ವಾಟ್ಸಾಪ್ ನಲ್ಲೂ ಸ್ಕ್ರೀನ್ ಶೇರ್ ಗೆ ಅವಕಾಶ – ಝೂಮ್, ಗೂಗಲ್ ಮೀಟ್ ಗೆ ಠಕ್ಕರ್ ಕೊಡಲು ಮೆಟಾ ಸಜ್ಜು

ವಾಟ್ಸಾಪ್ ನಲ್ಲೂ ಸ್ಕ್ರೀನ್ ಶೇರ್ ಗೆ ಅವಕಾಶ – ಝೂಮ್, ಗೂಗಲ್ ಮೀಟ್ ಗೆ ಠಕ್ಕರ್ ಕೊಡಲು ಮೆಟಾ ಸಜ್ಜು

ನ್ಯೂಸ್ ಆ್ಯರೋ ‌: ಕೊರೊನಾ ಕಾಲದಲ್ಲಿ ಆನ್‌ಲೈನ್ ತರಗತಿಗಳನ್ನು ನಡೆಸಲು ಬಳಸಿದ್ದ ಝೂಮ್ ಆ್ಯಪ್ ನಂತೆ ಇನ್ಮುಂದೆ ವಾಟ್ಸಾಪ್ ನಲ್ಲೂ ಸ್ಕ್ರೀನ್ ಶೇರ್ ಮಾಡುವ ಅವಕಾಶ ನೀಡಲಾಗಿದೆ.

ಈ ಮೊದಲು ವೀಡಿಯೋ ಕರೆಗಳ ವೇಳೆಯಲ್ಲಿ ಈಗಾಗಲೇ ಜೂಮ್ ಸೇರಿದಂತೆ ಇತರೇ ಆಪ್ ಗಳಲ್ಲಿ ಸ್ಕ್ರೀನ್ ಶೇರ್ ಮಾಡುವುದಕ್ಕೆ ಅವಕಾಶವಿತ್ತು. ಅದೇ ಮಾದರಿಯಲ್ಲಿ ಈಗ ವಾಟ್ಸಾಪ್ ನಲ್ಲಿಯೂ ಸ್ಕ್ರೀನ್ ಶೇರ್ ಮಾಡುವ ಹೊಸ ಫೀಚರ್ ಬಿಡುಗಡೆ ಮಾಡಿದೆ.

ಈ ನೂತನ ಫೀಚರ್ ಅನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಪ್ರಸಿದ್ಧ ಮೆಸೇಜಿಂಗ್ ಆಪ್ ಘೋಷಿಸಿದೆ. ಫೇಸ್‌ಬುಕ್‌ ಹಾಗೂ ವಾಟ್ಸಾಪ್ ನ ಮೂಲಸಂಸ್ಥೆ ಮೆಟಾದ ಸಿಇಓ ಮಾರ್ಕ್ ಜುಗರ್ ಬರ್ಗ್ ಅವರು ವಾಟ್ಸಾಪ್ ನ ಹೊಸ ಫೀಚರ್ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಘೋಷಿಸಿದ್ದಾರೆ.

ಸದ್ಯ ವಾಟ್ಸಾಪ್ ನ ವೀಡಿಯೋ ಕಾಲ್ ಸಂದರ್ಭದಲ್ಲಿ ಫ್ರಂಟ್ ಕ್ಯಾಮೆರಾ ಅಥವಾ ಬ್ಯಾಕ್ ಕ್ಯಾಮೆರಾಗಳನ್ನು ಟರ್ನ್ ಮಾಡಿಕೊಂಡು ಸಂವಾದ ನಡೆಸಲು ಅವಕಾಶವಿತ್ತು. ಆದರೆ ಮೊಬೈಲ್ ಸ್ಕ್ರೀನ್ ಶೇರ್ ಮಾಡಲು ಅವಕಾಶವಿರಲಿಲ್ಲ. ಈಗ ಅದಕ್ಕೂ ಹೊಸ ಫೀಚರ್ ನಲ್ಲಿ ಅವಕಾಶ ನೀಡಲಾಗಿದೆ.

ನೀವು ಜೂಮ್, ಗೂಗಲ್ ಮೀಟ್ ನಂತಹ ಆಪ್ ಗಳನ್ನು ಬಳಕೆ ಮಾಡಿದ್ದರೆ, ಅಲ್ಲಿ ಸ್ಕ್ರೀನ್ ಶೇರ್ ಮಾಡುವ ಅವಕಾಶ ಇರುವಂತೆ, ಇದೀಗ ವಾಟ್ಸಾಪ್ ನಲ್ಲಿಯೂ ವೀಡಿಯೋ ಕರೆಯ ಸಂದರ್ಭದಲ್ಲಿ ಸಂವಹಿಸುವವರ ಜೊತೆಗೆ ಸ್ಕ್ರೀನ್ ಶೇರ್ ಮಾಡೋದಕ್ಕೆ ಅವಕಾಶ ನೀಡುವುದಾಗಿ ಜುಕರ್ ಬರ್ಗ್ ಘೋಷಿಸಿದ್ದು, ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್ ಲಭಿಸಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *