ಕದ್ದುಮುಚ್ಚಿ ಶಾಪಿಂಗ್ ಮಾಲ್ ನಲ್ಲೇ ಆರು ತಿಂಗಳು ವಾಸವಿದ್ದನಂತೆ ಈ ಭೂಪ..! – ಇವನ ಕಥೆ ಕೇಳಿ‌ ಭದ್ರತಾ ಸಿಬ್ಬಂದಿಯೇ ಶಾಕ್ ಆದ್ರು..!!

ಕದ್ದುಮುಚ್ಚಿ ಶಾಪಿಂಗ್ ಮಾಲ್ ನಲ್ಲೇ ಆರು ತಿಂಗಳು ವಾಸವಿದ್ದನಂತೆ ಈ ಭೂಪ..! – ಇವನ ಕಥೆ ಕೇಳಿ‌ ಭದ್ರತಾ ಸಿಬ್ಬಂದಿಯೇ ಶಾಕ್ ಆದ್ರು..!!

ನ್ಯೂಸ್ ಆ್ಯರೋ : ಮಾಲ್ ಗಳೆಂದರೆ ಕೇವಲ ಶಾಪಿಂಗ್, ಮನೋರಂಜನೆಗೆ ಮಾತ್ರ ಎಂದುಕೊಂಡರೆ ತಪ್ಪು. ಯಾಕೆಂದರೆ ಇಲ್ಲೊಬ್ಬ ಭೂಪ ಶಾಪಿಂಗ್ ಮಾಲ್ ಅನ್ನೇ ತನ್ನ ವಾಸಸ್ಥಾನವಾಗಿ ಮಾಡಿಕೊಂಡಿದ್ದ. ಅದೂ ಕಳೆದ ಆರು ತಿಂಗಳಿನಿಂದ…!!

ಎಷ್ಟೇ ಭದ್ರತೆ ಇದ್ದರೂ ಸಣ್ಣಪುಟ್ಟ ಲೋಪಗಳು ಆಗೇ ಆಗುತ್ತೆ. ಅದಕ್ಕೆ ಇದು ಉತ್ತಮ ಉದಾಹರಣೆ. ಇತ್ತೀಚೆಗೆ ಹಳ್ಳಿ ಹಳ್ಳಿಗಳಲ್ಲೂ ಶಾಪಿಂಗ್ ಮಾಲ್ ಗಳು ತೆರೆಯುತ್ತಿವೆ. ಅಗತ್ಯ ಸಾಮಗ್ರಿ, ತರಕಾರಿ, ಹಾಲು, ಹಣ್ಣು, ದಿನಸಿ.. ಹೀಗೆ ಎಲ್ಲ ವಸ್ತುಗಳು ಒಂದೇ ಕಡೆ ಸಿಗುವುದರಿಂದ ಮಾಲ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಹೆಚ್ಚಿನವರು ಸುತ್ತಾಡಲೆಂದೇ ಮಾಲ್ ಗಳಿಗೆ ಬರುತ್ತಾರೆ. ಅಲ್ಲಿ ಇಲ್ಲಿ ಸುತ್ತಾಡಿ, ಸ್ವಲ್ಪ ಶಾಪಿಂಗ್ ಮಾಡಿ, ಫೋಟೋ ಕ್ಲಿಕ್ಕಿಸಿಕೊಂಡು ಎಲ್ಲರೂ ಮನೆಗೆ ಹೋದರೆ ಈತ ಮಾತ್ರ ಮಾಲ್ ನೊಳಗೆ ಮನೆ ಮಾಡಿ ಕುಳಿತಿದ್ದ.

ಸಾವಿರಾರು ಮಂದಿ ಬಂದು ಹೋಗುವವರಲ್ಲಿ ಯಾರು ಒಳಗೆ ಬಂದರು, ಹೊರಗೆ ಹೋದರು ಎನ್ನುವುದನ್ನು ಭದ್ರತಾ ಸಿಬ್ಬಂದಿಗೂ ನೆನಪಿಟ್ಟುಕೊಳ್ಳುವುದು ಕಷ್ಟ. ಜೊತೆಗೆ ಮಾಲ್ ಗಳ ಒಳಗೆ ಹೋಗಲು ಒಂದೇ ದಾರಿ ಇದ್ದರೂ ಹೊರ ಬರಲು ನಾಲ್ಕೈದು ದಾರಿಗಳಿರುತ್ತವೆ. ಹೀಗಾಗಿ ಮಾಲ್ ಒಳಗೆ ಬಂದವರು ಹೊರಹೋಗಿದ್ದಾರೋ ಇಲ್ಲವೋ ಎಂದು ಹೇಳುವುದು ಕಷ್ಟ.

ಚೀನಾದಲ್ಲಿ ವ್ಯಕ್ತಿಯೊಬ್ಬ ಮಾಲ್ ನೊಳಗೆ ಬಂದು ಅಲ್ಲೇ ಆರು ತಿಂಗಳ ಕಾಲ ವಾಸ ಮಾಡಿದ್ದ. ಮೆಟ್ಟಿಲುಗಳ ಕೆಳಗೆ ಶಾಪಿಂಗ್ ಸೆಂಟರ್‌ನ ಔಟ್‌ಲೆಟ್ ನೊಳಗೆ ಟೆಂಟ್ ಹಾಕಿ ಅಲ್ಲೇ ಒಂದು ಮೇಜು, ಕುರ್ಚಿ, ಕಂಪ್ಯೂಟರ್ ಇಟ್ಟುಕೊಂಡು ವಾಸ ಮಾಡುತ್ತಿದ್ದ. ಕಳೆದ 6 ತಿಂಗಳಿಂದ ಅಲ್ಲಿಯೇ ತನ್ನಎಲೆಕ್ಟ್ರಾನಿಕ್ ವಸ್ತುಗಳನ್ನು ಚಾರ್ಜ್ ಕೂಡ ಮಾಡುತ್ತಿದ್ದ.

ಕೆಲವು ತಿಂಗಳ ಹಿಂದೆ ಆತನನ್ನು ನೋಡಿದ್ದ ಭದ್ರತಾ ಸಿಬ್ಬಂದಿ ಪ್ರಶ್ನಿಸಿದ್ದಾರೆ. ಆಗ ಆತ ತಾನು ಓದಲು ಶಾಂತವಾದ ಸ್ಥಳ ಹುಡುಕುತ್ತಿದ್ದು ಇದು ಪ್ರಶಸ್ತವಾಗಿದೆ ಎಂದು ಹೇಳಿದ್ದ. ಹೀಗಾಗಿ ಅವನಿಗೆ ಅಲ್ಲೇ ಉಳಿಯಲು ಅವಕಾಶ ನೀಡಲಾಯಿತು ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ಆದರೆ ಇದು ಮುಖ್ಯ ಭದ್ರತಾ ಸಿಬ್ಬಂದಿ ಗಮನಕ್ಕೆ ಬಂದ ತಕ್ಷಣ ಅವರು ಆತನ ಟೆಂಟ್ ಅನ್ನು ತೆರವುಗೊಳಿಸಿದ್ದಾರೆ.

ಈ ರೀತಿ ಇಲ್ಲಿ ನಡೆದಿರುವುದು ಇದೇ ಮೊದಲು ಅಲ್ಲ. 2007 ರಲ್ಲೂ ಒಂದು ಘಟನೆ ನಡೆದಿತ್ತು. ರೋಡ್ ಐಲ್ಯಾಂಡ್ ಶಾಪಿಂಗ್ ಮಾಲ್‌ನಲ್ಲಿ ಕಲಾವಿದ ಮೈಕೆಲ್ ಟೌನ್ಸೆಂಡ್ ಎಂಬಾತ ನಾಲ್ಕು ವರ್ಷಗಳನ್ನು ಕಳೆದಿದ್ದ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *