
ಮೊಬೈಲ್ ರೀಚಾರ್ಜ್ ಮಾಸಿಕ ಯೋಜನೆಗಳು 28 ದಿನಕ್ಕೆ ಸೀಮಿತ ಯಾಕೆ? – ನಿಮ್ಮ ಜೇಬಿಗೆ ಕಂಪನಿಗಳು ಕತ್ತರಿ ಹಾಕೋದು ನಿಮಗೆ ಗೊತ್ತಾ?
- ಟೆಕ್ ನ್ಯೂಸ್
- October 31, 2023
- No Comment
- 75
ನ್ಯೂಸ್ ಆ್ಯರೋ : ಸಾಮಾನ್ಯವಾಗಿ ಮೊಬೈಲ್ ಸಿಮ್ ರಿಚಾರ್ಜ್ ಆಫರ್ ಗಳು ಕೇವಲ 28 ದಿನಗಳದ್ದು ಮಾತ್ರ ಇರುತ್ತದೆ. 30- 31 ದಿನಗಳದ್ದು ಯಾಕೆ ಇರೋದಿಲ್ಲ ಎನ್ನುವುದಕ್ಕೆ ಕಾರಣ ಏನು ಗೊತ್ತೇ ? ಇದಕ್ಕೆ ಯಾವತ್ತಾದರೂ ಉತ್ತರ ಹುಡುಕುವ ಯೋಚನೆ ಮಾಡಿದ್ದೀರಾ ?
ನಾವು ತಿಂಗಳ ಪ್ರಿಪೇಯ್ಡ್ ಯೋಜನೆಗಳಿಗಾಗಿ ಹುಡುಕುವಾಗ ಸಾಮಾನ್ಯವಾಗಿ 28 ದಿನಗಳವರೆಗೆ ವ್ಯಾಲಿಡಿಟಿ ಹೊಂದಿರುವ ಯೋಜನೆಗಳನ್ನು ಮಾತ್ರ ನೋಡುತ್ತೇವೆ. ಫೆಬ್ರವರಿ ತಿಂಗಳು ಹೊರತುಪಡಿಸಿ ಉಳಿದ ಎಲ್ಲ ತಿಂಗಳಲ್ಲೂ 30 ಮತ್ತು 31 ದಿನಗಳಿರುತ್ತವೆ. ಆದರೂ ನಾವು ಎರಡು ದಿನ ಕಡಿಮೆ ಇರುವ ವ್ಯಾಲಿಡಿಟಿಯನ್ನು ಮಾತ್ರ ಪಡೆಯುತ್ತವೆ.
28 ದಿನಗಳ ಯೋಜನೆಗೆ ಬಳಕೆದಾರರು ವರ್ಷದಲ್ಲಿ 13 ಬಾರಿ ರೀಚಾರ್ಜ್ ಮಾಡಬೇಕಾಗುತ್ತದೆ. 12 ತಿಂಗಳಿಗೆ 28 ದಿನಗಳ ಮಾಸಿಕ ಯೋಜನೆಯು 336 ದಿನಗಳಿಗೆ ಮಾನ್ಯತೆಯನ್ನು ನೀಡುತ್ತವೆ. ಇದು ವರ್ಷದಲ್ಲಿ 29 ದಿನಗಳು ಕಡಿಮೆಯಾಗಿದೆ. ಅಂದರೆ ಬಳಕೆದಾರರು ಒಂದು ವರ್ಷ ಪೂರ್ಣಗೊಳಿಸಲು ಒಂದು ಹೆಚ್ಚುವರಿ ಪ್ಯಾಕ್‌ಗೆ ರೀಚಾರ್ಜ್ ಮಾಡಬೇಕು. ಇದರಿಂದ ಟೆಲಿಕಾಂ ಕಂಪೆನಿಗಳು ಹೆಚ್ಚುವರಿ ಹಣಗಳಿಸಲು ಸಾಧ್ಯವಾಗುತ್ತದೆ.
ಜುಲೈ 2022 ರಲ್ಲಿ ಏರ್‌ಟೆಲ್ ನ 35.48 ಕೋಟಿ ಬಳಕೆದಾರರು 179 ರೂ. ಯೋಜನೆಗೆ 28 ದಿನಗಳ ಮಾನ್ಯತೆಯೊಂದಿಗೆ ರೀಚಾರ್ಜ್ ಮಾಡಿದರೆ ಕಂಪೆನಿಯು ಸುಮಾರು 6,350 ಕೋಟಿ ರೂಪಾಯಿಗಳಿಸಿದೆ. ಅದೇ ರೀತಿ ಜಿಯೋ 40.8 ಕೋಟಿ ಚಂದಾದಾರರನ್ನು ಹೊಂದಿದ್ದು 28 ದಿನಗಳಲ್ಲಿ ಸುಮಾರು 8,527 ಕೋಟಿ ರೂಪಾಯಿ ಗಳಿಸಿದೆ. ಇದರಲ್ಲಿ ಬಳಕೆದಾರರು ಕೇವಲ 336 ದಿನಗಳ ಸೇವೆಯನ್ನು ಪಡೆದರು. ಅದೇ ರೀತಿ 84 ದಿನಗಳ ಮಾನ್ಯತೆ ಇರುವ ತ್ರೈಮಾಸಿಕ ಯೋಜನೆಯೂ ಇದೇ ರೀತಿ ಕಾರ್ಯನಿರ್ವಹಿಸುತ್ತದೆ.
28 ದಿನಗಳ ವ್ಯಾಲಿಡಿಟಿ ಯೋಜನೆಯನ್ನು ಪ್ರತಿಯೊಂದು ಕಂಪೆನಿಯು ವಿಭಿನ್ನ ಬೆಲೆ ಶ್ರೇಣಿಗಳಲ್ಲಿ ಇರಿಸಿದೆ. ಅಗ್ಗದ ಯೋಜನೆ ಆಯ್ಕೆ ಮಾಡಿದರೆ ವ್ಯಾಲಿಡಿಟಿ ಮತ್ತಷ್ಟು ಕಡಿತಗೊಳ್ಳುತ್ತದೆ. 28 ದಿನಗಳ ವ್ಯಾಲಿಡಿಟಿಯೊಂದಿಗೆ ಜಿಯೋ ಪ್ರಿಪೇಯ್ಡ್ ಯೋಜನೆಗಳು 209, 239, 299, 419 ರೂ. ಹಾಗೂ ಏರ್‌ಟೆಲ್ ಪ್ರಿಪೇಯ್ಡ್ ಯೋಜನೆಗಳು179, 265, 299, 359, 399, 449 ರೂ. ಮತ್ತು ಅದಕ್ಕಿಂತ ಹೆಚ್ಚಿನ ದರದಲ್ಲಿ ಲಭ್ಯವಿದೆ.
ಗ್ರಾಹಕರು 12 ತಿಂಗಳ ಬದಲಿಗೆ 13 ತಿಂಗಳವರೆಗೆ ಪಾವತಿಸಬೇಕಾದ ಬಗ್ಗೆ ಪರಿಶೀಲನೆ ನಡೆಸಿರುವ ಟಿಆರ್ ಎಐ, ಕ್ಯಾಲೆಂಡರ್ ತಿಂಗಳಿನ 30 ಅಥವಾ 31 ದಿನಗಳನ್ನು ಲೆಕ್ಕಿಸದೆ ಮಾಸಿಕ ಮಾನ್ಯತೆಯೊಂದಿಗೆ ಬರುವ ಯೋಜನೆಯನ್ನು ಟೆಲಿಕಾಂ ಆಪರೇಟರ್‌ಗಳು ನೀಡುವುದನ್ನು ಕಡ್ಡಾಯಗೊಳಿಸಿದೆ. ಈ ಆದೇಶದ ಬಳಿಕ ಎಲ್ಲ ಕಂಪೆನಿಗಳು ಮಾಸಿಕ ಮಾನ್ಯತೆಯ ರೀಚಾರ್ಜ್ ಅನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ಪರಿಚಯಿಸಿತ್ತು.