ಜ್ವಾಲಾಮುಖಿಯ ಮೆಗಾ ಸ್ಫೋಟದಿಂದ ನಿರ್ಮಾಣವಾಯ್ತು ಅದ್ಭುತ ದ್ವೀಪ – ವೈರಲ್ ಆಗುತ್ತಿದೆ ಈ ನೈಸರ್ಗಿಕ ಪ್ರಕ್ರಿಯೆಯ ವಿಡಿಯೋ..!

ಜ್ವಾಲಾಮುಖಿಯ ಮೆಗಾ ಸ್ಫೋಟದಿಂದ ನಿರ್ಮಾಣವಾಯ್ತು ಅದ್ಭುತ ದ್ವೀಪ – ವೈರಲ್ ಆಗುತ್ತಿದೆ ಈ ನೈಸರ್ಗಿಕ ಪ್ರಕ್ರಿಯೆಯ ವಿಡಿಯೋ..!

ನ್ಯೂಸ್ ಆ್ಯರೋ : ಪ್ರಕೃತಿಯ ಬಗ್ಗೆ ಎಷ್ಟೇ ಸಂಶೋಧನೆ, ಅಧ್ಯಯನಗಳನ್ನು ಮಾಡಿದರೂ ಕೂಡ ಭೂಮಿಯ ಗರ್ಭದಲ್ಲಿ ಅದೆಷ್ಟೋ ವಿಸ್ಮಯಗಳು ಅಡಗಿರುತ್ತವೆ. ಅಂತಹವುಗಳಲ್ಲಿ ಸದ್ಯ, ಪ್ರಾಕೃತಿಕ ವಿಸ್ಮಯದ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. ನೀವು ಭೂಮಿಯಡಿಯಿಂದ ಬೆಂಕಿಯುಗುಳುವ ಜ್ವಾಲಾಮುಖಿಯ ಬಗ್ಗೆ ಕೇಳಿರಬಹುದು. ಆದರೆ ಜ್ವಾಲಾಮುಖಿಯಿಂದಾಗಿ ದ್ವೀಪವೊಂದು ನಿರ್ಮಾಣವಾಗುವುದನ್ನು ಕಂಡಿದ್ದೀರಾ? ಅಂತಹದ್ದೊಂದು ವಿಸ್ಮಯ ಜಪಾನ್ ದೇಶದಲ್ಲಿ ನಡೆದಿದ್ದು, ಈ ವಿಚಾರ ಸದ್ಯ ವ್ಯಾಪಕ ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ.

100 ಮೀಟರ್ ವ್ಯಾಸದ ದ್ವೀಪ!

ದ್ವೀಪರಾಷ್ಟ್ರ ಎಂದೇ ಕರೆಯಲ್ಪಡುವ ಜಪಾನ್ ದೇಶದಲ್ಲಿ ಈ ಘಟನೆ ನಡೆದಿದೆ‌. ಅಕ್ಟೋಬರ್ ತಿಂಗಳ ಕೊನೆಯಲ್ಲಿ ಒಗಸವಾರ ದ್ವೀಪದ ಬಳಿ ನೀರಿನೊಳಗಿಂದ ಸ್ಪೋಟಗೊಂಡ ಜ್ವಾಲಾಮುಖಿಯು ಈ ದ್ವೀಪವನ್ನು ನಿರ್ಮಿಸಿದೆ. ಈ ಘಟನೆಯು ನಿರಂತರವಾಗಿ ಬದಲಾಗುತ್ತಿರುವ ಭೌಗೋಳಿಕ ಪ್ರಕ್ರಿಯೆಯ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡಿದೆ. 100 ಮೀಟರ್ ವ್ಯಾಪ್ತಿ ಹೊಂದಿರುವ ಈ ದ್ವೀಪ ಫ್ರಿಟೋಮ್ಯಗ್ರ್ಮ ಮೂಲಕ ನಿರ್ಮಾಣವಾಗಿದೆ.

ಮೂಲಗಳ ಪ್ರಕಾರ 2023ರ ಅಕ್ಟೋಬರ್ 21ರಿಂದಲೇ ಇಲ್ಲಿ ನೀರಿನೊಳಗಿನಿಂದ ಜ್ವಾಲಾಮುಖಿ ಸ್ಪೋಟಿಸಲು ಆರಂಭವಾಯ್ತು. ಈ ನೈಸರ್ಗಿಕ ಪ್ರಕ್ರಿಯೆ 10 ದಿನಗಳ ವರೆಗೆ ಮುಂದುವರೆದು ಅಂತಿಮವಾಗಿ ಸಮುದ್ರದ ಮೇಲೆ ದ್ವೀಪ ಒಂದರ ನಿರ್ಮಾಣಕ್ಕೆ ಇದು ಕಾರಣವಾಯ್ತು. ಐವೋಟು ದ್ವೀಪದ ಕರಾವಳಿಯಿಂದ ಸುಮಾರು 1 ಕಿಲೋ ಮೀಟರ್ ದೂರದಲ್ಲಿ ಇದು ಸಂಭವಿಸಿದ್ದು, ಎರಡನೇ ಮಹಾ ಯುದ್ಧಕ್ಕೆ ಈ ಪ್ರದೇಶ ಸಾಕ್ಷಿಯಾಗಿತ್ತು.

ಇದೇ ಮೊದಲೇನಲ್ಲ..!

ಈ ರೀತಿ ಜ್ವಾಲಾಮುಖಿಯಿಂದ ದ್ವೀಪ ರಚನೆಯಾಗುತ್ತಿರುವುದು ಜಪಾನ್ ನಲ್ಲಿ ಇದೇ ಮೊದಲೇನಲ್ಲ. ಬೋನಿನ್ ದ್ವೀಪಗಳು ಎಂದು ಕರೆಯಲ್ಪಡುವ ಒಗಸವರ ದ್ವೀಪದ ಸರಪಳಿಯು ಸುಮಾರು 30 ದ್ವೀಪಗಳನ್ನು ಹೊಂದಿದ್ದು, ಕೆಲವೆಡೆ ಜ್ವಾಲಾಮುಖಿಗಳು ಇನ್ನೂ ಕೂಡ ಜೀವಂತವಾಗಿವೆ. ಇದಕ್ಕೂ ಮುನ್ನ 2013ರಲ್ಲಿ ಇಲ್ಲಿ ದ್ವೀಪವೊಂದು ನೀರಿನೊಳಗಿನ ಜ್ವಾಲಾಮುಖಿಯಿಂದ ನಿರ್ಮಾಣವಾಗಿತ್ತು ಎನ್ನಲಾಗಿದೆ.

ಸಂಶೋಧಕ ಹೇಳಿದ್ದೇನು?

ಈ ವಿಚಿತ್ರ ನೈಸರ್ಗಿಕ ಪ್ರಕ್ರಿಯೆ ಬಗ್ಗೆ ಮಾತನಾಡಿರುವ ಟೋಕಿಯೋ ವಿಶ್ವವಿದ್ಯಾನಿಲಯದ ಭೂಕಂಪನ ಸಂಶೋಧಕ ಪುಕಾಶಿ ಮೆನೋ, ‘ಅಕ್ಟೋಬರ್ ಅಂತ್ಯದ ವೇಳೆಗೆ ಈ ಪ್ರದೇಶವನ್ನು ಪರಿಶೀಲಿಸಿದಾಗ ಜ್ವಾಲಾಮುಖಿ ಸ್ಪೋಟದ ಹೊಗೆ ಹಾಗೂ ಬೂದಿ 50 ಮೀಟರ್ ಗಿಂತ ಹೆಚ್ಚಿನೆಡೆ ವ್ಯಾಪಿಸಿತ್ತು. ಇಲ್ಲಿ ಇನ್ನಷ್ಟು ಜ್ವಾಲಾಮುಖಿ ಸ್ಪೋಟ ನಡೆದರೆ ಈ ದ್ವೀಪದ ರಚನೆ ಬದಲಾಗುವ ಸಾಧ್ಯತೆ ಇದೆ’ ಎಂದಿದ್ದಾರೆ. ಸದ್ಯ, ಜ್ವಾಲಾಮುಖಿಯಿಂದ ರಚನೆಯಾದ ದ್ವೀಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Related post

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಆರೋಗ್ಯ ಪರಿಪೂರ್ಣವಾಗಿರುತ್ತದೆ. ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುವ ಕಾರಣದಿಂದಾಗಿ ಇಂದು ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಕುಟುಂಬದೊಂದಿಗೆ…
ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…

Leave a Reply

Your email address will not be published. Required fields are marked *