ಚಹಾಲ್-ಧನಶ್ರೀ ಸಂಬಂಧದಲ್ಲಿ ಬಿರುಕಿಗೆ ಪ್ರಮುಖ ಕಾರಣಗಳೇನು; ಇನ್‌ಸ್ಟಾಗ್ರಾಮ್ ನಲ್ಲಿ ಚಹಾಲ್ ಹಂಚಿಕೊಂಡಿದ್ದೇನು ?

Chahal
Spread the love

ನ್ಯೂಸ್ ಆ್ಯರೋ: ಟೀಂ ಇಂಡಿಯಾ ಸ್ಟಾರ್​ ಯಜುವೇಂದ್ರ ಚಹಾಲ್ ಹಾಗೂ ಧನಶ್ರೀ ಸಂಸಾರದಲ್ಲಿ ಬಿರುಕು ಮೂಡಿದೆ. ಡಿವೋರ್ಸ್​ ಪ್ರಕ್ರಿಯೆಗಳು ನಡೆಯುತ್ತಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಚಹಾಲ್ ಆಗಲಿ, ಧನಶ್ರೀ ಆಗಲಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ಇನ್​ಸ್ಟಾಗ್ರಾಮ್​​ನಲ್ಲಿ ಪರಸ್ಪರ ಅನ್​ಫಾಲೋ ಮಾಡಿಕೊಂಡಿದ್ದಾರೆ. ಚಹಾಲ್ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಧನಶ್ರೀ ಜೊತೆಗಿನ ಎಲ್ಲಾ ಫೋಟೋಗಳನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ್ದಾರೆ. ಆದರೆ ಧನಶ್ರೀ ಕೇವಲ ಅನ್​ಫಾಲೋ ಮಾತ್ರ ಮಾಡಿದ್ದು, ಚಹಾಲ್ ಜೊತೆಗಿನ ಫೋಟೋಗಳನ್ನು ಉಳಿಸಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಧನಶ್ರೀ ಹಾಗೂ ಚಹಾಲ್ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಇದು ಅವರಿಬ್ಬರ ನಡುವಿನ ಸಂಬಂಧದ ಮೇಲೂ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. ಧನಶ್ರೀ ಅವರ ಕಾರ್ಯವೈಖರಿ ಕೂಡ ಇಲ್ಲಿ ಚರ್ಚೆ ಆಗ್ತಿದೆ. ಟ್ರೋಲ್ ಆದ ಅದೆಷ್ಟೋ ಸಂದರ್ಭಗಳಲ್ಲಿ ಧನಶ್ರೀ ಜೊತೆಗೆ ಬೇರೆ ವ್ಯಕ್ತಿಗಳ ಹೆಸರು ತಳಕು ಹಾಕಿಕೊಂಡಿದೆ. ಟೀಂ ಇಂಡಿಯಾದ ಮತ್ತೊಬ್ಬ ಸ್ಟಾರ್ ಶ್ರೇಯರ್ ಜೊತೆ ಧನಶ್ರೀ ಹೆಸರು ಕೇಳಿಬಂದಿತ್ತು. ಅಲ್ಲದೇ ಪ್ರತೀಕ್ ಉಟೇಕರ್ ಹೆಸರು ಕೂಡ ತಳುಕು ಹಾಕಿಕೊಂಡಿದೆ. ಈ ವಿಚಾರಗಳಿಂದ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಧನಶ್ರೀ ವಿರುದ್ಧ ಇಂತಹದೊಂದು ಆರೋಪ ಇದೆ. ಸೆಪ್ಟೆಂಬರ್ 27 ರಂದು ಅವರ ಹುಟ್ಟುಹಬ್ಬ ಇತ್ತು. ಆಗ ಚಹಾಲ್ ವಿಭಿನ್ನ ರೀತಿಯಲ್ಲಿ ಶುಭ ಹಾರೈಸಿದ್ದರು. ಚಹಾಲ್ ಹಾಕಿದ್ದ ಪೋಸ್ಟ್​​ಗೆ ಧನಶ್ರೀ ಸಾಮಾನ್ಯ ರಿಪ್ಲೈ ಮಾಡಿದ್ದರು. ಬೆನ್ನಲ್ಲೇ ಧನಶ್ರೀ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು. ಪತ್ನಿಯಾಗಿ ನೀವು ನೀಡಿದ ಪ್ರತಿಕ್ರಿಯೆ ಸರಿ ಇಲ್ಲ ಎಂದು ನೆಟ್ಟಿಗರು ಜಾಡಿಸಿದ್ದರು.

ಧನಶ್ರೀ ಹಾಗೂ ಚಹಾಲ್ ತುಂಬಾ ದಿನಗಳಿಂದ ಕ್ಯಾಮೆರಾ ಮುಂದೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ವಿಶೇಷ ಸಂದರ್ಭಗಳಾದ ಗಣೇಶ ಹಬ್ಬ, ದೀಪಾವಳಿ ಸೇರಿಂದಂತೆ ಅನೇಕ ಸ್ಪೆಷಲ್ ಡೇಗಳಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಈ ಎಲ್ಲಾ ವಿಚಾರಗಳಿಂದಾಗಿ ಇಬ್ಬರ ನಡುವೆ ಬಿರುಕು ಮೂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೇ ವೈಯಕ್ತಿಕ ಬದುಕಿನಲ್ಲಿ ಆಗ್ತಿರುವ ಕಹಿ ಘಟನೆಗಳಿಂದಾಗಿಯೇ ಚಹಾಲ್ ತಮ್ಮ ವೃತ್ತಿ ಜೀವನದಲ್ಲಿ ಹಿಂದೆ ಬೀಳ್ತಿದ್ದಾರೆ ಎನ್ನಲಾಗಿದೆ.

ಏನಿದು ಪೋಸ್ಟ್?:
ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಚಹಾಲ್ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ. ‘ಕಠಿಣ ಪರಿಶ್ರಮವು ಜನರ ಪಾತ್ರವನ್ನು ಬಹಿರಂಗಪಡಿಸುತ್ತದೆ. ನಿಮ್ಮ ಪ್ರಯಾಣ ನಿಮಗೆ ತಿಳಿದಿದೆ. ನಿನ್ನ ನೋವು ನಿನಗೆ ಗೊತ್ತು. ಇಲ್ಲಿಗೆ ತಲುಪಲು ನೀವು ಏನು ಮಾಡಿದ್ದೀರಿ ಎಂಬುದು ನಿಮಗೆ ತಿಳಿದಿದೆ. ಜಗತ್ತಿಗೇ ಗೊತ್ತು. ನೀವು ಎತ್ತರದಲ್ಲಿದ್ದೀರಿ. ನಿಮ್ಮ ತಂದೆ ತಾಯಿ ಹೆಮ್ಮೆ ಪಡುವಂತೆ ಶ್ರಮಿಸಿದ್ದೀರಿ. ಹೆಮ್ಮೆಯ ಮಗನಂತೆ ಯಾವಾಗಲೂ ಬಲವಾಗಿ ಉಳಿಯಿರಿ ಎಂದು ಬರೆದಿರುವ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!