ಪ್ರತಿ ಪರ್ಸನಲ್ ಚಾಟಿಂಗ್ ಗೂ ಲಾಕಿಂಗ್ ಸಿಸ್ಟಮ್ – ವಾಟ್ಸಾಪ್ ನ ಹೊಸ ಫೀಚರ್ಗೆ ಗ್ರಾಹಕರು ಫುಲ್ ಖುಷ್

ಪ್ರತಿ ಪರ್ಸನಲ್ ಚಾಟಿಂಗ್ ಗೂ ಲಾಕಿಂಗ್ ಸಿಸ್ಟಮ್ – ವಾಟ್ಸಾಪ್ ನ ಹೊಸ ಫೀಚರ್ಗೆ ಗ್ರಾಹಕರು ಫುಲ್ ಖುಷ್

ನ್ಯೂಸ್ ಆ್ಯರೋ : ಈಗಿನ ದಿನಗಳಲ್ಲಿ ಮೊಬೈಲ್ ಅನ್ನು ಬೇರೆಯವರಿಗೆ ನೀಡುವಾಗ ಎಷ್ಟು ಜಾಗೃತೆ ವಹಿಸಿದರೂ ಕಡಿಮೆಯೇ. ಒಂಚೂರು ಎಚ್ಚರ ತಪ್ಪಿದರೂ ನಮ್ಮ ಮೆಸೇಜಿಂಗ್ ಆ್ಯಪ್ಗಳಲ್ಲಿರುವ ಖಾಸಗಿ ಸಂಭಾಷಣೆಗಳು ಸೋರಿಕೆಯಾಗಬಹುದು. ಹೀಗಾಗಿ ನಾವು ಬೇರೆಯವರಿಗೆ ಮೊಬೈಲ್‌ ನ ಸ್ಕ್ರೀನ್‌ ಅನ್ ಲಾಕ್ ಮಾಡಿ ಕೊಡುವುದಕ್ಕೆ ಹಿಂದು ಮುಂದು ನೋಡುತ್ತೇವೆ. ಇದೀಗ ಈ ಮುಜುಗರವನ್ನು ತಪ್ಪಿಸಲು ವಾಟ್ಸಾಫ್ ಹೊಸ ಪರಿಹಾರವನ್ನು ಕಂಡುಹಿಡಿದಿದ್ದು ಶೀಘ್ರವೇ ಅನುಷ್ಠಾನಕ್ಕೆ ತರಲಿದೆ. ಈ ಮೂಲಕ ವಾಟ್ಸಾಪ್ ಗ್ರಾಹಕರ ಗೌಪ್ಯತೆಗೆ ಹೆಚ್ಚು ಆದ್ಯತೆ ನೀಡಲಿದೆ.

ಈಗಾಗಲೆ ಕೆಲ ಕಂಪೆನಿಯ ಸ್ಮಾರ್ಟ್ ಫೋನ್ ಗಳು ನಿರ್ದಿಷ್ಟ ಆಪ್ಲಿಕೇಶನ್ ಗಳಿಗೆ ಪ್ರತ್ಯೇಕವಾಗಿ ಲಾಕ್ ಮಾಡಿಕೊಳ್ಳುವ ಆಯ್ಕೆಯನ್ನು ನೀಡಿವೆ. ಪ್ರೀತಿ ಪಾತ್ರರು ಕೆಲವು ಬಾರಿ ನಮ್ಮ ಬಳಿ ಮೊಬೈಲ್ ನೀಡುವಂತೆ ಕೇಳಿದಾಗ ಅನಿವಾರ್ಯವಾಗಿ ಕೊಡಬೇಕಾದ ಸಂದರ್ಭ ಬರುತ್ತದೆ. ಆ ಸಮಯದಲ್ಲಿ ಅವರು ನಮ್ಮ ಚಾಟಿಂಗ್ ಹಿಸ್ಟರಿ ನೋಡಬಹುದೆಂಬ ಭಯ ನಮ್ಮನ್ನು ಕಾಡದೆ ಇರದು. ಈ ನಿಟ್ಟಿನಲ್ಲಿ ವಾಟ್ಸಾಪ್ ಹೊರತರಲಿರುವ ಹೊಸ ಬದಲಾವಣೆ ಪ್ರಯೋಜನಕಾರಿಯಾಗಲಿದೆ.

ಇದೀಗ ವಾಟ್ಸಾಪ್ ಪ್ರತೀ ಪರ್ಸನಲ್ ಚ್ಯಾಟಿಂಗ್ ಗಳಿಗೂ ಪ್ರತ್ಯೇಕವಾಗಿ ಲಾಕಿಂಗ್ ಫೀಚರ್ ತರುವುದಾಗಿ ವರದಿ ಮಾಡಿದೆ. ವಾಟ್ಸಾಪ್ ನ ಈ ಯೋಜನೆ ಶೀಘ್ರದಲ್ಲಿ ಜಾರಿಗೆ ಬಂದರೆ ನಮ್ಮ ಪರ್ಸನಲ್ ಚಾಟಿಂಗ್ ಗಳು ಸುರಕ್ಷಿತವಾಗಿರಲಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *