ಜಪಾನ್ ನಲ್ಲಿ 37,000 ಜನರ ನಿಗೂಢ ಸಾವು!
ನ್ಯೂಸ್ ಆ್ಯರೋ : ಭಾರತದ ಮಿತ್ರ ರಾಷ್ಟ್ರವಾಗಿರುವ ಜಪಾನ್ ನಲ್ಲಿ ಕಳೆದ ಎಂಟು ತಿಂಗಳಿನಲ್ಲಿ ಏಕಾಂಗಿಯಾಗಿ ವಾಸವಿದ್ದ 37, ೦೦೦ಕ್ಕೂ ಹೆಚ್ಚು ಜನರು ನಿಗೂಢವಾಗಿ ಸಾವನಪ್ಪಿದ ಘಟನೆ ನಡೆದಿದೆ.
ಜಪಾನ್‌ನಲ್ಲಿ 85 ವರ್ಷ ಮೇಲ್ಪಟ್ಟವರು ಹೆಚ್ಚಾಗಿ ಏಕಾಂಗಿ ವಾಸಿಸುತ್ತಿದ್ದು, ಇವರಲ್ಲಿ ಒಟ್ಟು 7,498 ಮಂದಿ ಮೃತಪಟ್ಟಿದ್ದಾರೆ. ಇನ್ನು 30 ವರ್ಷಕ್ಕಿಂತ ಕೆಳಗಿನ 473 ಜನರು ಸಾವನ್ನಪ್ಪಿರುವ ಪ್ರಕರಣ ದಾಖಲಾಗಿದೆ.
ಅವರಲ್ಲಿ 25,600 ಪುರುಷರು, ಹಾಗು 11,600 ಮಹಿಳೆಯರು ಮೃತಪಟ್ಟಿದ್ದಾರೆ. ಸುಮಾರು 3000 ಮೃತರನ್ನು ಅವರು ಮೃತಪಟ್ಟ ಒಂದು ತಿಂಗಳ ನಂತರ ಪತ್ತೆ ಮಾಡಲಾಗಿದೆ ಎಂದು ಜಪಾನ್ ದೇಶದ ಪೋಲೀಸರು ಮಾಹಿತಿ ನೀಡಿದ್ದಾರೆ.
Leave a Comment