ಆರ್ಥಿಕವಾಗಿ‌ ದಿವಾಳಿಯಾಗಲಿದೆ ChatGPT ಮಾತೃಸಂಸ್ಥೆ – ಶಾಕಿಂಗ್ ಕಾರಣ ಬಹಿರಂಗ..!!

ಆರ್ಥಿಕವಾಗಿ‌ ದಿವಾಳಿಯಾಗಲಿದೆ ChatGPT ಮಾತೃಸಂಸ್ಥೆ – ಶಾಕಿಂಗ್ ಕಾರಣ ಬಹಿರಂಗ..!!

ನ್ಯೂಸ್ ಆ್ಯರೋ : ಎಐ ಅಥವಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಲೋಕದಲ್ಲಿ ಕ್ರಾಂತಿ ಸೃಷ್ಟಿಸಿರುವ ಓಪನ್‌ಎಐನ ಚಾಟ್‌ಜಿಪಿಟಿ ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಭಾರೀ ಜನಪ್ರಿಯತೆ ಗಿಟ್ಟಿಸಿದ್ದರೂ ಸ್ಯಾಮ್ ಆಲ್ಟ್‌ಮನ್‌ರ ಎಐ ಅಭಿವೃದ್ಧಿ ಸ್ಟುಡಿಯೋ ಶೀಘ್ರದಲ್ಲೇ ದಿವಾಳಿಯಾಗುವ ಸಾಧ್ಯತೆ ಇದೆ ಎಂದು ಅನಲಿಟಿಕ್ಸ್ ಇಂಡಿಯಾ ನಿಯತಕಾಲಿಕೆ ವರದಿ ಮಾಡಿದೆ.

ದಿಗ್ಗಜ ಐಟಿ ಕಂಪನಿಗಳಾದ ಮೈಕ್ರೋಸಾಫ್ಟ್‌, ಖೋಸ್ಲಾ ವೆಂಚರ್ಸ್ ಹಾಗೂ ರೀಯ್ಡ್‌ ಹಾಫ್‌ಮನ್‌ನಂಥ ದಿಗ್ಗಜರು ಓಪನ್‌ಎಐಗೆ ಫಂಡಿಂಗ್ ಮಾಡುತ್ತಾ ಬಂದಿದ್ಧಾರೆ. ಕಳೆದ ಮೇ ನಿಂದ ಜುಲೈ ನಡುವೆ ಚಾಟ್‌ಜಿಪಿಟಿ ಬಳಕೆದಾರರ ಸಂಖ್ಯೆ ಗಣನೀಯವಾಗಿ ಇಳಿಯುತ್ತಾ ಬಂದಿದೆ. 1.7 ಶತಕೋಟಿಯಷ್ಟಿದ್ದ ಚಾಟ್‌ಜಿಪಿಟಿ ಬಳಕೆದಾರರ ಸಂಖ್ಯೆ ಜುಲೈನಲ್ಲಿ 1.5 ಶತಕೋಟಿಗೆ ಕುಸಿದಿದೆ.

ಜನರೇಟಿವ್‌ ಎಐ ತಂತ್ರಜ್ಞಾನದ ಬೆನ್ನೆಲುಬಾಗಿರುವ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್‌ (ಎಲ್‌ಎಲ್‌ಎಂ) ಬಳಕೆ ಮಾಡಲು ಚಾಟ್‌ಜಿಪಿಟಿ ಮಾತೃ ಸಂಸ್ಥೆ ಓಪನ್‌ ಎಐ ಮುಕ್ತವಾದ ಅವಕಾಶ ಕೊಟ್ಟಿರಲಿಲ್ಲ. ಮೆಟಾ ಹಾಗೂ ಮೈಕ್ರೋಸಾಫ್ಟ್‌ ಸಹಭಾಗಿತ್ವದಲ್ಲಿ ಮೂಡಿಬಂದ LLaMA 2ನಂಥ ಭಾಷೆಗಳನ್ನು ಮುಕ್ತವಾಗಿ ಬಳಸಬಹುದಾದ ಅವಕಾಶ ಇರುವುದು ಓಪನ್‌ಎಐಗೆ ಹಿನ್ನೆಡೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.

ಮೊದಲಿನಿಂದಲೂ ಸೂಕ್ತವಾದ ಬ್ಯುಸಿನೆಸ್ ಮಾಡೆಲ್‌ನ ಕೊರತೆ ಕಾರಣ ಚಾಟ್‌ಜಿಪಿಟಿ ಅಭಿವೃದ್ಧಿಯಾದಾಗಿನಿಂದ ಇದುವರೆಗೂ ಓಪನ್‌ಎಐಗೆ $540 ದಶಲಕ್ಷದಷ್ಟು ನಷ್ಟವಾಗಿದೆ. ಹೋಗಲಿ ಶೇರು ಮಾರುಕಟ್ಟೆಯಲ್ಲಿ ಸಾರ್ವಜನಿಕ ಶೇರುಗಳನ್ನಾದರೂ ತೇಲಿಸೋಣವೆಂದರೆ, ಕನಿಷ್ಠ 10 ವರ್ಷಗಳ ಅನುಭವ ಹಾಗೂ $100 ದಶಲಕ್ಷದಷ್ಟು ಆದಾಯ ಇಲ್ಲದೇ ಇರುವ ಕಾರಣ ಅದೂ ಸಾಧ್ಯವಾಗುತ್ತಿಲ್ಲ.

ಚಾಟ್‌ಜಿಪಿಟಿಯಿಂದಾಗಿ ಓಪನ್ ಎಐಗೆ ಪ್ರತಿನಿತ್ಯ $700,000 ಖರ್ಚಾಗುತ್ತಿದೆ. ಚಾಟ್‌ಜಿಪಿಟಿಯ 3.5 ವರ್ಶನ್‌ ಬಳಕೆದಾರರಿಗೆ ಉಚಿತವಾಗಿ ಸಿಕ್ಕರೂ ಸಹ 4.0 ವರ್ಶನ್‌ಗೆ ಹಣ ಪಾವತಿ ಮಾಡಬೇಕಾಗುತ್ತದೆ. ಅಲ್ಲದೇ ಜಿಪಿಟಿ 4 ಹಾಗೂ ಡಾಲ್ – ಇ2 ಆಧರಿತ ಚಾಟ್‌ಬಾಟ್‌ಗಳ ಖರೀದಿಯಿಂದ ಓಪನ್ ಎಐ ಹಣ ಮಾಡಬಹುದಾದರೂ ಈ ವಿಚಾರವಾಗಿ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *