ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಡೇಟಿಂಗ್; ಡಿನ್ನರ್‌ ನಲ್ಲಿರುವ ಫೋಟೋ ವೈರಲ್

Spread the love

ನ್ಯೂಸ್ ಆ್ಯರೋ: ಟಾಲಿವುಡ್‌ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ಈ ಜೋಡಿಯ ರಹಸ್ಯ ಡೇಟಿಂಗ್‌ ಮತ್ತೊಮ್ಮೆ ಸೋಷಿಯಲ್‌ ಮೀಡಿಯಾದಲ್ಲಿ ಬಹಿರಂಗಗೊಂಡಿದೆ. ಇಬ್ಬರೂ ಒಟ್ಟಿಗೆ ಊಟವನ್ನು ಆನಂದಿಸುತ್ತಿರುವ ಫೋಟೋಗಳು ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಚಿತ್ರಗಳು, ರಶ್ಮಿಕಾ ನೀಲಿ ಕ್ರಾಪ್ ಟಾಪ್ ಮತ್ತು ಹೈ ವೇಸ್ಟ್ ಜೀನ್ಸ್ ಧರಿಸಿರುವುದನ್ನು ತೋರಿಸಿದರೆ, ವಿಜಯ್ ನೀಲಿ ಜಾಕೆಟ್ ಮತ್ತು ಬಕೆಟ್ ಟೋಪಿ ಧರಿಸಿದ್ದಾರೆ.

ರಶ್ಮಿಕಾ ಇತ್ತೀಚೆಗೆ ತಮ್ಮ ಸೋಲೋ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಊಟದ ಸಮಯದಲ್ಲಿ ರುಚಿಕರವಾದ ರುಚಿಯನ್ನು ಸವಿಯುತ್ತಿದ್ದಾರೆ. ಚಿತ್ರದಲ್ಲಿ ಅದೇ ನೀಲಿ ಟ್ಯಾಂಕ್ ಟಾಪ್ ಧರಿಸಿ ಅದೇ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ.

ಕಳೆದ ವರ್ಷದ ಆರಂಭದಲ್ಲಿ, ವಿಜಯ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಫೋಟೋವನ್ನು ಪೋಸ್ಟ್ ಮಾಡಿದಾಗ ಈ ಜೋಡಿಯ ಊಹಾಪೋಹಗಳಿಗೆ ಪುಷ್ಠಿ ನೀಡಿತ್ತು. ಬೋಲಿಫುಶಿ ದ್ವೀಪಗಳಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಮಾಲ್ಡೀವ್ಸ್ ವಿಹಾರಕ್ಕೆಂದು ತೆರಳಿದ ಅದೇ ಸ್ಥಳದಲ್ಲಿ ತೆಗೆದ ಫೋಟೋದಂತಿತ್ತು.

ಇಬ್ಬರೂ ಡೇಟಿಂಗ್‌ನಲ್ಲಿದ್ದೇವೆ ಎಂದು ನೇರ ನೇರವಾಗಿ ಎಲ್ಲಿಯೂ ಹೇಳಿಲ್ಲ. ಆದರೆ ಇತ್ತೀಚೆಗೆ ವಿಜಯ್ ದೇವರಕೊಂಡ ತಾನು ರಿಲೇಶನ್‌ಶಿಪ್‌ನಲ್ಲಿ ಇದ್ದೇನೆ ಎಂದು ಪರೋಕ್ಷವಾಗಿ ಹೇಳಿದ್ದರು. ಮದುವೆಯು ಯಾರೊಬ್ಬರ ವೃತ್ತಿಜೀವನದ ನಡುವೆ ಬರಬೇಕಾಗಿಲ್ಲ. ಹೆಣ್ಣಿಗೆ ಮದುವೆ ಸ್ವಲ್ಪ ಕಷ್ಟ ಖಂಡಿತ. ಇದು ನೀವು ಮಾಡುತ್ತಿರುವ ವೃತ್ತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

Leave a Comment

Leave a Reply

Your email address will not be published. Required fields are marked *