
ಮೊಬೈಲ್ ನಂಬರ್ ಇಲ್ಲದೆ ವಾಟ್ಸಾಪ್ ಬಳಸಬಹುದು – ಇಲ್ಲಿದೆ ವಾಟ್ಸಾಪ್ ಹೊಸ ಫೀಚರ್ ಡೀಟೈಲ್ಸ್!
- ಟೆಕ್ ನ್ಯೂಸ್
- November 9, 2023
- No Comment
- 79
ನ್ಯೂಸ್ ಆ್ಯರೋ : ಜಗತ್ತಿನ ಜನಪ್ರಿಯ ಚಾಟಿಂಗ್ ಆ್ಯಪ್ ಎನಿಸಿಕೊಂಡಿರುವ ವಾಟ್ಸಾಪ್ ಬಳಕೆದಾರರಿಗಾಗಿ ದಿನಕ್ಕೊಂದು ಹೊಸ ಫೀಚರ್ಸ್ ಗಳನ್ನು ಅಳವಡಿಸುತ್ತದೆ. ಸದ್ಯ, ಇನ್ನೊಂದು ಅತ್ಯುತ್ತಮ ಫೀಚರ್ ಸಿದ್ಧವಾಗಿದೆ. ಸಾಮಾನ್ಯವಾಗಿ ವಾಟ್ಸಾಪ್ ಬಳಸಲು ಮೊಬೈಲ್ ನಂಬರ್ ಬೇಕೇ ಬೇಕು. ಏಕೆಂದರೆ ವಾಟ್ಸಾಪ್ ಖಾತೆಯನ್ನು ಆ್ಯಕ್ಟಿವೇಟ್ ಮಾಡಲು ಅದಕ್ಕೆ ಸಂಬಂಧಿಸಿದ OTP ಪಡೆಯಲು ಈ ನಂಬರ್ ಸಹಾಯಕವಾಗುತ್ತದೆ. ಆದರೆ ನಿಮ್ಮ ಸಿಮ್ ಕಳೆದು ಹೋದರೆ ಆ ಖಾತೆಯನ್ನು ಬೇರೆ ವ್ಯಕ್ತಿಗಳು ಬಳಸುವ ಅಪಾಯವಿರುತ್ತದೆ. ಇದರಿಂದ ಬಳಕೆದಾರರನ್ನು ಕಾಪಾಡಲು ವಾಟ್ಸಾಪ್ ನಂಬರ್ ಲೆಸ್ ವಾಟ್ಸಾಪ್ ಪರಿಚಯಿಸುತ್ತಿದೆ.
ಯಾವುದು ಈ ಹೊಸ ಫೀಚರ್?
Webtalanfo ವರದಿಯ ಪ್ರಕಾರ ವಾಟ್ಸಾಪ್ ಇಮೇಲ್ ವೆರಿಫಿಕೇಷನ್ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಇದರಿಂದಾಗಿ ಬಳಕೆದಾರರು ತಮ್ಮ ಫೋನ್ ಸಂಖ್ಯೆಯ ಜೊತೆಗೆ ಇಮೇಲ್ ಬಳಸಿಕೊಂಡು ಖಾತೆಗಳಿಗೆ ಲಾಗ್ ಇನ್ ಮಾಡಲು ಅನುಮತಿಸುತ್ತದೆ. ಈ ಫೀಚರ್ ಅಸ್ತಿತ್ವದಲ್ಲಿರುವ ವೆರಿಫಿಕೇಷನ್ ಪ್ರಕ್ರಿಯೆಗೆ ಹೆಚ್ಚುವರಿಯಾಗಿರುತ್ತದೆ ಮತ್ತು SMS ವೆರಿಫಿಕೇಷನ್ ಅನ್ನು ಬದಲಾಯಿಸುವುದಿಲ್ಲ. SMS ಮೂಲಕ OTP ಪಡೆಯಲಾಗದಿದ್ದರೆ ಬಳಕೆದಾರರು ಈ ವಿಧಾನ ಅನುಸರಿಸಬಹುದು.
ಹೊಸ ಫೀಚರ್ ಅಳವಡಿಸುವುದು ಹೇಗೆ?
ಸದ್ಯದಲ್ಲೇ ವಾಟ್ಸಾಪ್ ನಲ್ಲಿ ಈ ಫೀಚರ್ ಕಾಣಿಸಿಕೊಳ್ಳಲಿದೆ. ಈ ವೈಶಿಷ್ಟ್ಯವೂ ಸದ್ಯ ಆಂಡ್ರಾಯ್ಡ್ ಹಾಗೂ iOS ಗಾಗಿ ಬೀಟಾ ಆವೃತ್ತಿಗಳಲ್ಲಿ ಲಭ್ಯವಿದೆ. ಬಳಕೆದಾರರು ಹೊಸದಾಗಿ ಸೇರಿಸಲಾದ ಖಾತೆ ಸೆಟ್ಟಿಂಗ್ ಗಳಲ್ಲಿ ಇದನ್ನು ಕಾಣಬಹುದಾಗಿದೆ. ಇದೊಂದು ಸುಲಭವಾದ ವಿಧಾನವಾಗಿದೆ. ಇದರಿಂದಾಗಿ ಇತರರಿಗೆ ಇಮೇಲ್ ವಿಳಾಸ ಗೋಚರಿಸುವುದಿಲ್ಲ ಹಾಗೂ ವೆರಿಫಿಕೇಷನ್ ವ್ಯವಸ್ಥೆಯು ವಾಟ್ಸಾಪ್ ಖಾತೆ ಪ್ರವೇಶಿಸಲು ಸಹಾಯ ಮಾಡುತ್ತದೆ.
ಯಾರಿಗೆಲ್ಲ ಈ ಫೀಚರ್ ಲಭ್ಯ?
ಬಳಕೆದಾರರು ತಮ್ಮ ಇಮೇಲ್ ವಿಳಾಸಗಳನ್ನು ನಮೂದಿಸಿದ ನಂತರ ಅವುಗಳನ್ನು ವೆರಿಫಿಕೇಷನ್ ಮಾಡಬಹುದಾಗಿದೆ. ಸದ್ಯ, ವಾಟ್ಸಾಪ್ ಹೊರ ತಂದಿರುವ ಈ ಹೊಸ ಫೀಚರ್ ಬಳಕೆದಾರರ ವೈಯಕ್ತಿಕ ವಿಚಾರದ ರಕ್ಷಣೆಯ ದೃಷ್ಟಿಯಲ್ಲಿ ಅತ್ಯುತ್ತಮವಾಗಿದೆ.
ದೀರ್ಘಕಾಲದದವರೆಗೆ ವಾಟ್ಸಾಪ್ ಇಮೇಲ್ ವೆರಿಫಿಕೇಷನ್ ವೈಶಿಷ್ಟ್ಯ ಪರೀಕ್ಷಿಸುತ್ತದೆ. ಸದ್ಯದಲ್ಲೇ ಈ ಹೊಸ ಫೀಚರ್ ಎಲ್ಲಾ ವಾಟ್ಸಾಪ್ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಬೀಟಾ ಸಂಸ್ಥೆ ಹೇಳಿಕೊಂಡಿದೆ ಎನ್ನಲಾಗಿದೆ.