“ಪಬ್ಲಿಕ್ ಟಾಯ್ಲೆಟ್ ಯೂಸ್ ಮಾಡುವ ಮುನ್ನ ಹುಷಾರ್”; ನಟಿ ಅಮೃತಾ ರಾಮಮೂರ್ತಿ ಆಸ್ಪತ್ರೆಯಿಂದ ಈ ಸಂದೇಶ ನೀಡಿದ್ಯಾಕೆ ?

Amrutha Ramamoorthi
Spread the love

ನ್ಯೂಸ್ ಆ್ಯರೋ: ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ, ಕುಲವಧು, ಕೆಂಡಸಂಪಿಗೆ, ಕಸ್ತೂರಿ ನಿವಾಸ ಧಾರಾವಾಹಿಗಳಲ್ಲಿ ನಟಿಸಿದ್ದ ಸದ್ಯ ಆಸೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಕಿರುತೆರೆಯ ಜನಪ್ರಿಯ ನಟಿ ಅಮೃತಾ ರಾಮಮೂರ್ತಿ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟಿಯ ಪರಿಸ್ಥಿತಿ ನೋಡಿ ಶಾಕ್​ ಆಗಿದ್ದಾರೆ.

ಹೌದು, ನಟಿ ಅಮೃತಾ ರಾಮಮೂರ್ತಿ ಸದ್ಯ ಆಸೆ ಎಂಬ ಮತ್ತೊಂದು ಧಾರಾವಾಹಿಯಲ್ಲಿ ನಟಿ ಅಭಿನಯಿಸುತ್ತಿದ್ದಾರೆ. ಆದರೆ ನಟಿ ಕೆಲವು ದಿನಗಳ ಹಿಂದೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ನಟಿ ಮೂರು ದಿನಗಳ ಹಿಂದೆ ಆಸ್ಪತ್ರೆಗೂ ಕೂಡ ದಾಖಲಾಗಿದ್ದರು. ಈ ಕುರಿತು ಸ್ವತಃ ನಟಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು.

Amrutha Ramamoorthy1

ನಟಿ ಅಮೃತಾ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಆಸ್ಪತ್ರೆಯ ಬೆಡ್​ ಮೇಲೆ ಮಲಗಿಕೊಂಡಿದ್ದರು. ಅದರ ಜೊತೆಗೆ ತಮ್ಮ ಆರೋಗ್ಯದ ಬಗ್ಗೆ ಅಪ್ ಡೇಟ್ ಕೊಡ ಕೊಟ್ಟಿದ್ದರು. ನಟಿ ಸ್ಪರ್ಶ್ ಆಸ್ಪತ್ರೆಯಲ್ಲಿ ದಾಖಲಾಗಿರೋದಾಗಿ ತಿಳಿಸಿದ್ದರು. ಈ ಬಗ್ಗೆ ಬರೆದುಕೊಂಡ ನಟಿ ನಮಸ್ಕಾರ ಎಲ್ಲರಿಗೂ.. ಸುಮಾರು ಜನ ಮೆಸೇಜ್ ಹಾಕುತ್ತಲೇ ಇದ್ದೀರಿ, ಏನಾಗಿದೆ ಏನಾಯ್ತು ಅಂತ. ನನಗೆ ಸಿವಿಯರ್ ಯುಟಿಐ ಆಗಿದೆ. ಯುರಿನರಿ ಟ್ರ್ಯಾಕ್ ಇನ್ ಫೆಕ್ಷನ್ ಆಗಿದೆ. ಎಕ್ಸ್‌ಟೀಮ್ ಲೆವೆಲ್‌ಗೆ ಹೋಗಿದೆ ಇನ್ ಫೆಕ್ಷನ್.

ಹೀಗಾಗಿ ನಾನು ನಿನ್ನೆ ಅಡ್ಮಿಟ್ ಆಗಿದ್ದೆ. ಹೆಣ್ಮಕ್ಕೇ ಹುಷಾರಾಗಿರಿ. ಪಬ್ಲಿಕ್ ಟಾಯ್ಲೆಟ್ ಯೂಸ್ ಮಾಡುವಾಗ ತುಂಬಾ ಹುಷಾರಾಗಿರಿ. ನಮಗೆ ವಿಧಿಯಿಲ್ಲ. ಶೂಟಿಂಗ್ ಸೆಟ್‌ನಲ್ಲಿ ರೆಸ್ಟ್ ರೂಮ್ ಯೂಸ್ ಮಾಡೋಕಾಗುತ್ತದೆ. ನಮ್ಮ ಶೂಟಿಂಗ್‌ನವರು ಕ್ಯಾರವಾನ್ ತರಿಸಿದ್ರು. ಹೈಜೀನ್ ನೋಡಿಕೊಳ್ಳಬೇಕಾದ್ದು ಮುಖ್ಯ. ನಾನೀಗ ಹುಷಾರಾಗುತ್ತಿದ್ದೇನೆ ಅಂತ ಅಭಿಮಾನಿಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಸದ್ಯ ನಟಿ ಆಸ್ಪತ್ರೆಯಿಂದ ಡಿಸ್ಟಾರ್ಚ್ ಆಗಿ ಮತ್ತೆ ಶೂಟಿಂಗ್​ ಸೆಟ್​ಗೆ ಮರಳಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!