
Mangalore : ವರದಕ್ಷಿಣೆ ಕಿರುಕುಳ, ಹಲ್ಲೆಗೈದು ಪತ್ನಿಗೆ ತ್ರಿವಳಿ ತಲಾಕ್ ನೀಡಿದ ಪತಿ – ಪ್ರಕರಣ ದಾಖಲು, ಆರೋಪಿ ಪತಿ ಅಸೈಗೋಳಿ ಕರೀಂ ಬಂಧನ
- ಕರಾವಳಿ
- November 9, 2023
- No Comment
- 174
ನ್ಯೂಸ್ ಆ್ಯರೋ : ಮಂಗಳೂರು ನಗರ ಹೊರವಲಯದ ದೇರಳಕಟ್ಟೆ ಅಸೈಗೋಳಿ ನಿವಾಸಿ ಅಬ್ದುಲ್ ಕರೀಂ ಎಂಬಾತನು ತನ್ನ ಹೆಂಡತಿಗೆ ವರದಕ್ಷಿಣೆ ನೀಡಲು ಕಿರುಕುಳ ನೀಡುತ್ತಾ ನಿರಂತರ ಹಲ್ಲೆ ಮಾಡಿ ನಂತರ ತಲಾಕ್ ತಲಾಕ್ ತಲಾಕ್ ಎಂದು ಹೇಳಿ ವಿಚ್ಛೇದನೆ ನೀಡಿದ ಘಟನೆ ನಡೆದಿದೆ.
ನೊಂದ ಮಹಿಳೆಯು ನಗರದ ಮಹಿಳಾ ಪೋಲಿಸ್ ಠಾಣೆಯಲ್ಲಿ ತನ್ನ ಗಂಡ ಕರೀಮ್ ಎಂಬಾತನ ವಿರುದ್ದ ದೂರು ನೀಡಿದ್ದು ಮಹಿಳಾ ಪೊಲೀಸ್ ಠಾಣೆಯ ಪೋಲೀಸರು ಆರೋಪಿಯನ್ನು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.
ಬುಧವಾರ ನ್ಯಾಯಾಲಯದಲ್ಲಿ ಹಾಜರಿ ಪಡಿಸಿದ್ದು ನಗರದ ಮೂರನೆ ಜೆ. ಎಂ. ಎಫ್. ಸೀ ನ್ಯಾಯಾಲಯವು ದಿನಾಂಕ 08/11/2023 ರಂದು ಆರೋಪಿ ಕರೀಮ್ ಎಂಬಾತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಯ ವಿರುದ್ದ ನಗರದ ಪಾಂಡೇಶ್ವರ ಮಹಿಳಾ ಪೋಲಿಸ್ ಠಾಣೆಯ ಕ್ರೈಂ ನಂಬರ್ 110/23 ಯಾಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ 3 ಮತ್ತು 4, I.P.C ಕಾಯ್ದೆ 323,498A,504,506, ಮುಸ್ಲಿಂ ಮಹಿಳಾ ರಕ್ಷಣಾ ಕಾಯ್ದೆ 4 ಮುಂತಾದ ಪ್ರಕರಣಗಳು ದಾಖಲೆಗಳಾಗಿದೆ. ನೊಂದ ಮಹಿಳೆ ಮತ್ತು ಕುಟುಂಬದವರು ದೂರು ನೀಡಲು ನಗರದ ಪ್ರಖ್ಯಾತ ವಕೀಲರಾದ ಜೀಶಾನ್ ಆಲಿ ಸುರತ್ಕಲ್ ರವರ ಸಹಕಾರ ಕೋರಿದ್ದರು.