
ಯುಪಿಐ ಪಾವತಿ ಅಥವಾ ಮೊಬೈಲ್ ಟ್ರಾನ್ಸ್‌ಫರ್ ತಪ್ಪಾದರೆ ಏನು ಮಾಡೋದು? – ಗಡಿಬಿಡಿ ಆಗ್ಬೇಡಿ, ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ..
- ಟಾಪ್ ನ್ಯೂಸ್
- October 31, 2023
- No Comment
- 72
ನ್ಯೂಸ್ ಆ್ಯರೋ : ಯುಪಿಐ ಪಾವತಿ ನಗದು ವ್ಯವಹಾರವನ್ನು ಕಡಿಮೆಗೊಳಿಸಿ ಸುರಕ್ಷಿತ ಹಣ ವರ್ಗಾವಣೆಗೆ ದಾರಿ ಮಾಡಿಕೊಟ್ಟಿದೆ. ಆದರೆ ಇದರಲ್ಲಿ ಕೆಲವೊಮ್ಮೆ ತಪ್ಪುಗಳಾದರೆ ಏನು ಮಾಡುವುದು ಎನ್ನುವ ಗೊಂದಲ ಉಂಟಾಗುವುದು ಸಹಜ.
ಕ್ಷಣಾರ್ಧದಲ್ಲಿ ಮಾಡಿ ಮುಗಿಸಬಹುದಾದ ಯುಪಿಐ ಪಾವತಿ ವೇಳೆ ಕೆಲವೊಮ್ಮೆ ತಪ್ಪಾಗಿ ಬೇರೆಯವರಿಗೆ ಹಣ ವರ್ಗಾವಣೆಯಾಗಬಹುದು. ಗುರುತು ಪರಿಚಯವಿದ್ದರೆ ಕೇಳಿ ಪಡೆಯಬಹುದು. ಆದರೆ ಹೆಚ್ಚು ಪರಿಚಯವೇ ಇಲ್ಲದವರಿಗೆ ಹೋದರೆ ಏನು ಮಾಡುವುದು. ಹೀಗಾಗಿ ಯುಪಿಐ ಪಾವತಿಗೂ ಮೊದಲು ಸಾಕಷ್ಟು ಯೋಚನೆ ಮಾಡುವಂತಾಗಿದೆ.
ಸಾಮಾನ್ಯವಾಗಿ ಯುಪಿಐ ಪಾವತಿ ಕ್ಷಣಾರ್ಧದಲ್ಲಿ ನಡೆಯುತ್ತದೆ. ಅದನ್ನು ಹಿಂಪಡೆಯುವುದು ಕಷ್ಟ. ಆದರೂ ಕೆಲವೊಮ್ಮೆ ರಿಫಂಡ್ ಗೆ ಮನವಿ ಮಾಡಬಹುದಾಗಿದೆ.
ಏನು ಮಾಡಬಹುದು?
- ತಪ್ಪಾಗಿ ಬೇರೆಯವರಿಗೆ ಹಣ ಕಳುಹಿಸಿದ್ದರೆ ಕೂಡಲೇ ಅವರನ್ನು ಸಂಪರ್ಕಿಸಿ ಹಣವನ್ನು ಮರಳಿಸುವಂತೆ ಕೇಳುವುದು. ಒಳ್ಳೆಯವರು ಖಂಡಿತ ಹಣವನ್ನು ಮರಳಿ ನೀಡುತ್ತಾರೆ.
- ಹಣ ಪಡೆದವರು ಹಣ ಮರಳಿಸದೇ ಇದ್ದರೆ ಕೂಡಲೇ ಸಹಾಯಕ್ಕಾಗಿ ನಿಮ್ಮ ಬ್ಯಾಂಕ್ ಅಥವಾ ಯುಪಿಐ ಅಪ್ಲಿಕೇಶನ್ ಕಂಪೆನಿಯನ್ನು ಸಂಪರ್ಕಿಸಬೇಕು. ಇದಕ್ಕಾಗಿ ವಹಿವಾಟು ಉಲ್ಲೇಖ ಸಂಖ್ಯೆ (ಯುಟಿಆರ್), ದಿನಾಂಕ ಮತ್ತು ವಹಿವಾಟಿನ ಮೊತ್ತವನ್ನು ಒದಗಿಸಬೇಕು.
- ಹಣ ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲವು ದಿನಗಳು ಬೇಕಾಗಬಹುದು. ಇದಕ್ಕಾಗಿ ನಿರಂತರ ಬ್ಯಾಂ ಕ್ ಅಥವಾ ಯುಪಿಐ ಅಪ್ಲಿಕೇಶನ್ ಕಂಪೆನಿಯೊಂದಿಗೆ ಸಂಪರ್ಕದಲ್ಲಿರಬೇಕು.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಯುಪಿಐ ವಹಿವಾಟುಗಳು ಬಾಕಿ ಇದ್ದರೆ, ವಿಫಲವಾದ ಸ್ಥಿತಿಯಲ್ಲಿದ್ದರೆ ಮಾತ್ರ ಹಿಂದಕ್ಕೆ ಪಡೆಯಲು ಸಾಧ್ಯ. ವಹಿವಾಟು ಪೂರ್ಣಗೊಂಡ ಬಳಿಕ ಅದನ್ನು ಮರಳಿ ಪಡೆಯುವುದು ಸಾಧ್ಯವಿಲ್ಲ.
ಹೀಗಾಗಿ ಯುಪಿಐ ಪೇಮೆಂಟ್ ಮಾಡುವಾಗ ಹಣ ಕಳುಹಿಸುವವರ ಯುಪಿಐ ಐಡಿ ಮತ್ತು ಅನಧಿಕೃತ ವಹಿವಾಟುಗಳ ಬಗ್ಗೆ ಬ್ಯಾಂಕ್ ಅಥವಾ ಯುಪಿಐ ಅಪ್ಲಿಕೇಶನ್ ಕಂಪನಿಗೆ ತಕ್ಷಣ ವರದಿ ನೀಡಿದರೆ ಕೂಡಲೇ ಕ್ರಮ ಕೈಗೊಳ್ಳಲು ಸಾಧ್ಯವಿದೆ.