ ಕೋಪವೂ ಇಳಿದಿತ್ತು. ಆಗ ಥಾರಚಂದ್ ಪತ್ನಿಗೆ ಮುತ್ತು ಕೊಡಲು ಮುಂದಾಗಿದ್ದ. ಇದರಿಂದ ಕೋಪಗೊಂಡ ಪುಷ್ಪಾವತಿ ಆತನ ನಾಲಗೆಯನ್ನೇ ಕಚ್ಚಿದ್ದಾಳೆ. ತೀವ್ರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಳಿಕ ಆಕೆ ಸ್ಥಳೀಯ ಠಾಣೆಗೆ ತೆರಳಿ ಪತಿ ಬಲವಂತವಾಗಿ ಮುತ್ತು ಸ್ವೀಕರಿಸಲು ಯತ್ನಿಸಿದ್ದಕ್ಕೆ ನಾಲಗೆ ಕಚ್ಚಿರುವುದಾಗಿ ತಿಳಿಸಿದ್ದಾಳೆ. ಥಾರಚಂದ್ ಕೂಡ ಪತ್ನಿ ವಿರುದ್ದ ದೂರು ನೀಡಿ ಆಕೆಗೆ ಅಕ್ರಮ ಸಂಬಂಧವಿದೆ ಎಂದಿದ್ದಾನೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *