Subrata Roy : ಸಹಾರಾ ಗ್ರೂಪ್ ಸ್ಥಾಪಕ ಸುಬ್ರತಾ ರಾಯ್ ವಿಧಿವಶ – ದೇಶದ ಅತಿದೊಡ್ಡ ಕಂಪನಿ ಕಟ್ಟಿಬೆಳೆಸಿದ ಉದ್ಯಮಿ ಇನ್ನಿಲ್ಲ..

Subrata Roy : ಸಹಾರಾ ಗ್ರೂಪ್ ಸ್ಥಾಪಕ ಸುಬ್ರತಾ ರಾಯ್ ವಿಧಿವಶ – ದೇಶದ ಅತಿದೊಡ್ಡ ಕಂಪನಿ ಕಟ್ಟಿಬೆಳೆಸಿದ ಉದ್ಯಮಿ ಇನ್ನಿಲ್ಲ..

ನ್ಯೂಸ್ ಆ್ಯರೋ‌ : ದಶಕಗಳ ಹಿಂದೆ ಹಲವು ವರ್ಷಗಳ ಕಾಲ ಟೀಂ ಇಂಡಿಯಾದ ಪ್ರಾಯೋಜಕತ್ವ ಹೊಂದಿದ್ದ ಸಹಾರಾ ಗ್ರೂಪ್ ನ ಸ್ಥಾಪಕ ಸುಬ್ರತಾ ರಾಯ್‌(75) ( Subrata Roy ) ದೀರ್ಘಕಾಲದ ಅನಾರೋಗ್ಯದಿಂದ ಮುಂಬೈನಲ್ಲಿ ನಿಧನರಾಗಿದ್ದಾರೆ.

ರಾಯ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಭಾನುವಾರ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ (ಕೆಡಿಎಎಚ್) ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ನಿಧನ ಹೊಂದಿದ್ದಾರೆ.

ಈ ಕುರಿತಂತೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಸಹಾರಾ ಇಂಡಿಯಾ ಪರಿವಾರ್ ( Sahara India Pariwar ), ನಮ್ಮ ಗೌರವಾನ್ವಿತ ‘ಸಹರಾಶ್ರೀ’ ಸುಬ್ರತಾ ರಾಯ್ ಸಹಾರಾ ಅವರ ನಿಧನದ ಬಗ್ಗೆ ಸಹಾರಾ ಇಂಡಿಯಾ ಪರಿವಾರ್ ತೀವ್ರ ದುಃಖದಿಂದ ತಿಳಿಸುತ್ತಿದೆ. ಸ್ಪೂರ್ತಿದಾಯಕ ನಾಯಕ ಮತ್ತು ದೂರದೃಷ್ಟಿಯ ಸಹರಾಶ್ರೀ ಜಿ ಅವರು ಮೆಟಾಸ್ಟಾಟಿಕ್ ಕ್ಯಾನ್ಸರ್, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಉಂಟಾಗುವ ತೊಡಕುಗಳೊಂದಿಗೆ ದೀರ್ಘಕಾಲದ ಹೋರಾಟದ ನಂತರ ಹೃದಯ ಸ್ತಂಭನದಿಂದಾಗಿ 2023 ರ ನವೆಂಬರ್ 14 ರಂದು ರಾತ್ರಿ 10.30 ಕ್ಕೆ ನಿಧನರಾದರು ಎಂದು ತಿಳಿಸಿದೆ.

ಸಹಾರಾ ಗ್ರೂಪ್ ಸಂಸ್ಥಾಪಕ ಸುಬ್ರತಾ ರಾಯ್ ಅವರಿಗೆ ಪತ್ನಿ ಸ್ವಪ್ನಾ ರಾಯ್ ಮತ್ತು ಇಬ್ಬರು ಪುತ್ರರಾದ ಸುಶಾಂತೋ ರಾಯ್ ಮತ್ತು ಸೀಮಂತೋ ರಾಯ್ ಇದ್ದಾರೆ.

ಜೂನ್ 10, 1948 ರಂದು ಬಿಹಾರದ ಅರಾರಿಯಾದಲ್ಲಿ ಜನಿಸಿದ ಸುಬ್ರತಾ ರಾಯ್ ಹಣಕಾಸು, ರಿಯಲ್ ಎಸ್ಟೇಟ್, ಮಾಧ್ಯಮ ಮತ್ತು ಆತಿಥ್ಯ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ವ್ಯಾಪಿಸಿದ ವಿಶಾಲ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಗೋರಖ್‌ಪುರದ ಸರ್ಕಾರಿ ತಾಂತ್ರಿಕ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಾಂಗ ಮಾಡಿದ್ದರು. 1976 ರಲ್ಲಿ, ರಾಯ್ ಅವರು ಆರ್ಥಿಕ ಒತ್ತಡದಲ್ಲಿದ್ದ ಸಹಾರಾ ಫೈನಾನ್ಸ್ ಎಂಬ ಚಿಟ್ ಫಂಡ್ ಕಂಪನಿಯನ್ನು ಖರೀದಿಸಿದರು.

1978 ರ ಹೊತ್ತಿಗೆ ಅದು ಸಹಾರಾ ಇಂಡಿಯಾ ಪರಿವಾರ್ ಆಗಿ ಸುಧಾರಣೆಯಾಯಿತು. ಅದರ ನಂತರ ಅವರು ವ್ಯವಹಾರವನ್ನು ಹಣಕಾಸು, ರಿಯಲ್ ಎಸ್ಟೇಟ್, ಮಾಧ್ಯಮ ಹೀಗೆ ಕಂಪನಿಯನ್ನು ವಿಸ್ತರಿಸಿದರು. 1992 ರಲ್ಲಿ, ರಾಷ್ಟ್ರೀಯ ಸಹಾರಾ ಮತ್ತು ಸಹಾರಾ ಟಿವಿ ಚಾನೆಲ್ ಎಂಬ ಸುದ್ದಿ ಪತ್ರಿಕೆಯನ್ನು ಪ್ರಾರಂಭಿಸಲಾಯಿತು. ಕೆಲವು ವರ್ಷಗಳಿಂದ ಸಹಾರಾ ಟಿವಿಯನ್ನು ಸಹಾರಾ ಒನ್ ಎಂದು ಬದಲಾಯಿಸಲಾಯಿತು.

2010 ರಲ್ಲಿ, ರಾಯ್ ಲಂಡನ್‌ನ ಗ್ರೋಸ್ವೆನರ್ ಹೌಸ್ ಹೋಟೆಲ್ ಮತ್ತು 2012 ರಲ್ಲಿ ನ್ಯೂಯಾರ್ಕ್‌ನ ಪ್ಲಾಜಾ ಹೋಟೆಲ್ ಅನ್ನು ಖರೀದಿಸಿದರು. 2000 ರ ದಶಕದಲ್ಲಿ, ಸಹಾರಾ ಇಂಡಿಯಾ ಪರಿವಾರ್ 1.2 ಮಿಲಿಯನ್ ಉದ್ಯೋಗಿಗಳನ್ನು ಹೊಂದಿತ್ತು. ಸಹಾರಾ ಗ್ರೂಪ್ ದೇಶದಲ್ಲಿ ರೈಲ್ವೆ ನಂತರ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿ ಎಂದು ಗುರುತಿಸಲ್ಪಟ್ಟಿದೆ. ಕೇವಲ ರೂ. 2 ಸಾವಿರ ಬಂಡವಾಳದಲ್ಲಿ ಸಹಾರಾ ಆರಂಭಿಸಿ ದೇಶದಲ್ಲೇ ಮುಂಚೂಣಿಯಲ್ಲಿದ್ದೇವೆ ಎಂದು ಕಂಪನಿ ಹೇಳಿದೆ. ಆದರೆ ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂಪಾಯಿ ಹಿಂದಿರುಗಿಸಲು ವಿಫಲವಾಗಿದ್ದ ಹಿನ್ನೆಲೆಯಲ್ಲಿ ಅವರು ಹಲವು ವರ್ಷ ಜೈಲಿನಲ್ಲಿಯೂ ಇದ್ದರು.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *