ಆರ್. ವೈಶಾಲಿಯೊಂದಿಗೆ ಹಸ್ತಲಾಘವ ನಿರಾಕರಿಸಿದ ಯಾಕುಬೊವ್ ; ಚೆಸ್ ಲೋಕದಲ್ಲಿ ವಿವಾದಕ್ಕೀಡಾದ ವೈರಲ್ ವಿಡಿಯೋ

ನ್ಯೂಸ್ ಆ್ಯರೋ: ಭಾರತೀಯರು ಇತರ ದೇಶಗಳ ಮಹಿಳೆಯರನ್ನು ಹೇಗೆ ಗೌರವಿಸುತ್ತಾರೆ, ಇತರ ದೇಶಗಳ ಜನರು ಸಹ ಭಾರತದ ಹೆಣ್ಣುಮಕ್ಕಳನ್ನು ಅದೇ ರೀತಿಯಲ್ಲಿ ನಡೆಸಿಕೊಳ್ಳಬೇಕು ಎಂದು ನಿರೀಕ್ಷಿಸಲಾಗಿದೆ. ಆದರೆ ಉಜೈಕಿಸ್ತಾನದ ಗ್ರಾಂಡ್ ಮಾಸ್ಟರ್ ನೋಡಿರ್ಬೆಕ್ ಯಾಕುಬೊವ್ ಭಾರತೀಯ ಮಗಳನ್ನು ಅವಮಾನಿಸಿದ್ದಾರೆ.
ಹೌದು, ನೋಡಿರ್ಬೆಕ್ ಯಾಕುಬೊವ್ ಅವರು ಭಾರತದ ಮಗಳಾದ ಗ್ರಾಂಡ್ ಮಾಸ್ಟರ್ ಆರ್.ವೈಶಾಲಿ ಅವರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದರು. ನಂತರ ಈ ವಿಚಾರವಾಗಿ ವಿವಾದ ಭುಗಿಲೆದ್ದ ಕೂಡಲೇ ಧಾರ್ಮಿಕ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಜತೆಗೆ ಉಜೈಕಿಸ್ತಾನದ ಗ್ರಾಂಡ್ ಮಾಸ್ಟರ್ ಕ್ಷಮೆಯಾಚಿಸಿದ್ದು, ಯಾರನ್ನೂ ಅವಮಾನಿಸುವುದು ನನ್ನ ಉದ್ದೇಶವಲ್ಲ ಎಂದು ಹೇಳಿದ್ದಾರೆ.
ಚೆಸ್‌ಬೇಸ್ ಇಂಡಿಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ವೈಶಾಲಿ ಯಾಕುಬೊವ್ ವಿರುದ್ಧ ನಾಲ್ಕನೇ ಸುತ್ತಿನ ಸ್ಪರ್ಧೆಯ ಪ್ರಾರಂಭದ ಮೊದಲು ಕೈ ಚಾಚುತ್ತಿರುವುದನ್ನು ಕಾಣಬಹುದು. ಅವರು ಆರಂಭದಲ್ಲಿ ಕೈಸನ್ನೆ ಮಾಡುವ ಮೂಲಕ ವೈಶಾಲಿಯೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದರು ಮತ್ತು ನಂತರ ಆಡಲು ಕುಳಿತರು. ಈ ಪಂದ್ಯವು ವೈಶಾಲಿಗೆ ಸ್ವಲ್ಪ ಅನಾನುಕೂಲತೆಯನ್ನು ಉಂಟುಮಾಡಿತು.
ಇಡೀ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಹಬ್ಬುವುದನ್ನು ಗಮನಿಸಿರುವ ಯಾಕುಬೊವ್ ಇದೀಗ ತಾನು ಏತಕೆ ಹಸ್ತಲಾಘವ ಮಾಡಲಿಲ್ಲ ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಯಾಕುಬೊವ್ ವೈಶಾಲಿ ಅವರ ಬಳಿ ಕ್ಷಮೆಯಾಚಿಸಿದ್ದಾರೆ.
ಮುಂದುವರೆದು ಬರೆದುಕೊಂಡಿರುವ ಅವರು, ಪಂದ್ಯ ಆರಂಭಕ್ಕೂ ಮುನ್ನ ನಡೆದ ಆ ಘಟನೆಯ ಬಗ್ಗೆ ಸ್ಪಷ್ಟೀಕರಣ ನೀಡಲು ಬಯಸುತ್ತೇನೆ. ನಾನು ಮಹಿಳೆಯರನ್ನು ತುಂಬಾ ಗೌರವಿಸುತ್ತೇನೆ. ವೈಶಾಲಿ ಹಾಗೂ ಆರ್. ಪ್ರಜ್ಞಾನಂದರೆಂದರೆ ನನಗೆ ತುಂಬಾ ಗೌರವ. ಆದರೆ ಧಾರ್ಮಿಕ ಕಾರಣಗಳಿಂದ ನಾನು ವೈಶಾಲಿ ಅವರೊಂದಿಗೆ ಕೈಕುಲುಕಲಿಲ್ಲ. ಧಾರ್ಮಿಕ ಕಾರಣಗಳಿಂದಾಗಿ ನಾನು ಬೇರೆ ಮಹಿಳೆಯನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.
Leave a Comment