Whatsapp AI Sticker : ಇನ್ಮುಂದೆ ವಾಟ್ಸಾಪ್ ನಲ್ಲಿ ಎಐ ಸ್ಟಿಕ್ಕರ್ ರಚಿಸ್ಬೋದು – ನಿಮಗೆ ಇಷ್ಟವಾದ ಸ್ಟಿಕ್ಕರ್ ರಚಿಸಿ, ಶೇರ್ ಮಾಡಿ..

Whatsapp AI Sticker : ಇನ್ಮುಂದೆ ವಾಟ್ಸಾಪ್ ನಲ್ಲಿ ಎಐ ಸ್ಟಿಕ್ಕರ್ ರಚಿಸ್ಬೋದು – ನಿಮಗೆ ಇಷ್ಟವಾದ ಸ್ಟಿಕ್ಕರ್ ರಚಿಸಿ, ಶೇರ್ ಮಾಡಿ..

ನ್ಯೂಸ್ ಆ್ಯರೋ‌ : ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಕಾಲ ಕಾಲಕ್ಕೆ ಹೊಸ ಫೀಚರ್ ಗಳನ್ನು ಒದಗಿಸುವ ಮೂಲಕ ಗ್ರಾಹಕ ಸ್ನೇಹಿಯಾಗಿದೆ. ಇದೀಗ ಹೊಸ ವೈಶಿಷ್ಟ್ಯ ಹೊರ ತರಲು ಚಿಂತನೆ ನಡೆಸಿದೆ. ಎಐ ಸ್ಟಿಕ್ಕರ್ ಗಳನ್ನು ರಚಿಸಿ, ಹಂಚಿಕೊಳ್ಳಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

ಬೀಟಾ ಆವೃತ್ತಿಯಲ್ಲಿ ಲಭ್ಯ

ಪ್ರಸ್ತುತ ಎಐ ಸ್ಟಿಕ್ಕರ್ ರಚನೆ ಮತ್ತು ಹಂಚಿಕೊಳ್ಳುವ ಅವಕಾಶ ಪ್ರಾಯೋಗಿಕವಾಗಿ ಆ್ಯಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ ಲಭ್ಯ. ಶೀಘ್ರ ಎಲ್ಲಾ ಬಳಕೆದಾರರಿಗೆ ಸಿಗುವ ಸಾಧ್ಯತೆ ಇದೆ.

ಬಳಕೆ ಹೇಗೆ?

ಅಪ್ ಡೇಟ್ ಆಗಿರುವ ವಾಟ್ಸಾಪ್ ಇನ್ ಸ್ಟಾಲ್ ಮಾಡಿದ ಬಳಿಕ ಆ್ಯಂಡ್ರಾಯ್ಡ್ ಬೀಟಾ ಬಳಕೆದಾರರು ಕೀಬೋರ್ಡ್ ತೆರೆದಾಗ ಸ್ಟಿಕ್ಕರ್ ಟ್ಯಾಬ್ ನಲ್ಲಿ ಕ್ರಿಯೇಟ್ ಎಂಬ ಬಟನ್ ಕಾಣುತ್ತದೆ. ಇದನ್ನು ಕ್ಲಿಕ್ ಮಾಡಿದಾಗ ಸ್ಟಿಕ್ಕರ್ ರಚಿಸಲು ಬೇಕಾದ ವಿವರಣೆಯನ್ನು ನಮೂದಿಸಲು ಬಳಕೆದಾರರಿಗೆ ಕೇಳಲಾಗುತ್ತದೆ. ಜೊತೆಗೆ ಈ ಹಿಂದೆ ರಚಿಸಿದ್ದ ಎಐ ಸ್ಟಿಕ್ಕರ್ ಗಳ ಸೆಟ್ ಅನ್ನೂ ವಾಟ್ಸಾಪ್ ಪ್ರದರ್ಶಿಸುತ್ತದೆ. ಈ ಸ್ಟಿಕ್ಕರ್ ಗಳನ್ನು ಶೇರ್ ಮಾಡಿಕೊಳ್ಳಬಹುದು.

ಒಂದು ವೇಳೆ ಸ್ಟಿಕ್ಕರ್ ಸೂಕ್ತವಲ್ಲ, ಹಾನಿಕಾರಕ ಎಂದೆನಿಸಿದರೆ ನೀವು ಅದನ್ನು ಮೆಟಾಗೆ ರಿಪೋರ್ಟ್ ಮಾಡುವ ಅವಕಾಶವೂ ಇರಲಿದೆ ಎಂದು ಮೂಲಗಳು ತಿಳಿಸಿವೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *