ಇನ್ನೋವಾ ಹೈಕ್ರಾಸ್  ZX ಸಿರೀಸ್ ನ ಕಾರ್ ಪೂರೈಕೆ ಸ್ಥಗಿತ – ಕಂಪನಿ ನೀಡಿತು ಶಾಕಿಂಗ್ ಕಾರಣ..!! ಏನದು?

ಇನ್ನೋವಾ ಹೈಕ್ರಾಸ್ ZX ಸಿರೀಸ್ ನ ಕಾರ್ ಪೂರೈಕೆ ಸ್ಥಗಿತ – ಕಂಪನಿ ನೀಡಿತು ಶಾಕಿಂಗ್ ಕಾರಣ..!! ಏನದು?

ನ್ಯೂಸ್ ಆ್ಯರೋ : ಸಾಕಷ್ಟು ಡಿಮ್ಯಾಂಡ್ ಸೃಷ್ಟಿಸಿದ್ದ ಇನ್ನೋವಾ ಹೈಕ್ರಾಸ್(Innova Hycross) ಕಾರಿನ ZX ಮತ್ತು ZX(O) ಅವತರಣಿಕೆಗಳ ಪೂರೈಕೆಯನ್ನು ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಕಂಪೆನಿಯು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪ್ರಸ್ತುತ ಈ ಸೀರೀಸ್ ಗಳ ಕಾರುಗಳಿಗೆ ವಿಪರೀತ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಪೂರೈಕೆಯು ಸವಾಲಾದ್ದರಿಂದ ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದರ ಹೊರತಾಗಿ ಹೈ ಕ್ರಾಸ್ ನ ಇತರ ಸೀರೀಸ್ ಗಳ ಬುಕ್ಕಿಂಗ್ ಮುಂದುವರೆಯಲಿದೆ.

ಹೈಬ್ರೀಡ್ ಎಂಜಿನ್ ಹೊಂದಿರುವುದರಿಂದ ಟೊಯೋಟಾ ಇನ್ನೋವಾ ಹೈಕ್ರಾಸ್ VX, VX(O), ZX ಮತ್ತು ZX(O) ಅವತರಣಿಕೆಯ ಕಾರುಗಳಿಗೆ ಭಾರಿ ಬೇಡಿಕೆಯುಂಟಾಗಿದೆ. ಜೊತೆಗೆ ಇನ್ನೊಂದು ಮುಖ್ಯ ಕಾರಣವೆಂದರೆ ಈ ಕಾರುಗಳು 23.24 ಕಿಲೋಮೀಟರ್ ಮೈಲೇಜ್ ನಿಡುವುದಾಗಿದೆ.

ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಕಾರು TNGA ಹೈಬ್ರಿಡ್ ಪೆಟ್ರೋಲ್ ಎಂಜಿನ್ ಮತ್ತು E-ಡ್ರೈವ್ ಟ್ರಾನ್ಸ್‌ಮಿಷನ್ ಹೊಂದಿದ್ದು, ಟೊಯೋಟಾದ 5ನೇ ತಲೆಮಾರಿನ ಸೆಲ್ಫ್ ಚಾರ್ಜಿಂಗ್ ಹೈಬ್ರೀಡ್ ಎಲೆಕ್ಟ್ರಿಕ್ ತಂತ್ರಜ್ಞಾನವನ್ನು ಬಳಸಲಾಗಿದೆ. ಪ್ಯಾನರೋಮಿಕ್ ಸನ್‌ರೂಫ್, ಹೈಕ್ರಾಸ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇದಲ್ಲದೆ ಡೈನಾಮಿಕ್ ರಾಡಾರ್ ಕ್ರೂಸ್ ಕಂಟ್ರೋಲ್, ಲೇನ್ ಟ್ರೇಸ್ ಅಸಿಸ್ಟ್, ಸೇರಿದಂತೆ ಇನ್ನೂ ಹಲವು ಬಗೆಯ ವೈಶಿಷ್ಟ್ಯಗಳನ್ನು ಹೈಕ್ರಾಸ್ ಹೊಂದಿದೆ.

ಹೈ ಕ್ರಾಸ್ ಹೈಬ್ರೀಡ್ ಕಾರುಗಳ ಬೆಲೆಗಳು ಇಂತಿವೆ..

  • * ಇನ್ನೋವಾ ಹೈಕ್ರಾಸ್ ಹೈಬ್ರಿಡ್ VX 24,76,000 – 24,81,000 ರೂ.
  • * ಇನ್ನೋವಾ ಹೈಕ್ರಾಸ್ ಹೈಬ್ರಿಡ್ VX(O) 26,73,000 – 26,78,000 ರೂ.
  • * ಇನ್ನೋವಾ ಹೈಕ್ರಾಸ್ ಹೈಬ್ರಿಡ್ ZX 29,08,000 – 29,72,000 ರೂ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *