ಚಾಟ್ ಬಾಟ್ ಕ್ಷೇತ್ರಕ್ಕೆ ಕಾಲಿಟ್ಟ ಟೆಕ್ ದೈತ್ಯ ಮೆಟಾ – ಓಪನ್‌ ಸೋರ್ಸ್ ‌ಮೂಲಕ ಲಾಮಾ-2 ಪರಿಚಯ

ಚಾಟ್ ಬಾಟ್ ಕ್ಷೇತ್ರಕ್ಕೆ ಕಾಲಿಟ್ಟ ಟೆಕ್ ದೈತ್ಯ ಮೆಟಾ – ಓಪನ್‌ ಸೋರ್ಸ್ ‌ಮೂಲಕ ಲಾಮಾ-2 ಪರಿಚಯ

ನ್ಯೂಸ್ ಆ್ಯರೋ‌ : ಚಾಟ್ ಬಾಟ್ ಕ್ಷೇತ್ರಕ್ಕೆ ಫೇಸ್ ಬುಕ್ ನ ಮಾತೃ ಸಂಸ್ಥೆ ಮೆಟಾ ಕಾಲಿಟ್ಟಿದೆ. ಕೃತಕ ಬುದ್ದಿಮತ್ತೆ (ಎಐ) ಸಹಾಯದಿಂದ ಕೆಲವೇ ಕ್ಷಣಗಳಲ್ಲಿ ಮಾಹಿತಿ ನೀಡಬಲ್ಲ ಲಾಮಾ -2 ಅನ್ನು ಪರಿಚಯಿಸುತ್ತಿರುವುದಾಗಿ ಮೆಟಾ ಹೇಳಿದೆ.

ಓಪನ್ ಸೋರ್ಸ್

ಮೆಟಾ ಭಾಷಾ ಕಲಿಕೆಯ ಸಾಧನವನ್ನು ಅಭಿವೃದ್ಧಿಪಡಿಸಿ ಅದನ್ನು ತನ್ನ ಸಂಶೋಧನೆಯ ಭಾಗವಾಗಿ ಪರಿಚಯಿಸಿದೆ. ಇದು ಓಪನ್ ಸೋರ್ಸ್ ಆಗಿದ್ದು, ಎಲ್ಲರಿಗೂ ಲಭ್ಯವಾಗುವ ಜೊತೆಗೆ ಯಾರು ಬೇಕಾದರೂ ಬದಲಿಸಲು ಅವಕಾಶವಿದೆ.

ಓಪನ್ ಸೋರ್ಸ್ ಬಳಸಿರುವುದರಿಂದ ಸಾಕಷ್ಟು ಪ್ರತಿಭಾವಂತ ಡೆವಲಪರ್ ಗಳು ಹೊಸ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲು ಸಾಧ್ಯವಿದೆ. ಜೊತೆಗೆ ಹೆಚ್ಚು ಜನ ಬಳಸುವುದರಿಂದ ಸುರಕ್ಷತೆಯೂ ಉತ್ತಮವಾಗಿರಲಿದೆ. ಸರಿಯಾದ ಮಾಹಿತಿಯೂ ಇದರಿಂದ ಸಿಗಲಿದೆ ಎಂದು ಮೆಟಾ ಸಿಇಒ ಮಾರ್ಕ್ ಝಕರ್ ಬರ್ಗ್ ತಿಳಿಸಿದ್ದಾರೆ.

ವಿಂಡೋಸ್ ತಯಾರಿಕಾ ಸಂಸ್ಥೆ ಮೈಕ್ರೋಸಾಫ್ಟ್ ಜೊತೆಗಿನ ಒಡಂಬಡಿಕೆಯ ಭಾಗವಾಗಿ ಇದನ್ನು ಮೈಕ್ರೋಸಾಫ್ಟ್ ನ ಅಜೂರ್ ಮೂಲಕ ಡೌನ್‍ಲೋಡ್ ಮಾಡಬಹುದು ಎಂದು ಕಂಪೆನಿ ತಿಳಿಸಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *