ಗುಜರಾತ್ ಟೈಟನ್ಸ್ ಪಾಲಾದ ಮೊಹ್ಮದ್ ಸಿರಾಜ್; ಆರ್​ಸಿಬಿ ಜೊತೆಗಿನ ಜರ್ನಿ ಬಗ್ಗೆ ಸಿರಾಜ್ ಭಾವುಕ

mohammed siraj
Spread the love

ನ್ಯೂಸ್ ಆ್ಯರೋ : ಕಳೆದ 7 ವರ್ಷಗಳಿಂದ ಆರ್‌ಸಿಬಿಯ ಭಾಗವಾಗಿದ್ದ ಮೊಹಮ್ಮದ್ ಸಿರಾಜ್, IPL-2025​ನಲ್ಲಿ ಗುಜರಾತ್ ಟೈಟನ್ಸ್​ ಪರ ಆಡಲಿದ್ದಾರೆ. ಮೆಗಾ ಹರಾಜಿನಲ್ಲಿ ಗುಜರಾತ್ ಟೈಟನ್ಸ್ ಸಿರಾಜ್ ಅವರನ್ನು 12.25 ಕೋಟಿಗೆ ಖರೀದಿಸಿದೆ. ಬೆನ್ನಲ್ಲೇ ಆರ್​ಸಿಬಿ ಜೊತೆಗಿನ ದಿನಗಳನ್ನು ನೆನೆದು ಸಿರಾಜ್ ಭಾವನಾತ್ಮಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

RCB ಜೊತೆಗೆ ಕಳೆದ ವಿಶೇಷ ಕ್ಷಣಗಳ ಕುರಿತ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ‘ನನ್ನ ಪ್ರೀತಿಯ ಆರ್‌ಸಿಬಿಗೆ.. ಆರ್‌ಸಿಬಿ ಜೊತೆಗಿನ ಏಳು ವರ್ಷಗಳು ತುಂಬಾ ಖುಷಿ ನೀಡಿವೆ. ಆರ್‌ಸಿಬಿ ಜರ್ಸಿಯಲ್ಲಿನ ದಿನಗಳನ್ನು ನೆನಪಿಸಿಕೊಂಡಾಗ ಹೃದಯ ಉಕ್ಕಿ ಬರುತ್ತದೆ. ಕೃತಜ್ಞತೆ, ಪ್ರೀತಿಯ ಭಾವನೆ ನನ್ನಲ್ಲಿ ತುಳುಕುತ್ತದೆ. ಮೊದಲ ಬಾರಿಗೆ ನಾನು ತೊಟ್ಟ ಜರ್ಸಿ, ಆರ್​ಸಿಬಿ ಜೊತೆಗಿನ ಬಂಧವನ್ನು ತುಂಬಾನೇ ಬಿಗಿಯಾಗಿಸಿದೆ. ಅದು ಅಷ್ಟರಮಟ್ಟಿಗೆ ನಮ್ಮ ಬಂಧವನ್ನು ಗಟ್ಟಿಯಾಗಿಸುತ್ತೆ ಅಂತಾ ಎಂದೂ ಯೋಚಿಸಿರಲಿಲ್ಲ.

ಆರ್​ಸಿಬಿ ಪರ ನಾನು ಮಾಡಿದ ಮೊದಲ ಬಾಲ್​​ನಿಂದ ಹಿಡಿದು, ಪ್ರತಿ ವಿಕೆಟ್, ಆಡಿದ ಪ್ರತಿ ಪಂದ್ಯ, ನಿಮ್ಮೊಂದಿಗೆ ಕಳೆದ ಪ್ರತಿಕ್ಷಣ. ಆ ನನ್ನ ಪ್ರಯಾಣ ಅಸಾಧಾರಣ. ಈ ಜರ್ನಿಯಲ್ಲಿ ಏರಿಳಿತಗಳಿದ್ದವು. ಆದರೆ ನೆನಪುಗಳು ಸ್ಥಿರವಾಗಿ ಉಳಿದಿವೆ. RCB ಅಂದರೆ ಹೃದಯ ಬಡಿತ, ಮನೆಯಂತೆ ಭಾಸವಾಗುವ ಕುಟುಂಬ. ಇದು ಫ್ರಾಂಚೈಸಿಗಿಂತ ದೊಡ್ಡದು.

ಸಿರಾಜ್ ವೀಡಿಯೊ ಪೋಸ್ಟ್‌ನಲ್ಲಿ ‘ನಾ ಹಮಾರಾ, ನಾ ತುಮ್ಹಾರಾ ಹುವಾ, ಇಷ್ಕಾ ಕಾ ಯೇ ಸಿತಮ್ ನ ಗನ್ವಾರಾ ಹುವಾ’ ಹಾಡನ್ನು ಬಳಸಿದ್ದಾರೆ. ಈ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಗುಜರಾತ್ ಟೈಟಾನ್ಸ್ ತಂಡದ ರಶೀದ್ ಖಾನ್, ‘ಈಗ ನೀವು ನಮ್ಮವರು’ ಎಂದು ಕಾಲೆಳೆದಿದ್ದಾರೆ.

Leave a Comment

Leave a Reply

Your email address will not be published. Required fields are marked *