ವೈರಲ್ ಆಗಲು ಯುವಕನೊಬ್ಬ ಮಾಡಿದ್ದೇನು ನೋಡಿ: ವೀಡಿಯೋ ವೈರಲ್
ಅಮೇಥಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದಕ್ಕಾಗಿ ಜನ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಕೆಲವರಿಗೆ ಜೀವ ಹೋದರೂ ತೊಂದರೆ ಇಲ್ಲ, ಆದರೆ ಜಸ್ಟ್ ವೈರಲ್ ಆಗಬೇಕಷ್ಟೆ, ಅದೇ ರೀತಿ ಇಲ್ಲೊಂದು ಕಡೆ ಯುವಕನೋರ್ವ ರಸ್ತೆ ಬದಿ ನಿರ್ಮಾಣ ಮಾಡಿರುವ ಟ್ರಾಫಿಕ್ ಫಲಕದ ಕಂಬವನ್ನೇರಿ ಅಲ್ಲಿ ಫುಲ್ ಅಪ್ ವ್ಯಾಯಾಮ ಮಾಡುತ್ತಿದ್ದು, ಈತನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಉತ್ತರ ಪ್ರದೇಶ ಅಮೇಥಿಯಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಇದು ಈಗ ಪೊಲೀಸರ ಗಮನವನ್ನು ಕೂಡ ಸೆಳೆದಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಕೇವಲ ಪ್ಯಾಂಟ್ ತೊಟ್ಟು ಬರೀ ಮೈಯಲ್ಲಿ ಇರುವ ಯುವಕ ಎಡಕ್ಕೆ ತಿರುಗಿದರೆ ಆರು ಕಿಲೋ ಮೀಟರ್ ಮುನ್ಸಿಗಂಜ್‌ಗೆ ಬಲಕ್ಕೆ ತಿರುಗಿದರೆ 3.5 ಕಿಲೋ ಅಮೇಥಿಗೆ ಎಂದು ತೋರಿಸುವ 10 ಮೀಟರ್‌ಗೂ ಅಧಿಕ ಎತ್ತರದಲ್ಲಿ ಕಬ್ಬಿಣದ ಕಂಬಕ್ಕೆ ಜಾಯಿಂಟ್ ಮಾಡಿರುವ ಟ್ರಾಫಿಕ್ ಫಲಕವನ್ನು ಹಿಡಿದು ಫುಲ್ ಅಪ್ ಮಾಡುತ್ತಿದ್ದಾನೆ.
ರಾಷ್ಟ್ರೀಯ ಹೆದ್ದಾರಿ 931ರಲ್ಲಿ ಈ ಘಟನೆ ನಡೆದಿದೆ. 17 ಸೆಕೆಂಡ್‌ಗಳ ಈ ವೀಡಿಯೋವನ್ನು ಅನೇಕರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗಿದೆ. , ಈ ಯುವಕನ ವಿರುದ್ಧ ಸರಿಯಾದ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
Leave a Comment