IPhone 15 : ಹೊಸ ಐಫೋನ್‌ ಖರೀದಿಗೆ‌ ಮುಗಿಬಿದ್ದ ಜನ – ಈ ಫೋನ್ ನಲ್ಲಿ ಅಂಥಾದ್ದೇನಿದೆ?

IPhone 15 : ಹೊಸ ಐಫೋನ್‌ ಖರೀದಿಗೆ‌ ಮುಗಿಬಿದ್ದ ಜನ – ಈ ಫೋನ್ ನಲ್ಲಿ ಅಂಥಾದ್ದೇನಿದೆ?

ನ್ಯೂಸ್ ಆ್ಯರೋ : ಬಹುನಿರೀಕ್ಷಿತ ಐಫೋನ್ 15 ಸೀರಿಸ್‌ನ ಮಾರಾಟ ಭಾರತದಲ್ಲಿ ಪ್ರಾರಂಭವಾಗಿದ್ದು, ನೂರಾರು ಐಫೋನ್ ಪ್ರಿಯರು ಆ್ಯಪಲ್‌ ಸ್ಟೋರ್‌ಗಳಲ್ಲಿ ಹೊಸ ಫೋನ್‌ ಖರೀದಿಗಾಗಿ ಮುಗಿ ಬಿದ್ದಿದ್ದಾರೆ. ಮುಂಬಯಿ, ದೆಹಲಿಯ ಆ್ಯಪಲ್ ಸ್ಟೋರ್‌ಗಳು ಗ್ರಾಹಕರಿಂದ ತುಂಬಿ ತುಳುಕುತಿತ್ತು.

ಸೆಪ್ಟೆಂಬರ್ 12ರಂದು ಬಿಡುಗಡೆಯಾದ ಐಫೋನ್ 15 ಸೀರಿಸ್ ಗೆ ಸೆಪ್ಟೆಂಬರ್ 15ರಿಂದ ಪ್ರೀ ಬುಕ್ಕಿಂಗ್ ಆರಂಭವಾಗಿತ್ತು. ಭಾರತದ ಐಫೋನ್ 15 ಮಾರಾಟವನ್ನು ಕಾಯುತ್ತಿದ್ದ ಗ್ರಾಹಕರು ಶುಕ್ರವಾರ ಬೆಳಗ್ಗೆಯೇ ಆ್ಯಪಲ್ ಸ್ಟೋರ್‌ಗಳಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಸರತಿಯಲ್ಲಿ ನಿಂತು ಕಾಯುತ್ತಿದ್ದರು.

ಮೊದಲೇ ಬುಕ್‌ ಮಾಡಿದ ಗ್ರಾಹಕರು ಪೂರ್ತಿ ಹಣ ಪಾವತಿ ಮಾಡಿ ಐಫೋನ್‌ 15 ಅನ್ನು ಖರೀದಿಸಿದ್ದಾರೆ. ಆ್ಯಪಲ್‌ ಸ್ಟೋರ್‌ ಗಳಲ್ಲಿ ಗ್ರಾಹಕರ ಜಾತ್ರೆಯೇ ನೆರೆದಿದ್ದು, ಕೆಲವರಂತೂ 17 ಗಂಟೆಗಳಿಗಿಂತಲೂ ಹೆಚ್ಚು ಕಾಲ ಸರತಿಯಲ್ಲಿ ನಿಂತು ಐಫೋನ್‌ 15 ಖರೀದಿಸಿರುವ ಖುಷಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

5 ಬಣ್ಣಗಳಲ್ಲಿ ಪರಿಚಯಿಸಲಾಗಿರುವ ಸದ್ಯ ಐಫೋನ್‌ 15 ಗುಲಾಬಿ, ಹಳದಿ, ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ.

ಐಫೋನ್ 15ರ ದರ 128GB: ₹ 79,900, 256GB: ₹89,900 ಹಾಗೂ 512GB: ₹1,09,900 ನಲ್ಲಿ ಲಭ್ಯವಿದೆ.
ಇನ್ನು ಐಫೋನ್ 15 ಪ್ಲಸ್ 128GB: ₹89,900, 256GB: ₹99,900 ಹಾಗೂ 512GB: ₹1,19,900 ನಲ್ಲಿ ಲಭ್ಯವಾಗುತ್ತಿದೆ.
ಐಫೋನ್​ 15 ಪ್ರೊ 128GB: ₹1,34,900, 256GB: ₹1,44,900, 512GB: ₹1,64,900 ಹಾಗೂ 1TB: ₹1,84,900 ಹಾಗೂ ಐಫೋನ್​ 15 ಪ್ರೊ ಮ್ಯಾಕ್ಸ್​ 256GB: ₹1,59,900, 512GB: ₹1,79,900 ಹಾಗೂ 1TB: ₹1,99,900 ನಲ್ಲಿ ಲಭ್ಯವಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *