
ಸ್ಮಾರ್ಟ್ ವಾಚ್ ಕ್ರೇಜ್ ಇರೋರಿಗೆ ಗುಡ್ ನ್ಯೂಸ್…!! – 2 ಸಾವಿರಕ್ಕೂ ಸ್ಮಾರ್ಟ್ ವಾಚ್ ಸಿಗುತ್ತೆ ; ಇಲ್ಲಿದೆ ನೋಡಿ ಡಿಟೇಲ್ಸ್..
- ಟೆಕ್ ನ್ಯೂಸ್
- November 15, 2023
- No Comment
- 59
ನ್ಯೂಸ್ ಆ್ಯರೋ : ಅನೇಕ ಜನರಿಗೆ ಒಂದಲ್ಲಾ ಒಂದು ರೀತಿಯ ವಿಷಯದಲ್ಲಿ ವಿಶೇಷವಾದ ಆಸಕ್ತಿಯಿರುತ್ತದೆ. ಮಹಿಳೆಯರು ಹೆಚ್ಚಾಗಿ ತಾವು ಧರಿಸುವ ಬಟ್ಟೆಗಳಿಗೆ, ಜ್ಯುವೆಲ್ಲರಿಗಳ ಮೇಲೆ ಇಂಟ್ರೆಸ್ಟ್ ತೋರಿಸಿದರೆ ಗಂಡಸರು ಹೆಚ್ಚಾಗಿ ತಾವು ಧರಿಸುವ ಶೂ, ವಾಹನಗಳ ಮೇಲೆ ಹೆಚ್ಚು ಉತ್ಸುಕರಾಗಿರುತ್ತಾರೆ. ಆದರೆ ಸ್ಮಾರ್ಟ್ ವಾಚ್ ಕ್ರೇಜ್ ಅತ್ಯಂತ ವಿಭಿನ್ನ. ಹೆಣ್ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಸ್ಮಾರ್ಟ್ ವಾಚ್ ಮೇಲೆ ಅತೀ ಹೆಚ್ಚು ಕ್ರೇಜ್ ಹೊಂದಿರುತ್ತಾರೆ.
ಯಾವೆಲ್ಲಾ ಸ್ಮಾರ್ಟ್ ವಾಚ್ ಗಳು ಆನ್ಲೈನ್ ಮಾರುಕಟ್ಟೆಯಲ್ಲಿ ಲಭ್ಯವಿದೆ ಗೊತ್ತಾ..?
ಹ್ಯಾಮರ್ ಮತ್ತು ಐಟೆಲ್ ನಂತಹ ಸ್ಮಾರ್ಟ್ ವಾಚ್ ಗಳು ಅಮೆಜಾನ್ ಮತ್ತು ಫ್ಲಿಫ್ ಕಾರ್ಟ್ ನಲ್ಲಿ ಲಭ್ಯವಿದೆ. ಹ್ಯಾಮೆರ್ ಕ್ವಾನ್ಕರ್ ಸ್ಮಾರ್ಟ್ ವಾಚ್ ಬ್ಲೂಟೂತ್ ಕರೆ, ಹೃದಯಬಡಿತ, ಟ್ರ್ಯಾಕಿಂಗ್ ಸೇರಿದಂತೆ ಹಲವು ಫೀಚರ್ಸ್ ಗಳನ್ನು ಹೊಂದಿದೆ.
ಆನ್ಲೈನ್ ನಲ್ಲಿ ಸಿಗುವ ಸ್ಮಾರ್ಟ್ ವಾಚ್ ಗಳ ವೈಶಿಷ್ಟ್ಯವೇನು ಗೊತ್ತಾ…?
ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಅಗ್ಗವಾಗಿ ಖರೀದಿಸಲು ಅವಕಾಶವಿದೆ. ಬ್ಲೂಟೂತ್ ಕರೆ ಮಾಡುವಂತಹ ವಿಶೇಷ ಲಕ್ಷಣಗಳನ್ನು ಕೂಡಾ ಇದರಲ್ಲಿ ನೋಡಬಹುದು.
- ಅಮೆಝ್ ಫಿಟ್ ನಿಯೋ : ಈ ಸ್ಮಾರ್ಟ್ ವಾಚ್ ನಲ್ಲಿ 4 ನೇವಿಗೇಷನ್ ಬಟನ್ ಗಳನ್ನು ನೀಡಲಾಗಿದೆ. ಇದು 24*7 ಹೃದಯ ಬಡಿತ ಮಾನಿಟರಿಂಗ್, ಸ್ಲೀಪ್ , REM ಓಟ, ವಾಕಿಂಗ್ ಮಾಹಿತಿಯನ್ನು ನೀಡುತ್ತದೆ. ಇದರ ಬೆಲೆ ಕೇವಲ 2499ರೂ.
- ಐಟೆಲ್ ಸ್ಮಾರ್ಟ್ ವಾಚ್: 2 ಅಲ್ಟ್ರಾ 2ಇಂಚಿನ ಐಪಿಎಸ್ ಡಿಸ್ಪ್ಲೇಯನ್ನು ಇದು ಹೊಂದಿದೆ. ಅಂತರ್ನಿರ್ಮಿತ ಮೈಕ್ರೋಫೋನ್ ಮತ್ತು ಸ್ಪೀಕರ್ ನ್ನು ಕೂಡಾ ಇದು ಹೊಂದಿದೆ. ಈ ವಾಚ್ 12 ದಿನಗಳ ಬ್ಯಾಟರಿ ಬಾಳಿಕೆ ಹೊಂದಿದೆ. ಇದರಲ್ಲಿ ಬ್ಲೂಟೂತ್ ಕಾಲಿಂಗ್ ಫೀಚರ್ ಕೂಡಾ ನೀಡಲಾಗಿದೆ. ಕ್ಯಾಮೆರಾ ಮತ್ತು ಸಂಗೀತ ನಿಯಂತ್ರಕವನ್ನು ಇದರಲ್ಲಿ ಅಳವಡಿಸಲಾಗಿದೆ. ಅಲ್ಲದೆ ಮೆಸೇಜ್ ನೊಟಿಫಿಕೇಶನ್ ಬರುತ್ತೆ. ವಾಚ್ ಖರೀದಿಗಾಗಿ 1ವರ್ಷದ ವಾರೆಂಟಿ ಕೂಡಾ ನೀಡಲಾಗುತ್ತದೆ. ಇದರ ಬೆಲೆ ಕೇವಲ 2099 ರೂ.
- ಕ್ವಾನ್ಕರ್ ಸ್ಮಾರ್ಟ್ ವಾಚ್ : ಇದು 320* 385 ರೆಸಲ್ಯೂಷನ್ ಬೆಂಬಲವನ್ನು ಹೊಂದಿದೆ. ಇದು ಕೂಡಾ ಹೃದಯಬಡಿತ, ರಕ್ತದೊತ್ತಡ, ನಿದ್ರೆಯ ಮೇಲ್ವಿಚಾರಣೆಯ ವೈಶಿಷ್ಟ್ಯವನ್ನು ಹೊಂದಿದೆ. ಇದು ವಾಚ್ ಫೇಸ್, A1 ಧ್ವನಿ ಸಹಾಯಕ, ಹವಾಮಾನ ನವೀಕರಣ, ಸಂಗೀತ ನಿಯಂತ್ರಣವನ್ನು ಹೊಂದಿದೆ. ಇದರ ಬೆಲೆ ಕೇವಲ 2299ರೂ.