
ಯೂಟ್ಯೂಬ್ ಚಾನೆಲ್ ನಲ್ಲಿ ಚಂದಾದಾರರನ್ನು ಗಳಿಸಲು ಕಷ್ಟಪಡ್ತಿದ್ದೀರಾ….? – ಈ ಟ್ರಿಕ್ಸ್ ಫಾಲೋ ಮಾಡಿ…
- ಟೆಕ್ ನ್ಯೂಸ್
- November 12, 2023
- No Comment
- 85
ನ್ಯೂಸ್ ಆ್ಯರೋ : ಸಾಮಾಜಿಕ ಜಾಲತಾಣವನ್ನು ಇವತ್ತು ಜನರು ಮನಸೋ ಇಚ್ಚೆ ಉಪಯೋಗಿಸುತ್ತಿದ್ದಾರೆ. ಟ್ರೆಂಡ್ ಗಳನ್ನು ಅನುಸರಿಸಿ ಶೈನ್ ಆಗಲು ಒದ್ದಾಡುವವರು ಒಂದೆಡೆಯಾದರೆ ಇದೇ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸಿ ಆದಾಯ ಗಳಿಸಲು ಪರದಾಡುವವರು ಇನ್ನೊಂದು ಕಡೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಯೂಟ್ಯುಬ್. ಈ ಮಾಧ್ಯಮವನ್ನು ಉಪಯೋಗಿಸಿ ಇವತ್ತು ಅನೇಕರು ಹಣ ಗಳಿಸುತ್ತಿದ್ದಾರೆ. ಅದೇ ಆದಾಯದಿಂದ ಜೀವನವನ್ನು ಸಾಗಿಸುತ್ತಿದ್ದಾರೆ. ಆದರೆ ಇದರಲ್ಲಿ ಚಂದಾದಾರರ ಸಂಖ್ಯೆ ಹೆಚ್ಚಾಗುವುದು ಅತ್ಯಂತ ಮುಖ್ಯವಾಗಿರುತ್ತದೆ. ಇದಕ್ಕೆ ಕೆಲವು ಮಾನದಂಡಗಳೂ ಇರುತ್ತದೆ.
ಯೂಟ್ಯೂಬ್ ಚಾನೆಲ್ ಚಂದಾದಾರರ ಸಂಖ್ಯೆ ಹೆಚ್ಚಾಗಲು ಏನಿದೆ ಟ್ರಿಕ್ಸ್…?
ಚಂದಾದಾರರ ಸಂಖ್ಯೆಯನ್ನು ತ್ವರಿತವಾಗಿ ಹೆಚ್ಚಿಸಲು ನೀವು ಈ ಟ್ರಿಕ್ ಉಪಯೋಗಿಸಬಹುದು. ಕಡಿಮೆ ಬೆಲೆಗೆ ಡೇಟಾ ಕೂಡಾ ಲಭಿಸುತ್ತಿರುವುದರಿಂದ ಫ್ರೀ ಟೈಮ್ ನಲ್ಲಿ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಕಳೆಯುತ್ತಿರುತ್ತಾರೆ.
ಕ್ರಿಯಾಶೀಲತೆ :
ಯೂಟ್ಯೂಬ್ ಖಾತೆ ತೆರೆದು ವೀಡಿಯೋ ಹಾಕಿದ್ದರೆ ಸಾಲದು. ಅದರಿಂದ ಹಣಗಳಿಕೆ ಕೂಡಾ ಆಗಬೇಕಾದರೆ ಪರಿಶ್ರಮ ಅತ್ಯಗತ್ಯ. ವೀಡಿಯೋ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ವೀಕ್ಷಣೆ ಪಡೆಯಲಿ, ಪಡೆಯದೇ ಇರಲಿ ನಿರಂತರವಾಗಿ ವೀಡಿಯೋ ಅಪ್ಲೋಡ್ ಮಾಡುತ್ತಿರಬೇಕು. ಕ್ರಿಯಾಶೀಲತೆ ಅತ್ಯಂತ ದೊಡ್ಡ ಪಾತ್ರವನ್ನು ವಹಿಸುತ್ತದೆ.
ಹಂಚಿಕೊಳ್ಳುವುದು ಮುಖ್ಯ:
ನೀವು ವೀಡಿಯೋ ಅಪ್ಲೋಡ್ ಮಾಡುತ್ತಿದ್ದರೆ ಸಾಲದು. ನಿಮ್ಮ ನೆಟ್ವರ್ಕಿಂಗ್ ವಿಸ್ತಾರವಾಗಿರಬೇಕು. ವಿವಿಧ ಸಾಮಾಜಿಕ ಮಾಧ್ಯಮದಲ್ಲಿ ಅದನ್ನು ಹಂಚಿಕೊಳ್ಳಬೇಕು. ನೀವು ಜನರಿಗೆ ಎಷ್ಟು ಹತ್ತಿರವಾಗುತ್ತೀರಿ, ಆಪ್ತರಾಗುತ್ತೀರಿ ಅಷ್ಟು ಚಂದಾದಾರನ್ನು ಪಡೆಯುತ್ತೀರಿ. ಉದಾಹರಣೆಗೆ ನೀವು ಅಡುಗೆ ಚಾನೆಲ್ ಪ್ರಾರಂಭಿಸಿದರೆ ಕೇವಲ ಅಡುಗೆ ಮಾಡಿ ವೀಡಿಯೋ ಹಾಕಿದರೆ ಸಾಲದು. ಕೆಲವು ಸಲಹೆ ಸೂಚನೆಗಳನ್ನೂ ನೀಡಬೇಕಾಗುತ್ತದೆ. ಇದರಿಂದ ಯೂಟ್ಯೂಬ್ ಕ್ಲಿಕ್ ಆಗುತ್ತದೆ.
ಗುಣಮಟ್ಟಕ್ಕೆ ಗಮನ ಕೊಡಿ:
ನಿಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಬೇಕು. ಉತ್ತಮ ಮಾಹಿತಿಯನ್ನು ಒದಗಿಸಬೇಕು. ನೀವು ವೀಡಿಯೋ ಪೋಸ್ಟ್ ಮಾಡಿದಾಗ ಅದರ ಗುಣಮಟ್ಟಕ್ಕೆ ವಿಶೇಷತೆ ನೀಡಬೇಕು. ಹಾಗಿದ್ದಾಗ ಮಾತ್ರ ಅದು ಇನ್ನೊಬ್ಬರಿಗಿಂತ ಭಿನ್ನವಾಗಿರುತ್ತೆ. ಹೈ ಕ್ವಾಲಿಟಿ ಕಾಪಾಡಿಕೊಳ್ಳಬೇಕು.