ಚೊಚ್ಚಲ ಮಗುವನ್ನು ಸ್ವಾಗತಿಸಿದ ವಸಿಷ್ಠ-ಹರಿಪ್ರಿಯಾ ದಂಪತಿ; ಮದುವೆ ವಾರ್ಷಿಕೋತ್ಸವದ ದಿನವೇ ಮರಿ ಸಿಂಹ ಆಗಮನ
ನ್ಯೂಸ್ ಆ್ಯರೋ: ಸ್ಯಾಂಡಲ್ವುಡ್ ಚಿಟ್ಟೆ ವಸಿಷ್ಠ ಸಿಂಹ ಹಾಗೂ ಖ್ಯಾತ ನಟಿ ಹರಿಪ್ರಿಯಾ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಸಿಂಹಪ್ರಿಯಾ ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದೀಪಾವಳಿ ಹಬ್ಬದ ದಿನವೇ ಅಭಿಮಾನಿಗಳ ಗುಡ್ನ್ಯೂಸ್ವೊಂದನ್ನು ಕೊಟ್ಟಿದ್ದರು.
ಚಂದನವನದ ಈ ಮುದ್ದಾದ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದರು. ಈ ಹಿಂದೆ ಫ್ಯಾನ್ಸ್ ಗೇಸ್ ಮಾಡಿದ್ದರು. ನಟಿ ಹರಿಪ್ರಿಯಾ ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಗರ್ಭಿಣಿ ಹಾಗೇ ಕಾಣಿಸಿಕೊಂಡಿದ್ದರು.
ವಿಶೇಷ ಏನೆಂದರೆ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ಮದುವೆ ಆದ ದಿನಾಂಕದಲ್ಲೇ ಗಂಡು ಮಗು ಜನಿಸಿದೆ. ಈ ಜೋಡಿಯ ಮದುವೆ ನೆರವೇರಿದ್ದು 2023ರ ಜನವರಿ 26ರಂದು. ಸರಿಯಾಗಿ 2 ವರ್ಷದ ಬಳಿಕ, ಅಂದರೆ 2025ರ ಜನವರಿ 26ರಂದು ಪುತ್ರನ ಆಗಮನ ಆಗಿದೆ. ‘ನಮ್ಮ ಮದುವೆ ದಿನವೇ ಅವನು ಬಂದಿದ್ದಾನೆ’ ಎಂದು ವಸಿಷ್ಠ ಸಿಂಹ ಅವರು ಪೋಸ್ಟ್ ಮಾಡಿದ್ದಾರೆ.
ಹರಿಪ್ರಿಯಾ, ವಸಿಷ್ಠ ಸಿಂಹ ಅವರು ವರ್ಷಗಳ ಕಾಲ ಪ್ರೀತಿಸಿದ್ದರು. ಇನ್ನು ದುಬೈನಲ್ಲಿ ಇವರಿಬ್ಬರು ಕೈ ಕೈ ಹಿಡಿದುಕೊಂಡು ಓಡಾಡುತ್ತಿದ್ದ ವಿಡಿಯೋ, ಡ್ಯಾನ್ಸ್ ಮಾಡುತ್ತಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಬಗ್ಗೆ ಗಾಸಿಪ್ ಹರಡಿದಾಗ ಈ ಜೋಡಿ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಆ ನಂತರ ಇವರಿಬ್ಬರು ಮನೆಯಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡು, ನಾವಿಬ್ಬರು ಮದುವೆ ಆಗುತ್ತಿರೋದು ಪಕ್ಕಾ ಎಂದು ತಿಳಿಸಿತ್ತು. ಆಮೇಲೆ ಈ ಜೋಡಿ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆಯಾಗಿತ್ತು. ಈ ಮದುವೆಗೆ ಸ್ಯಾಂಡಲ್ವುಡ್ ಗಣ್ಯರು, ಎರಡು ಕುಟುಂಬಸ್ಥರು ಆಗಮಿಸಿದ್ದರು.
https://www.instagram.com/imsimhaa/?utm_source=ig_embed&ig_rid=96772a26-55e1-4674-a79c-377d6f923031
Leave a Comment