
ಶರ್ಟ್ ನ ಹಿಂಬದಿ ಸಣ್ಣ ಪಟ್ಟಿ ಯಾಕೆ ಗೊತ್ತೇ? – ಇದರ ಇತಿಹಾಸದ ಬಗ್ಗೆ ನಿಮಗೆ ಗೊತ್ತೇ ಇರಲಿಕ್ಕಿಲ್ಲ..!!
- ಸತ್ಯಾನ್ವೇಷಣೆ
- October 31, 2023
- No Comment
- 1515
ನ್ಯೂಸ್ ಆ್ಯರೋ : ಬಟ್ಟೆಗಳನ್ನು ತೊಳೆಯುವಾಗ ಯಾಕೆ ಕುಗ್ಗುತ್ತದೆ, ಬಟ್ಟೆಯ ಮೇಲೆ ಲಾಂಡ್ರಿ ಕೇರ್ ಲೇಬಲ್ ಗಳು ಯಾಕೆ ಅಗತ್ಯ, ಪ್ಯಾಂಟ್ ಗಳಿಗಿಂತ ಶರ್ಟ್ ಯಾಕೆ ದುಬಾರಿ… ಹೀಗೆ ಬಟ್ಟೆಗಳ ಮೇಲೆ ಕೆಲವೊಂದು ರಹಸ್ಯಗಳಿವೆ. ಅದು ಯಾಕೆ, ಏನು ಎಂಬುದನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ. ಮಾಡಿದರೂ ಕೆಲವೊಮ್ಮೆ ಸರಿಯಾದ ಉತ್ತರವೂ ದೊರೆಯುವುದಿಲ್ಲ. ಹೀಗಾಗಿ ಈ ರಹಸ್ಯಗಳು ಹಾಗೆ ಉಳಿದುಹೋಗುತ್ತದೆ.
ಬಟ್ಟೆಗಳ ರಹಸ್ಯಗಳಲ್ಲಿ ಒಂದು ಮುಖ್ಯವಾದದ್ದು ಎಂದರೆ ಶರ್ಟ್ ಗಳ ಹಿಂಬದಿ ಇರುವ ವಿಚಿತ್ರವಾದ ಲೂಪ್. ಇದು ಯಾಕೆ, ಏನು ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.
ಸಾಮಾನ್ಯವಾಗಿ ಪುರುಷರು ಮತ್ತು ಮಹಿಳೆಯರಿಗಾಗಿ ಶರ್ಟ್‌ಗಳ ಮೇಲೆ ಇದು ಕಂಡುಬರುತ್ತದೆ. ಲೂಪ್ ಎನ್ನುವುದು ಎರಡು ಭುಜಗಳ ನಡುವಿನ ಪ್ರದೇಶದಲ್ಲಿ ಬರುವ ಬಟ್ಟೆಯ ಸಣ್ಣ ಪಟ್ಟಿ. ಇದು ಶರ್ಟ್ ಮೇಲಿನ ಹಿಂಭಾಗದಲ್ಲಿ ಇರುತ್ತದೆ.
ಇದರ ಇತಿಹಾಸವನ್ನು ಗಮನಿಸಿದರೆ ನೌಕಾಪಡೆಯ ನಾವಿಕರು ತಮ್ಮ ಸಮವಸ್ತ್ರವನ್ನು ವಾರ್ಡ್ ರೋಬ್ ನಲ್ಲಿ ಇಡಲು ಹೆಚ್ಚು ಸ್ಥಳವಿಲ್ಲದೇ ಇದ್ದಾಗ ಇದು ಕುಣಿಕೆಗಳಾಗಿ ವ್ಯಾಪಕ ಮನ್ನಣೆ ಗಳಿಸಿತ್ತು. ಶರ್ಟ್‌ಗಳನ್ನು ಕೊಕ್ಕೆಯಿಂದ ನೇತುಹಾಕಲು ಮತ್ತು ಅವುಗಳನ್ನು ಹೆಚ್ಚು ಅನುಕೂಲಕರವಾಗಿ ಒಣಗಿಸಲುಇದನ್ನು ವಿನ್ಯಾಸಗೊಳಿಸಲಾಗಿತ್ತು.
ಬಟ್ಟೆ ತಯಾರಕ ಜಿಎಎನ್ ಟಿ ಯು 1960ರ ದಶಕದಲ್ಲಿ ತಮ್ಮ ಉಡುಗೆಗೆ ಲಾಕರ್ ಲೂಪ್ ಅನ್ನು ಪರಿಚಯಿಸಿತು. ಅದರಲ್ಲಿ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳು ತಮ್ಮ ಶರ್ಟ್‌ಗಳನ್ನು ಸುಕ್ಕುಗಟ್ಟದಂತೆ ಲಾಕರ್‌ಗಳಲ್ಲಿ ನೇತುಹಾಕಲು ಇದು ಅನುಕೂಲವಾಗಿತ್ತು. ಈ ಲೂಪ್ ಗಳು ಹಿಂಭಾಗದಲ್ಲಿ ಕಾಲರ್ ಗೆ ಜೋಡಿಸಲಾಗಿತ್ತು.
ವಿದ್ಯಾರ್ಥಿಗಳ ಬಳಿಕ ಇದು ಎಲ್ಲರ ಶರ್ಟ್ ಗಳ ಮೇಲೂ ಸ್ಥಾನ ಪಡೆಯಿತು. 1960 ರ ದಶಕದಿಂದ ಇದು ಫ್ಯಾಷನ್ ಆಗಿ ಮಾರ್ಪಟ್ಟಿದೆ. ಬ್ರ್ಯಾಂಡೆಡ್ ಶರ್ಟ್‌ಗಳಲ್ಲಿ ಲೂಪ್ ಗಳಿದ್ದರೆ ಹೆಚ್ಚು ಸುರಕ್ಷಿತ ಮತ್ತು ವಿಶ್ವಾಸಾರ್ಹ ಎಂದೇ ಪರಿಗಣಿಸಲ್ಪಟ್ಟಿದೆ.
ಸಾಮಾನ್ಯವಾಗಿ ಬಟ್ಟೆಗಳನ್ನು ಪರೀಕ್ಷಿಸುವವರು ಈ ಲೂಪ್ ಗಳನ್ನು ಎಳೆದು ನೋಡುತ್ತಾರೆ. ಇದು ಗಟ್ಟಿಯಾಗಿ ಇದ್ದರೆ ಬಟ್ಟೆ ಉತ್ತಮವಾಗಿದೆ ಎನ್ನಲಾಗುತ್ತದೆ. ಇದು ಎಷ್ಟು ಗಟ್ಟಿಯಾಗಿ ಇರುತ್ತದೆ ಎಂದರೆ ಇದನ್ನು ಎಳೆದಾಗ ಬಟ್ಟೆ ಹಾರಿದರೂ ಲೂಪ್ ಮಾತ್ರ ಬಟ್ಟೆಗೆ ಹಾಗೆಯೇ ಅಂಟಿಕೊಂಡಿರುತ್ತದೆ. ಹೀಗಾಗಿ ಒಂದು ರೀತಿಯಲ್ಲಿ ಇದು ಬಟ್ಟೆಯ ಗುಣಮಟ್ಟವನ್ನು ನಿರ್ಧರಿಸುವ ಅಂಶವೂ ಆಗಿದೆ.