ಇದು ಅಂತಿಂಥಾ ಪೆನ್ ಡ್ರೈವ್ ಅಲ್ಲ, ಇದರ ಫೀಚರ್ಸ್ ಕೇಳಿದ್ರೆ ಬೆರಗಾಗ್ತೀರಾ..!! – ಜಂಪ್ ಡ್ರೈವ್ ಎಫ್ 35 ಹೇಗಿದೆ ಗೊತ್ತಾ?

ಇದು ಅಂತಿಂಥಾ ಪೆನ್ ಡ್ರೈವ್ ಅಲ್ಲ, ಇದರ ಫೀಚರ್ಸ್ ಕೇಳಿದ್ರೆ ಬೆರಗಾಗ್ತೀರಾ..!! – ಜಂಪ್ ಡ್ರೈವ್ ಎಫ್ 35 ಹೇಗಿದೆ ಗೊತ್ತಾ?

ನ್ಯೂಸ್ ಆ್ಯರೋ : ಪ್ರತಿಯೊಂದರಲ್ಲೂ ಹೊಸತನ್ನು ಅನ್ವೇಷಿಸುವ ಕಾಲವಿದು. ಹೀಗಾಗಿ ಸ್ಮಾರ್ಟ್ ಫೋನ್ ನಿಂದ ಹಿಡಿದು ಪೆನ್ ಡ್ರೈವ್ ವರೆಗೆ ನೂತನ ತಂತ್ರಜ್ಞಾನ ಗಳು ನಿತ್ಯವೂ ಹೊರಬರುತ್ತಿವೆ.

ಭಾರತೀಯ ಮಾರುಕಟ್ಟೆಯಲ್ಲಿ ಫ್ಲ್ಯಾಶ್ ಮೆಮೊರಿ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಲೆಕ್ಸಾರ್ ಇತ್ತೀಚೆಗೆ ಜಂಪ್‌ಡ್ರೈವ್ ಎಫ್35 ಪೆನ್ ಡ್ರೈವ್ ಅನ್ನು ಪರಿಚಯಿಸಿದೆ. ಇದು ಸಾಂಪ್ರದಾಯಿಕ ಪೆನ್ ಡ್ರೈವ್‌ಗಳಿಂತ ಭಿನ್ನವಾಗಿದ್ದು, ಅತ್ಯಾಧುನಿಕ ಯುಎಸ್ಬಿ 3.0 ಸಾಧನವು 300ಎಂಬಿ /ಎಸ್ ಅನುಕ್ರಮದ ವೇಗವನ್ನು ಒಳಗೊಂಡಿದೆ.

ತ್ವರಿತ ಡೇಟಾ ವರ್ಗಾವಣೆಗೆ ಪೂರಕವಾಗಿರುವ ಈ ಪೆನ್ ಡ್ರೈವ್ ನ ಅತ್ಯಂತ ಗಮನಾರ್ಹ ಸಂಗತಿ ಎಂದರೆ ಫಿಂಗರ್‌ಪ್ರಿಂಟ್ ಸಂವೇದಕ ಸಾಧನವಾಗಿದೆ. ದಾಖಲೆಗಳಿಗೆ ಹೆಚ್ಚು ಸುರಕ್ಷೆ ಮತ್ತು ಹೊಸ ಮಟ್ಟದ ಭದ್ರತೆಯನ್ನು ಒದಗಿಸಲಿದೆ.

ಡ್ರೈವ್‌ನಲ್ಲಿರುವ ಡೇಟಾವನ್ನು ರಕ್ಷಿಸಲು ಜಂಪ್ ಡ್ರೈವ್ ಎಫ್ 35 ಸುಧಾರಿತ 256-ಬಿಟ್ ಎಇಎಸ್ ಎನ್‌ಕ್ರಿಪ್ಶನ್ ಅನ್ನು ಒಳಗೊಂಡಿದ್ದು, ಇದರಲ್ಲಿ 10 ಫಿಂಗರ್‌ ಪ್ರಿಂಟ್‌ಗಳನ್ನು ಸಂಗ್ರಹಿಸುವ ಸಾಮರ್ಥ್ಯವಿದೆ.

ಜಂಪ್‌ಡ್ರೈವ್ ಎಫ್35 ಅತ್ಯಾಧುನಿಕ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಇದಕ್ಕೆ ಯಾವುದೇ ಪಾಸ್‌ವರ್ಡ್ ಅಥವಾ ಪಿನ್ ಸೆಟಪ್‌ಗಳ ಅಗತ್ಯವಿಲ್ಲ. ಕೆಲವೇ ಸೆಕೆಂಡಿನೊಳಗೆ ಅಲ್ಟ್ರಾ-ಫಾಸ್ಟ್ ಫಿಂಗರ್‌ಪ್ರಿಂಟ್ ಗುರುತಿಸುವ ಸಾಮರ್ಥ್ಯವನ್ನು ಇದು ಒಳಗೊಂಡಿದೆ.

ಇದಕ್ಕೆ ಯಾವುದೇ ಹೆಚ್ಚುವರಿ ಸಾಫ್ಟ್‌ವೇರ್ ಡ್ರೈವ ಗಳ ಅಗತ್ಯವಿಲ್ಲ. ಡ್ರೈವ್ ಅನ್ನು ಪ್ಲಗ್ ಇನ್ ಮಾಡಿ ಮತ್ತು ಫಿಂಗರ್‌ಪ್ರಿಂಟ್ ಹಾಕಿದರೆ ಸಾಕು ಕೂಡಲೇ ಇದರೊಳಗೆ ಇರುವ ಅಪ್ಲಿಕೇಶನ್‌ ಗಳು ತೆರೆಯುತ್ತವೆ.

ಹೊಸ ಸುರಕ್ಷತೆಯೊಂದಿಗೆ ಬಂದಿರುವ ಲೆಕ್ಸಾರ್ ಸಂಪೂರ್ಣ ಡೇಟಾ ರಕ್ಷಣೆಯನ್ನು ಒದಗಿಸುತ್ತದೆ ಹಾಗೂ ಇದರಲ್ಲಿರುವ ಮಾಹಿತಿಯು ಸುರಕ್ಷಿತವಾಗಿ ಮತ್ತು ಯಾವುದೇ ತೊಂದರೆಯಾಗಿಲ್ಲ ಎನ್ನುವುದನ್ನು ಖಚಿತ ಪಡಿಸುತ್ತದೆ.

ಅತ್ಯಾಧುನಿಕ ಭದ್ರತಾ ವೈಶಿಷ್ಟ್ಯ, ಕ್ಷಿಪ್ರ ಡೇಟಾ ವರ್ಗಾವಣೆಗೆ ಪೂರಕವಾಗಿರುವ ಲೆಕ್ಸಾರ್ ಜಂಪ್ ಡ್ರೈವ್ ಎಫ್ 35 ಪೆನ್ ಡ್ರೈವ್‌ನ ಬೆಲೆ 4,500 ರಿಂದ ಪ್ರಾರಂಭವಾಗುತ್ತದೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *